ETV Bharat / entertainment

ಶಾರುಖ್​ ಖಾನ್​ ಮೇಲೆ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ ಅಭಿಮಾನಿ.. ಕಾರಣ ಏನು? - ETV Bharath Kannada news

ಟ್ವಿಟ್ಟರ್​ನಲ್ಲಿ ಅಭಿಮಾನಿಗಳೊಂದಿಗೆ ಶಾರುಕ್​ ಖಾನ್​ ಸಂವಾದ - askSRK ಎಂಬ ಹ್ಯಾಷ್​ಟ್ಯಾಗ್ ಅಡಿಯಲ್ಲಿ ಅಭಿಮಾನಿಗಳಿಗೆ ಉತ್ತರ- ಕಿಂಗ್​ಖಾನ್​ ವಯಸ್ಸಿನ ಕುರಿತು ಹಾಸ್ಯಚಟಾಕಿ ಹಾರಿಸಿದ ಫ್ಯಾನ್​

shah rukh khan
ಶಾರುಖ್​ ಖಾನ್
author img

By

Published : Feb 21, 2023, 11:01 AM IST

ಮುಂಬೈ: ಬಾಲಿವುಡ್​ ಚಿತ್ರರಂಗಕ್ಕೆ ಪಠಾಣ್​ ಸಿನಿಮಾ ಮರು ಚೇತರಿಕೆ ನೀಡಿದೆ ಎಂದರೆ ತಪ್ಪಾಗಲಾರದು. ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಿಡುಗಡೆಯಾಗಿ ತಿಂಗಳ ನಂತರವೂ ಥಿಯೇಟರ್​ಗಳಲ್ಲಿ ಜನ ಮನ್ನಣೆ ಪಡೆಯುತ್ತದೆ. ಮತ್ತೆ ಶಾರುಖ್​ ಖಾನ್​ ಬಾಲಿವುಡ್​ ಬಾದ್​ ಶಾ ಎಂಬುದನ್ನು ಪ್ರೂವ್​ ಮಾಡಿದ್ದಾರೆ. ಪಠಾಣ್​ ಸಿನಿಮಾದ ಯಶಸ್ಸಿನಲ್ಲಿರುವ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಖ್ಯಾತರಾಗಿರುವ ಶಾರುಖ್ ಅವರು​ ತಮ್ಮ ಅಭಿಮಾನಿಗಳ ಜೊತೆ ಟ್ವಿಟರ್​ನಲ್ಲಿ ಸಂವಾದ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್​ ಇರುವ ಖಾನ್​ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ್ದಾರೆ. ಈ ವೇಳೆ ಒಬ್ಬ ಅಭಿಮಾನಿ ಶಾರುಖ್​ ಖಾನ್​ ಮೇಲೆ ಎಫ್​ಐಆರ್​ ಹಾಕುವುದಾಗಿ ಹೇಳಿದ್ದಾರೆ.

  • Please mat karo yaar. Theek hai main hi maan jaata hoon I am 30 years old. There I have now told you the truth..and that’s why, even my next film is called Jawan https://t.co/rIH1lnsAWm

    — Shah Rukh Khan (@iamsrk) February 20, 2023 " class="align-text-top noRightClick twitterSection" data=" ">

ಖಾನ್​ ವಿರುದ್ಧ ಎಫ್​ಐಆರ್​: ಅರೆ ಅಭಿಮಾನಿ ಏಕೆ ತನ್ನ ನೆಚ್ಚಿನ ನಟನ ಮೇಲೆ ಎಫ್​​ಐಆರ್​ ದಾಖಲಿಸುತ್ತಾರೆ ಎಂದೆನಿಸುವುದು ಸಾಮಾನ್ಯ.. ಆದರೆ ಅದಕ್ಕೆ ಕಾರಣವೇ ಬೇರೆ ಇದೆ. ಪಠಾಣ್ ಚಿತ್ರಕ್ಕಾಗಿ ಶಾರುಖ್​ ತಮ್ಮ ದೇಹವನ್ನು ದಂಡಿಸಿದ್ದಾರೆ. ತಮ್ಮ 57ನೇ ವಯಸ್ಸಿನಲ್ಲಿಯೂ ಸಿನಿಮಿಮಾಕ್ಕಾಗಿ ಹೆಚ್ಚಿನ ಡೆಡಿಕೇಶನ್ ತೋರಿಸಿರುವ ಕಿಂಗ್​ ಖಾನ್​ ಸಿಕ್ಸ್​ ಪ್ಯಾಕ್​ ಮಾಡಿಕೊಂಡಿದ್ದಾರೆ. ಈ ರೀತಿ ಫಿಟ್​ ಆಗಿ ಕಾಣುತ್ತಿರುವ ಶಾರುಖ್​ ಅವರ ವಯಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದೇ ರೀತಿ ಖಾನ್​ ಕೂಡ ತಮ್ಮ ವಯಸ್ಸು 57 ಎಂದು ಹೇಳಿಕೊಳ್ಳುತ್ತಾರೆ.

ಶಾರುಖ್​ ಖಾನ್​ ಈ ರೀತಿ ತಮಗೆ ವಯಸ್ಸಾಗಿದೆ ಎಂದು ಹೇಳಿಕೊಳ್ಳುವ ಬಗ್ಗೆ ಅಭಿಮಾನಿ ಬೇಸರ ವ್ಯಕ್ತಪಡಿಸಿ ಇನ್ನೊಮ್ಮೆ ವಯಸ್ಸಾಗಿದೆ ಎಂದು ಹೇಳಿದರೆ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಪಠಾಣ್​ ಹೀರೋ, "ದಯವಿಟ್ಟು ಬೇಡ, ನಾನು ನನ್ನ ವಯಸ್ಸನ್ನು 30 ಎಂದು ಹೇಳುತ್ತೇನೆ. ಮುಂದಿನ ಸಿನಿಮಾವನ್ನು ಜವಾನ್​ (ಹರೆಯ)" ಎಂದೇ ಮಾಡುತ್ತೇನೆ ಎಂದಿದ್ದಾರೆ.

ವೈವಾಹಿಕ ಜೀವನದ ರಹಸ್ಯ ಬಿಚ್ಚಿಟ್ಟ ಖಾನ್​: ನಿಮ್ಮ ಉತ್ತಮ ವೈವಾಹಿಕ ಜೀವನದ ರಹಸ್ಯವೇನು ಎಂದು ಅಭಿಮಾನಿಯೊಬ್ಬರು ಕೇಳಿದರು? ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್ ಖಾನ್, 'ಗೌರಿ ಖಾನ್​ ಅವರ ಹೃದಯ ಮತ್ತು ಮನಸ್ಸು ತುಂಬಾ ಸರಳವಾಗಿದೆ. ಪ್ರೀತಿ, ಕುಟುಂಬ ಮತ್ತು ಒಳ್ಳೆಯದನ್ನು ನಂಬಲು ಅವಳು ನಮಗೆ ಕಲಿಸಿದ್ದಾಳೆ' ಎಂದು ತಮ್ಮ ಅಭಿಮಾನಿಗೆ ಹೇಳಿದ್ದಾರೆ.

  • Gauri has the most simple heart and mind. She has just kept us all believing in the goodness of family and love https://t.co/nZV3CbGPxU

ಶಾರುಖ್ ಖಾನ್ ಅದೃಷ್ಟ ಸಂಖ್ಯೆ ಎಷ್ಟು ಗೊತ್ತಾ?: ಅಭಿಮಾನಿಯೊಬ್ಬರು ನಿಮ್ಮ ಅದೃಷ್ಟ ಸಂಖ್ಯೆ ಏನು ಎಂದು ಕೇಳಿದರು, ಅದಕ್ಕೆ 'ಕಿಂಗ್ ಆಫ್ ರೋಮ್ಯಾನ್ಸ್', 'ಈಗ 1000 ಕೋಟಿ ರೂ.ಗಿಂತ ಹೆಚ್ಚು' ಎಂದು ಉತ್ತರಿಸಿದ್ದಾರೆ. ಪಠಾಣ್ ಚಿತ್ರದ 1000 ಕೋಟಿ ಕಲೆಕ್ಷನ್ ಬಗ್ಗೆ ಶಾರುಖ್ ಖಾನ್ ಹೀಗೆ ಹೇಳಿಕೊಂಡಿದ್ದಾರೆ.

ಹೇರ್​ ಕಟ್​ ಮಾಡಿಸಿಕೊಳ್ಳಲಾ ಎಂದು ಕೇಳಿದ ಅಭಿಮಾನಿ: askSRK ಸೆಶನ್​ನಲ್ಲಿ ಖಾನ್​ ಅವರ ಅಪ್ಪಟ ಅಭಿಮಾನಿ ಒಬ್ಬ"ನಾಲ್ಕು ವರ್ಷದಿಂದ ಕ್ಷೌರ ಮಾಡಿಸದೇ, ದಾಡಿ ತೆಗೆಯದೇ ನಿಮ್ಮ ಯಶಸ್ಸಿಗಾಗಿ ಕಾಯುತ್ತಿದ್ದೆ. ಇನ್ನಾದರೂ ನಾನು ಹೇರ್​ ಕಟ್​ ಮಾಡಿಸಬಹುದಾ ಎಂದು ಪ್ರಶ್ನಿಸಿದ್ದಾನೆ". ನಾಲ್ಕು ವರ್ಷದಿಂದ ಶಾರುಖ್​ ಖಾನ್​ ಅವರ ಬಿಗ್​ ಹಿಟ್​ ಸಿನಿಮಾಗಳು ಬಂದಿರಲಿಲ್ಲ. ಈ ಹಿನ್ನೆಲೆ ಅಭಿಮಾನಿ ಈ ರೀತಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಎಸ್​ಆರ್​ಕೆ "ನಾನು ಹೇರ್​ ಕಟ್​ ಮಾಡಿಸಿದ್ದೇನೆ, ನೀನು ಕ್ಷೌರ ಮಾಡಿಸು" ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಸೆಲ್ಫಿ ನಿರಾಕರಿಸಿದ್ದಕ್ಕೆ ಸೋನು ನಿಗಮ್​ ಮೇಲೆ ಹಲ್ಲೆ: ದೂರು ನೀಡಿದ ಗಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.