ಗ್ಲ್ಯಾಮರ್ ಹಾಗೂ ವಿಭಿನ್ನ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ನಲ್ಲಿ ತನ್ನದೇ ಡಿಮ್ಯಾಂಡ್ ಹೊಂದಿರುವ ಮಲೆನಾಡಿನ ಬೆಡಗಿ ಕೃಷಿ ತಾಪಂಡ. ಸದ್ಯ ರಿಯಾಲಿಟಿ ಶೋ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿರೋ ಕೃಷಿ ತಾಪಂಡ ಈಗ ರೂಪಾಯಿ ಅಂತಾ ಟೈಟಲ್ ಇಟ್ಟುಕೊಂಡು ಹೊಸ ಚಿತ್ರದೊಂದಿಗೆ ಸಿಲ್ವರ್ ಸ್ಕ್ರೀನ್ ಮೇಲೆ ರಂಜಿಸಲು ಬರುತ್ತಾ ಇದ್ದಾರೆ.
ಯುವ ಪ್ರತಿಭೆ ವಿಜಯ್ ಜಗದಾಲ್ ನಿರ್ದೇಶಿಸಿ ಹಾಗೂ ಅಭಿನಯಿಸಿರುವ ರೂಪಾಯಿ ಚಿತ್ರದಲ್ಲಿ ಕೃಷಿ ತಾಪಂಡ ಜೋಡಿಯಾಗಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ರೂಪಾಯಿ ಚಿತ್ರಕ್ಕೆ ನಟ ಧನಂಜಯ್ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಆಲ್ ದಿ ಬೆಸ್ಟ್ ಹೇಳಿದರು. ಇದೀಗ ಆಟೋ, ಕ್ಯಾಬ್ ಚಾಲಕರು, ವಿಧ್ಯಾರ್ಥಿಗಳು ಹಾಗೂ ಹೋಟೆಲ್ ಮಾಲೀಕರಿಂದ ರೂಪಾಯಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ. ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಕೃಷಿ ತಾಪಂಡ ಹಾಗೂ ನಟ, ನಿರ್ದೇಶಕ ವಿಜಯ್ ಜಗದಾಲ್ ಹಾಗೂ ರೂಪಾಯಿ ಚಿತ್ರತಂಡದ ಸಮ್ಮುಖದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ.
![Auto, cab drivers released the trailer of Rupee](https://etvbharatimages.akamaized.net/etvbharat/prod-images/17646748_thumb.jpg)
ಈ ಬಗ್ಗೆ ಮಾತನಾಡಿದ ವಿಜಯ್ ಜಗದಾಲ್ ಅವರು ಯಾವುದೇ ಚಿತ್ರ ಬಿಡುಗಡೆಯಾದರೂ ಮೊದಲ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಸಿನಿಮಾ ನೋಡುವ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸುವವರು ಆಟೋ, ಕ್ಯಾಬ್ ಚಾಲಕರು, ವಿದ್ಯಾರ್ಥಿಗಳು ಹಾಗೂ ಹೋಟೆಲ್ ಮಾಣಿಳು. ಈ ಕಾರಣಕ್ಕಾಗಿ ತಮ್ಮ ಚಿತ್ರದ ರೂಪಾಯಿ ಟ್ರೈಲರ್ ಅನ್ನು ಬಿಡುಗಡೆ ಮಾಡಿಸಿದ್ದು ನಮಗೆ ಖುಷಿ ಇದೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿ ಹಣ ಎಂಬ ರೂಪಾಯಿ ತುಂಬಾ ಮಹತ್ವ ಹೊಂದಿರುತ್ತೆ. ಈ ಚಿತ್ರದಲ್ಲಿ, ಕಾಮಿಡಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದೆ. ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ರೂಪಾಯಿ ಚಿತ್ರದ ಕಥೆ ಸಾಗುತ್ತದೆ. ವಿಜಯ್ ಜಗದಾಲ್ ಮತ್ತು ಕೃಷಿ ತಾಪಂಡ ಮುಖ್ಯಭೂಮಿಕೆಯಲ್ಲಿದ್ದು, ಯಶ್ವಿಕ್, ಚಂದನ ರಾಘವೇಂದ್ರ , ರಾಮ ಚಂದನ್, ಪ್ರಮೋದ್ ಶೆಟ್ಟಿ, ಮೋಹನ್ ಜುನೇಜ, ರಾಕ್ ಲೈನ್ ಸುಧಾಕರ್ , ಅನಿಲ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈಗಾಗಲೇ ಆನಂದ್ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಮತ್ತು ವಿನೋದ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನೂ ಚಿತ್ರಕ್ಕೆ ಆರ್ ಡಿ ನಾಗಾರ್ಜುನ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ. ಸದ್ಯ ಟ್ರೇಲರ್ ನಿಂದ ಸಿನಿ ಪ್ರಿಯರನ್ನು ಇಂಪ್ರೆಸ್ ಮಾಡುತ್ತಿರುವ ರೂಪಾಯಿ ಸಿನಿಮಾ ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಕೃಷಿ ತಾಪಂಡ ಸಿನಿಮಾ ಕೆರಿಯರ್ಗೆ ಹೊಸ ತಿರುವು ನೀಡುತ್ತಾ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಇದನ್ನೂ ಓದಿ :'ಹೊಂದಿಸಿ ಬರೆಯಿರಿ' ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್