ETV Bharat / entertainment

ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿರೋ ತ್ರಿವಿಕ್ರಮ ಚಿತ್ರ ತಂಡ - Trivikrama ravichandrans son vikrams movie

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಅಭಿನಯಿಸಿರುವ ತ್ರಿವಿಕ್ರಮ ಸಿನಿಮಾ ಜೂನ್ 24 ರಂದು ಬಿಡುಗಡೆಗೊಳ್ಳಲಿದೆ.

trivikram-kannada-cinema-release-date-announced
ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿರೋ ತ್ರಿವಿಕ್ರಮ ಚಿತ್ರ ತಂಡ
author img

By

Published : Jun 13, 2022, 9:49 PM IST

ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಪುತ್ರ ವಿಕ್ರಮ್ ಅಭಿನಯಿಸಿರುವ ಚೊಚ್ಚಲ ಸಿನಿಮಾ ತ್ರಿವಿಕ್ರಮ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್ ಹಾಗು ಹಾಡುಗಳಿಂದ ಸುದ್ದಿಯಾಗಿರೋ ಸಿನಿಮಾದ ಬಿಡುಗಡೆಗೂ ಮುನ್ನ ಚಿತ್ರತಂಡ ಉತ್ತರ ಕರ್ನಾಟಕ ಪ್ರೇಕ್ಷಕರನ್ನು ಭೇಟಿಯಾಗಲು ಯೋಜನೆ ರೂಪಿಸಿದೆ.

ಜೂನ್ 13 ರಂದು ದಾವಣಗೆರೆಯಿಂದ ಪ್ರಯಾಣ ಆರಂಭಿಸಲಿದ್ದು, 14ರಂದು ಹುಬ್ಬಳ್ಳಿ-ಧಾರವಾಡ, 15 ರಂದು ಬೆಳಗಾವಿ ಹಾಗೂ 16ರಂದು ಬಳ್ಳಾರಿ ಮತ್ತು ಹೊಸಪೇಟೆಯ ಪ್ರಮುಖ ಸ್ಥಳಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಮಂಡ್ಯ, ಮದ್ದೂರು ಹಾಗೂ ಮೈಸೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಯೋಜನೆಯನ್ನು ಚಿತ್ರತಂಡ ರೂಪಿಸಿದೆ.

trivikram-kannada-cinema-release-date-announced

ಜೂನ್ 19ರಂದು ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ನಾನಾ ಭಾಷೆಯ ತಾರೆಯರು ಆಗಮಿಸುವ ನಿರೀಕ್ಷೆಯಿದೆ. ಅದೇ ವೇದಿಕೆಯಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ.

ಸದ್ಯ ಬಿಡುಗಡೆಯಾಗಿರುವ ಹಾಡುಗಳು ಮತ್ತು ಸಣ್ಣ ಟೀಸರ್‌ನಲ್ಲಿ ವಿಕ್ರಮ್ ರವಿಚಂದ್ರನ್ ನಟನೆ ಮತ್ತು ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ವಿಕ್ರಮ್‌ಗೆ ಜೊತೆಯಾಗಿ ಆಕಾಂಕ್ಷಾ ಶರ್ಮಾ ಅಭಿನಯಿಸಿದ್ದು, ಇವರ ಜೊತೆಗೆ ಹಿರಿಯ ನಟಿ ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ರೋಜ್, ಮಾಸ್ ಲೀಡರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಹನಾ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಚಿತ್ರವನ್ನು ರಾಮ್ಕೋ ಸೋಮಣ್ಣ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಬಳಿಕ ಈ ನಟ‌ನ‌ ಜೊತೆ ಹ್ಯಾಟ್ರಿಕ್ ಹೀರೋಗೆ ಅಭಿನಯಿಸುವ ಆಸೆಯಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.