ETV Bharat / entertainment

ನ. 25ಕ್ಕೆ ಬಿಡುಗಡೆಯಾಗಲಿದೆ 'ತ್ರಿಬಲ್ ರೈಡಿಂಗ್'.. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಂತಿದ್ದಾರೆ ಗೋಲ್ಡನ್​ ಸ್ಟಾರ್ - Twinkle Twinkle Little Star Song

'ತ್ರಿಬಲ್ ರೈಡಿಂಗ್' ಸಿನಿಮಾದ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಸಾಂಗ್ ರಿಲೀಸ್ ಆಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

Triple riding release date announced
ತ್ರಿಬಲ್ ರೈಡಿಂಗ್ ಬಿಡುಗಡೆ ದಿನಾಂಕ
author img

By

Published : Nov 8, 2022, 1:41 PM IST

ಗಾಳಿಪಟ 2 ಸಿನಿಮಾ ಸಕ್ಸಸ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮೂವರು ಸುಂದರಿಯರ ಜೊತೆ ತ್ರಿಬಲ್ ರೈಡಿಂಗ್ ಹೊರಟಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಹಾಡು, ಟೈಟಲ್​​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರದ ಮತ್ತೊಂದು ಹಾಡನ್ನು ಚಿತ್ರತಂಡ ಸೋಮವಾರ ಬಿಡುಗಡೆ ಮಾಡಿದೆ. ಜೊತೆಗೆ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

'ತ್ರಿಬಲ್ ರೈಡಿಂಗ್' ಸಿನಿಮಾದ 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್' ಹಾಡನ್ನು ಬರೋಬ್ಬರಿ ಒಂದು ಮಿಲಿಯನ್ ಜನರು ನೋಡಿ ಫಿದಾ ಆಗಿದ್ದಾರೆ. ಸಾಹಿತಿ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡನ್ನು ಗಾಯಕ ವಿಜಯ್​ ಪ್ರಕಾಶ್ ಸಖತ್ ಜೋಶ್​​ನಿಂದ ಹಾಡಿದ್ದು, ಸಾಯಿ ಕಾರ್ತಿಕ್ ಸಂಗೀತಕ್ಕೆ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Triple riding release date announced
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಸಾಂಗ್ ರಿಲೀಸ್

ಅಂದ ಹಾಗೆ ತ್ರಿಬಲ್ ರೈಡಿಂಗ್ ಔಟ್ ಅಂಡ್ ಔಟ್ ಕಾಮಿಡಿ ಜೊತೆ ಲವ್ ಸ್ಟೋರಿ ಆಧರಿಸಿರೋ ಚಿತ್ರ. ಚಿತ್ರತಂಡ ಈ ಮೊದಲೇ ಚಿತ್ರದ ಕೊನೆಯ 20 ನಿಮಿಷ ನಿಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೇವೆಂದು ಭರವಸೆ ನೀಡಿದೆ. ಚಿತ್ರತಂಡ ತಿಳಿಸಿದಂತೆ ಈ ಸಿನಿಮಾ ಯಶಸ್ವಿಯಾದರೆ, ಗಣೇಶ್ ಸೂಪರ್ ಹಿಟ್​ ಸಿನಿಮಾಗಳ ಪಟ್ಟಿ ಸೇರಲಿದೆ ತ್ರಿಬಲ್ ರೈಡಿಂಗ್.

ಇನ್ನೂ ನಟಿ ರಚನಾ ಇಂದರ್, ನಟಿ ಮೇಘಾ ಶೆಟ್ಟಿ ಮತ್ತು ನಟಿ ಆದಿತಿ ಪ್ರಭುದೇವ ಚೆಲುವೆಯರಿಗೆ ತ್ರಿಬಲ್ ರೈಡಿಂಗ್ ತುಂಬಾನೇ ವಿಶೇಷವಾದ ಸಿನಿಮಾ. ಯಾಕಂದ್ರೆ ಮೂವರು ಇದೇ ಮೊದಲ ಬಾರಿ ಗಣೇಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆನ್ ಸ್ಕ್ರೀನ್ & ಆಫ್ ಸ್ಕ್ರೀನ್ ಸಿಕ್ಕಾಪಟ್ಟೆ ಎಂಜಾಯ್ ಮಾಡುವ ಮೂಲಕ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: 'ಚಕ್ಡಾ ಎಕ್ಸ್‌ಪ್ರೆಸ್‌'ನಲ್ಲಿ ಅನುಷ್ಕಾ ಶರ್ಮಾ: ಅಂತಿಮ ಹಂತದಲ್ಲಿದೆ ಜೂಲನ್ ಬಯೋಪಿಕ್‌

ಮಹೇಶ್ ಗೌಡ ಈ ಚಿತ್ರದ ಸೂತ್ರಧಾರ. ಅನೇಕ ವರ್ಷಗಳಿಂದ ಗಣೇಶ್​ಗೆ ಚೆಂದದ ಸಿನಿಮಾ ಮಾಡಬೇಕೆಂಬ ಕನಸು ಕಂಡಿದ್ದ ಮಹೇಶ್ ಗೌಡ ಕೊನೆಗೂ ತಮ್ಮ ಕನಸನ್ನು ಈ ಸಿನಿಮಾ ಮೂಲಕ ನನಸು ಮಾಡಿಕೊಂಡಿದ್ದಾರೆ. ಅನ್ ಲಿಮಿಟೆಡ್ ಫನ್ ಇರುವ ಸಿನಿಮಾವನ್ನು ನಿಮ್ಮ ಮುಂದೆ ಶೀಘ್ರದಲ್ಲೇ ಇಡಲಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚು ಒಲವು ಹೊಂದಿರುವ ವೈ ಎಂ ರಾಮ್ ಗೋಪಾಲ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ.

ಇದನ್ನೂ ಓದಿ: ಬನಾರಸ್​ ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ.. ಜಮೀರ್​ ಪುತ್ರನ ಚಿತ್ರಕ್ಕೆ ಫುಲ್​ ಮಾರ್ಕ್ಸ್​

ತ್ರಿಬಲ್ ರೈಡಿಂಗ್ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಸದ್ಯ ಹಾಡುಗಳಿಂದಲೇ ಸಖತ್​ ಕ್ರೇಜ್​​ ಕ್ರಿಯೇಟ್ ಮಾಡಿರೋ ಈ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಹಿಟ್ ಆಗುವ ಸೂಚನೆ ನೀಡುತ್ತಿದ್ದು, ಇದು ಗೋಲ್ಡನ್ ಸ್ಟಾರ್ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.