ETV Bharat / entertainment

'ಟಾಲಿವುಡ್‌ ಜೇಮ್ಸ್ ಬಾಂಡ್' ಇನ್ನಿಲ್ಲ: ಸೂಪರ್‌ ಸ್ಟಾರ್ ಕೃಷ್ಣ ನಡೆದು ಬಂದ ಹಾದಿ..

ತೆಲುಗು ಸಿನಿಮಾ ಲೋಕದ ಸೂಪರ್ ಸ್ಟಾರ್ ನಟ ಕೃಷ್ಣ ಇನ್ನಿಲ್ಲ. ಟಾಲಿವುಡ್‌ನ ಜೇಮ್ಸ್ ಬಾಂಡ್ ಎಂದೇ ಖ್ಯಾತರಾಗಿದ್ದ ಇವರು ವೃದ್ಧಾಪ್ಯ ಸಂಬಂಧಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಕೃಷ್ಣ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Superstar Krishna Passes away  Mahesh Babu father Superstar Krishna Passes away  Tollywood Hero Mahesh Babu father  Tollywood Hero Mahesh Babu father no more  ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ  ಕೃಷ್ಣ ನಡೆದು ಬಂದ ಹಾದಿ ಹೀಗಿದೆ  ಟಾಲಿವುಡ್‌ನ ಜೇಮ್ಸ್ ಬಾಂಡ್ ಇನ್ನಿಲ್ಲ  ತೆಲುಗು ಚಿತ್ರರಂಗದಲ್ಲಿ ತಂತ್ರಜ್ಞಾನದ ಮೂಲಕ ಅದ್ಭುತ  ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ವಿಧಿವಶ  ಕೃಷ್ಣ ಸಿನಿ ಜೀವನಯಾತ್ರೆ ಪ್ರಾರಂಭ  ರಾಜೀವ್ ಗಾಂಧಿ ಸ್ನೇಹದಿಂದ ರಾಜಕೀಯ ಪ್ರವೇಶ  ಕೃಷ್ಣರಿಗೆ ಲಭಿಸಿದ ಪ್ರಶಸ್ತಿಗಳು
ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ
author img

By

Published : Nov 15, 2022, 8:27 AM IST

ಹೈದರಾಬಾದ್(ತೆಲಂಗಾಣ): ತೆಲುಗು ಚಿತ್ರರಂಗ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಿದೆ. ಟಾಲಿವುಡ್‌ನಲ್ಲಿ ತಂತ್ರಜ್ಞಾನದ ಮೂಲಕ ಅದ್ಭುತ ಸೃಷ್ಟಿಸಿದ ಟಾಲಿವುಡ್ ಜೇಮ್ಸ್ ಬಾಂಡ್, ಸೂಪರ್ ಸ್ಟಾರ್ ಕೃಷ್ಣ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಪ್ರತಿಷ್ಟಿತ ಘಟ್ಟಮನೇನಿ ಕುಟುಂಬದಲ್ಲೀಗ ಶೋಕ ಮಡುಗಟ್ಟಿದೆ. ಹಿರಿಯ ನಟನ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

Superstar Krishna Passes away  Mahesh Babu father Superstar Krishna Passes away  Tollywood Hero Mahesh Babu father  Tollywood Hero Mahesh Babu father no more  ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ  ಕೃಷ್ಣ ನಡೆದು ಬಂದ ಹಾದಿ ಹೀಗಿದೆ  ಟಾಲಿವುಡ್‌ನ ಜೇಮ್ಸ್ ಬಾಂಡ್ ಇನ್ನಿಲ್ಲ  ತೆಲುಗು ಚಿತ್ರರಂಗದಲ್ಲಿ ತಂತ್ರಜ್ಞಾನದ ಮೂಲಕ ಅದ್ಭುತ  ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ವಿಧಿವಶ  ಕೃಷ್ಣ ಸಿನಿ ಜೀವನಯಾತ್ರೆ ಪ್ರಾರಂಭ  ರಾಜೀವ್ ಗಾಂಧಿ ಸ್ನೇಹದಿಂದ ರಾಜಕೀಯ ಪ್ರವೇಶ  ಕೃಷ್ಣರಿಗೆ ಲಭಿಸಿದ ಪ್ರಶಸ್ತಿಗಳು
ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ

ಕೃಷ್ಣ ಅವರ ಜೀವನಗಾಥೆ: ಕೃಷ್ಣ ಅವರ ನಿಜವಾದ ಹೆಸರು ಘಟ್ಟಮನೇನಿ ಶಿವರಾಮ ಕೃಷ್ಣಮೂರ್ತಿ. ಬಾಲ್ಯದಿಂದಲೂ ಇವರಿಗೆ ಸಿನಿಮಾಗಳ ಮೇಲೆ ಅಪಾರ ಆಸಕ್ತಿ. ಆದರೆ ತಂದೆ-ತಾಯಿಗೆ ಪುತ್ರ ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು. ಆದರೆ, ಇಂಜಿನಿಯರಿಂಗ್‌ ಓದಲು ಸೀಟು ಸಿಗದ ಕಾರಣ ಪದವಿ ವಿದ್ಯಾಭ್ಯಾಸಕ್ಕೆ ಸೇರಿಕೊಂಡರು. ಅಲ್ಲಿ ಓದುತ್ತಿದ್ದಾಗ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಅವರನ್ನು ಏಲೂರಿನಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದು ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೃಷ್ಣ ಅವರಿಗೆ ಸಿನಿಮಾ ಪ್ರೀತಿ ಮತ್ತಷ್ಟು ಹೆಚ್ಚಿದೆ. ಬಳಿಕ ಈ ಕ್ಷೇತ್ರದತ್ತ ಅವರು ಅಪಾರ ಒಲವು ತೋರಿಸಿದರು. ಕೃಷ್ಣ 1965 ರಲ್ಲಿ ಇಂದಿರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಪ್ರಿಯದರ್ಶಿನಿ ಹಾಗು ಮಂಜುಳಾ ಎಂಬ ಐವರು ಮಕ್ಕಳಿದ್ದಾರೆ. ಆ ನಂತರದಲ್ಲಿ ಕೃಷ್ಣ ಎರಡನೇ ಬಾರಿಗೆ ಸಿನಿಮಾ ನಟಿ ಹಾಗೂ ನಿರ್ದೇಶಕಿ ವಿಜಯ ನಿರ್ಮಲ್ ಅವರನ್ನು ವಿವಾಹವಾದರು.

ಸಿನಿ ಜೀವನಯಾತ್ರೆ ಪ್ರಾರಂಭ: ಪದವಿ ಮುಗಿದರೂ ಇಂಜಿನಿಯರಿಂಗ್ ಸೀಟು ಪಡೆಯಲು ಯತ್ನಿಸಿದ ಕೃಷ್ಣ, ಅದು ಸಿಗದ ಕಾರಣಕ್ಕೆ ಸಿನಿಮಾವನ್ನೇ ಭವಿಷ್ಯವಾಗಿ ಆಯ್ದುಕೊಂಡರು. ನಟರಾದ ಜಗ್ಗಯ್ಯ, ಗುಮ್ಮಡಿ ಮತ್ತು ನಿರ್ಮಾಪಕ ಚಕ್ರಪಾಣಿ ಅವರು ತೆನಾಲಿಯವರಾಗಿದ್ದು, ಕೃಷ್ಣ ಮದ್ರಾಸಿಗೆ ಹೋಗಿ ಅವರನ್ನು ಭೇಟಿಯಾದರು. ಆಗ ಕೃಷ್ಣ ಚಿರಯುವಕ. ಹೀಗಾಗಿ ಕೆಲ ವರ್ಷಗಳ ಬಳಿಕ ಮದ್ರಾಸಿಗೆ ಬಂದರೆ ಚಿತ್ರಗಳಲ್ಲಿ ಒಳ್ಳೆಯ ಅವಕಾಶಗಳು ಬರುತ್ತವೆ ಎಂದು ಸಲಹೆ ನೀಡಿದರು. ಹಿಂದಿರುಗಿದ ಕೃಷ್ಣ ಪ್ರಜಾನಾಟ್ಯ ಮಂಡಳಿಗೆ ಸೇರಿ ಗರಿಕಪಾಟಿ ರಾಜಾರಾವ್ ಅವರ ಸಹಕಾರದಿಂದ ಹಲವಾರು ನಾಟಕಗಳಲ್ಲಿ ನಟಿಸಿ ನಟನಾ ಜ್ಞಾನ ಹೆಚ್ಚಿಸಿಕೊಂಡರು.

ಟಾಲಿವುಡ್‌ನ ಜೇಮ್ಸ್ ಬಾಂಡ್ ಇನ್ನಿಲ್ಲ

1964ರಲ್ಲಿ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದುರ್ತಿ ಸುಬ್ಬರಾವ್ ನಿರ್ದೇಶನದ ‘ತೆನೆ ಮನಸುಲು’ ಚಿತ್ರದ ಮೂಲಕ ಕೃಷ್ಣ ಅವರ ಸಿನಿಮಾ ಜೀವನ ಆರಂಭವಾಯಿತು. ಈ ಚಿತ್ರದಲ್ಲಿ ಅವರ ಅಭಿನಯ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಅವರನ್ನು ತೆಗೆಯುವಂತೆ ನಿರ್ದೇಶಕರ ಮೇಲೆ ಒತ್ತಡ ಹೇರಲಾಗಿತ್ತು. ಆದರೂ ಆದುರ್ತಿ ಸುಬ್ಬರಾವ್ ತಮ್ಮ ನಿರ್ಧಾರ ಬದಲಿಸಲಿಲ್ಲ. 1965 ರಲ್ಲಿ ಬಿಡುಗಡೆಯಾದ ಅವರ ಚಿತ್ರ ದೊಡ್ಡ ಯಶಸ್ಸು ಕಂಡಿತು.

20 ಸಿನಿಮಾಗಳಲ್ಲಿ ಅವಕಾಶ: 'ಕಣ್ಣೆ ಮನಸೆಲ್ಲೋ' ಚಿತ್ರದಲ್ಲಿ ನಟಿಸುತ್ತಿರುವಾಗಲೇ 'ಗೂಢಚಾರಿ 116' ಸಿನಿಮಾದಲ್ಲಿ ನಟಿಸುವ ಅವಕಾಶ ಕೃಷ್ಣ ಅವರಿಗೆ ಒಲಿದುಬಂತು. ಈ ಚಿತ್ರ ಕೂಡಾ ದೊಡ್ಡ ಯಶಸ್ಸು ಗಳಿಸಿತು. ಅಲ್ಲಿಂದ ಇವರ ಜೀವನದ ವೃತ್ತಿ ಪ್ರಯಾಣ ಬದಲಾಯಿತು. ತೆಲುಗು ಪ್ರೇಕ್ಷಕರು ಅವರನ್ನು ಪ್ರೀತಿಯಿಂದ ಆಂಧ್ರದ ಜೇಮ್ಸ್ ಬಾಂಡ್ ಎಂದೇ ಕರೆಯುತ್ತಿದ್ದರು. ಈ ಯಶಸ್ಸಿನೊಂದಿಗೆ ಕೃಷ್ಣ 20 ಚಿತ್ರಗಳ ನಾಯಕನಾಗಿ ಆಯ್ಕೆಯಾದರು. ಗೂಢಚಾರಿ 116 ಚಿತ್ರದೊಂದಿಗೆ ಅವರ ಇಮೇಜ್ ಅಗಾಧವಾಗಿ ಬೆಳೆಯಿತು. ಅದರ ನಂತರ, ಅವರು ಮುಂದಿನ ಎರಡು ದಶಕಗಳಲ್ಲಿ 6 ಜೇಮ್ಸ್ ಬಾಂಡ್ ಚಿತ್ರಗಳನ್ನು ಮಾಡಿದರು. ಆ ಚಿತ್ರಗಳೆಲ್ಲವೂ ಯಶಸ್ಸು ಕಂಡವು. ಬಾಪು ಅವರ ಸಂಪೂರ್ಣ ಹೊರಾಂಗಣ ಚಿತ್ರ ‘ಸಾಕ್ಷಿ’ ಕೃಷ್ಣ ಅವರ ಇಮೇಜ್ ಇನ್ನೂ ಹೆಚ್ಚಿಸಿತು. ಮಾನವೀಯತೆಯಲ್ಲಿ ನಂಬಿಕೆಯಿರುವ ಹಳ್ಳಿಯ ಮುಗ್ದನ ಪಾತ್ರದಲ್ಲಿ ಅವರು ನಟಿಸಿರುವ ಚಿತ್ರವಿದು. ಇದು ವಿಜಯನಿರ್ಮಲ್ ಜೊತೆಗಿನ ಮೊದಲ ಚಿತ್ರವೂ ಹೌದು.

ಒಂದು ವರ್ಷದಲ್ಲಿ 18 ಸಿನಿಮಾ: 1970-71 ಕೃಷ್ಣ ಅವರ ಅಭಿನಯ ತೆಲುಗು ಪ್ರೇಕ್ಷಕರಿಗೆ ಅವಿಸ್ಮರಣೀಯ. ಒಂದು ವರ್ಷದಲ್ಲಿ ಅವರ ಹತ್ತಾರು ಚಿತ್ರಗಳು ಬಿಡುಗಡೆಯಾದವು. 1968ರಲ್ಲಿ ಕೃಷ್ಣ ಅಭಿನಯದ 10 ಚಿತ್ರಗಳು ತೆರೆಕಂಡಿದ್ದವು. ಆ ನಂತರ 1969 ರಲ್ಲಿ 15 ಚಿತ್ರಗಳು, 1970 ರಲ್ಲಿ 16 ಚಿತ್ರಗಳು, 1971 ರಲ್ಲಿ 11 ಚಿತ್ರಗಳು, 1972 ರಲ್ಲಿ 18 ಚಿತ್ರಗಳು, 1973 ರಲ್ಲಿ 15 ಚಿತ್ರಗಳು, 1974 ರಲ್ಲಿ 13 ಚಿತ್ರಗಳು ಮತ್ತು 1980 ರಲ್ಲಿ 17 ಚಿತ್ರಗಳು ಬಿಡುಗಡೆಯಾದವು. ಒಂದು ಹಂತದಲ್ಲಿ ಕೃಷ್ಣ ದಿನಕ್ಕೆ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು.

ಹೊಸ ತಂತ್ರಜ್ಞಾನದ ಪರಿಚಯ: ನಾಲ್ಕು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ ಕೃಷ್ಣ ಅವರು 340ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಹಲವು ಸಾಹಸಗಳನ್ನು ಮಾಡಿದ್ದು ‘ಡೇರಿಂಗ್ ಅಂಡ್ ಡ್ಯಾಶಿಂಗ್’ ಹೀರೋ ಎಂದೇ ಹೆಸರುವಾಸಿ. 1970ರಲ್ಲಿ ಪದ್ಮಾಲಯ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದರು. ಅವರು 16 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಅನೇಕ ಚಲನಚಿತ್ರಗಳು ತೆಲುಗಿನಲ್ಲಿ ಹೊಸ ತಂತ್ರಗಳು ಮತ್ತು ಪ್ರಕಾರಗಳನ್ನು ಪರಿಚಯಿಸಿದವು. ತೆಲುಗಿನ ಮೊದಲ ಜೇಮ್ಸ್ ಬಾಂಡ್ ಚಿತ್ರ (ಗೂಢಚಾರಿ 116), ಮೊದಲ ಕೌಬಾಯ್ ಚಿತ್ರ (ಮೊಸಗಲ್ಲು ಮೊಸಗಾಡು), ಮೊದಲ ಫುಲ್‌ಸ್ಕೋಪ್ ಚಿತ್ರ (ಅಲ್ಲೂರಿ ಸೀತಾರಾಮರಾಜು), ಮೊದಲ 70 ಎಂಎಂ ಚಿತ್ರ (ಸಿಂಹಾಸನಂ) ಎಂಬೆಲ್ಲಾ ಚಿತ್ರಗಳಲ್ಲಿ ಕೃಷ್ಣ ನಟಿಸಿ ಮಿಂಚಿದ್ದಾರೆ.

ರಾಜೀವ್ ಗಾಂಧಿ ಸ್ನೇಹದಿಂದ ರಾಜಕೀಯ ಪ್ರವೇಶ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೃಷ್ಣ ಅವರಿಗೆ ಆತ್ಮೀಯರಾಗಿದ್ದರು. ಆ ಅಭಿಮಾನದಿಂದಲೇ 1984ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. 1989ರಲ್ಲಿ ಹಸ್ತ ಪಕ್ಷದ ಪರವಾಗಿ ಏಲೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1991ರ ಚುನಾವಣೆಯಲ್ಲಿ ಮತ್ತೊಮ್ಮೆ ಏಲೂರಿನಿಂದ ಸ್ಪರ್ಧಿಸಿ ಸೋತರು. ಆ ನಂತರ ರಾಜೀವ್ ಗಾಂಧಿ ಹತ್ಯೆಯಾಗಿತ್ತು. ಏಲೂರಿನಲ್ಲಿ ಸೋಲಿನೊಂದಿಗೆ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಅವರು ತೆಲುಗು ದೇಶಂ ಮತ್ತು ಎನ್‌ಟಿಆರ್ ಸರ್ಕಾರವನ್ನು ಟೀಕಿಸುವ ಹಲವಾರು ಚಲನಚಿತ್ರಗಳನ್ನು ಮಾಡಿದರು. 2010 ರ ನಂತರ, ಕ್ರಮೇಣ ಚಲನಚಿತ್ರಗಳಿಂದ ವಿರಾಮ ಪಡೆಯುತ್ತಾರೆ. 2016 ರ 'ಶ್ರೀ ಶ್ರೀ' ಕೃಷ್ಣ ಅವರ ಕೊನೆಯ ಚಿತ್ರವಾಗಿತ್ತು.

ಸಂದ ಪ್ರಶಸ್ತಿಗಳು: ಚಿತ್ರರಂಗದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೃಷ್ಣ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಫಿಲ್ಮ್‌ಫೇರ್ ಸೌತ್ ಜೀವಮಾನ ಸಾಧನೆ ಪ್ರಶಸ್ತಿ (1997), ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ (2003), ಆಂಧ್ರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2008), ಪದ್ಮಭೂಷಣ ಪ್ರಶಸ್ತಿ (2009)ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: ಜನಪ್ರಿಯ ತೆಲುಗು ನಟ, ಸೂಪರ್ ಸ್ಟಾರ್‌ ಕೃಷ್ಣ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.