ETV Bharat / entertainment

ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ ನಟ ನಾಗ ಚೈತನ್ಯ; ಮೊದಲ ವಿಡಿಯೋದಲ್ಲೇನಿದೆ? - etv bharat kannada

Naga Chaitanya Youtube channel: ಟಾಲಿವುಡ್​ ಸ್ಟಾರ್​ ನಟ ಅಕ್ಕಿನೇನಿ ನಾಗ ಚೈತನ್ಯ ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ್ದಾರೆ.

Tollywood Actor Naga Chaitanya started a new youtube channel
ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ ನಟ ನಾಗ ಚೈತನ್ಯ; ಮೊದಲ ವಿಡಿಯೋದಲ್ಲೇನಿದೆ?
author img

By ETV Bharat Karnataka Team

Published : Nov 18, 2023, 6:58 PM IST

ಪ್ರಸ್ತುತ ದಿನಗಳಲ್ಲಿ ಜನರು ಸೋಷಿಯಲ್​ ಮೀಡಿಯಾಗಳಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ. ಹೀಗಾಗಿ ಸೆಲೆಬ್ರಿಟಿಗಳು ಕೂಡ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಸನಿಹವಾಗುತ್ತಿದ್ದಾರೆ. ತಮ್ಮ ಹೊಸ ಸಿನಿಮಾ ಅಪ್​ಡೇಟ್ಸ್​, ಫೋಟೋಸ್​, ವೈಯಕ್ತಿಕ ವಿಚಾರಗಳು ಎಲ್ಲವನ್ನೂ ಈ ವೇದಿಕೆಯಲ್ಲಿಯೇ ಹಂಚಿಕೊಳ್ಳುತ್ತಾರೆ. ಆದರೆ, ಇಲ್ಲಿಯವರೆಗೆ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಎಕ್ಸ್​ (ಹಿಂದಿನ ಟ್ವಿಟರ್​) ಮಾತ್ರ ಇತ್ತು. ಇದೀಗ ಸೆಲೆಬ್ರಿಟಿಗಳು ಯೂಟ್ಯೂಬ್​ಗೂ ಎಂಟ್ರಿಯಾಗುತ್ತಿದ್ದಾರೆ.

  • " class="align-text-top noRightClick twitterSection" data="">

ಹೌದು, ತಮ್ಮದೇ ಯೂಟ್ಯೂಬ್​ ಚಾನೆಲ್​ಗಳನ್ನು ಶುರು ಮಾಡಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇದೀಗ ಈ ಸಾಲಿಗೆ ಟಾಲಿವುಡ್​ ಯುವ ಸಾಮ್ರಾಟ್​ ಅಕ್ಕಿನೇನಿ ನಾಗ ಚೈತನ್ಯ ಕೂಡ ಸೇರಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ್ದಾರೆ. ಈ ವಿಚಾರವನ್ನು ಅವರೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಯೂಟ್ಯೂಬ್​ನಲ್ಲಿ ಮೊದಲ ವಿಡಿಯೋ ಹಂಚಿಕೊಂಡಿರುವ ಅವರು, ನೆಟ್ಟಿಗರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 'ಬಹಳ ಸಮಯದ ನಂತರ ಕೂದಲು ಗಡ್ಡ ಬಿಟ್ಟಿದ್ದೀರಿ. ಕಾರಣವೇನು?' ಎಂದು ಕೇಳಿದಾಗ, 'ಮಾಡಲು ಕೆಲಸವೇನು ಇಲ್ಲ, ಹಾಗಾಗಿ ಗಡ್ಡ ಬಿಟ್ಟೆ 'ಎಂದು ತಮಾಷೆ ಮಾಡಿದ್ದಾರೆ. ಬಳಿಕ ನಿರ್ದೇಶಕ ಚಂದು ಮೊಂಡೇಟಿ ಜೊತೆಗಿನ NC23 (ತಾತ್ಕಾಲಿಕ ಶೀರ್ಷಿಕೆ) ಚಿತ್ರಕ್ಕಾಗಿಯೇ ಗಡ್ಡ ಮತ್ತು ಕೂದಲು ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು.

'NC23': ನಾಗ ಚೈತನ್ಯ ಮತ್ತು ಚಂದು ಮೊಂಡೇಟಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 'ಪ್ರೇಮಂ' ಮತ್ತು 'ಸವ್ಯಸಾಚಿ' ಚಿತ್ರಗಳು ತೆರೆ ಕಂಡಿದ್ದವು. ಅದರಲ್ಲಿ 'ಪ್ರೇಮಂ' ಬ್ಲಾಕ್​ಬಸ್ಟರ್​ ಆಗುವುದರ ಜೊತೆಗೆ 'ಸವ್ಯಸಾಚಿ' ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. NC23 ಮೀನುಗಾರರ ಜೀವನವನ್ನು ಆಧರಿಸಿದ ನೈಜ ಘಟನಾಧಾರಿತ ಚಿತ್ರ. ಚಿತ್ರದಲ್ಲಿ ನಾಗ ಚೈತನ್ಯ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಗಡ್ಡ, ಕೂದಲು ಬಿಟ್ಟಿದ್ದಾರೆ. ಸಿನಿಮಾಗೆ ಸಹಜ ಸುಂದರಿ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ.

ಅಂದ ಹಾಗೇ, ನಾಗ ಚೈತನ್ಯ ಅವರು ನಟಿಸುತ್ತಿರುವ 23ನೇ ಚಿತ್ರ ಇದಾಗಿದೆ. ನೈಜ ಘಟನೆಯ ಸುತ್ತ ಇಡೀ ಕಥೆಯನ್ನು ಕಟ್ಟಿಕೊಡಲಾಗಿದೆ. 'ಕಾರ್ತಿಕೇಯ 2' ನಂತಹ ಬ್ಲಾಕ್​ ಬಸ್ಟರ್​ ಹಿಟ್​ ಪ್ಯಾನ್​ ಇಂಡಿಯಾ ಸಿನಿಮಾವನ್ನು ನೀಡಿರುವ ಚಂದು ಮೊಂಡೇಟಿ ಅವರು NC23ಗೆ ಆಕ್ಷನ್​ ಕಟ್​ ಹೇಳಲಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಸೆಟ್ಟೇರಲಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್​ ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಬನ್ನಿ ವಾಸ್ ಗೀತಾ ಆರ್ಟ್ಸ್​ ಬ್ಯಾನರ್​ ಅಡಿ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಕಾರ್ತಿಕೇಯ 2' ನಿರ್ದೇಶಕನ ಜೊತೆ ನಾಗ ಚೈತನ್ಯ ಸಿನಿಮಾ: ಮೀನುಗಾರರನ್ನು ಭೇಟಿಯಾದ ನಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.