ETV Bharat / entertainment

ಇಂದು ಲತಾ ಮಂಗೇಶ್ಕರ್ ಪುಣ್ಯತಿಥಿ: ಮುಂಬೈನಲ್ಲಿ ನಿರ್ಮಾಣವಾಗಲಿದೆ 'ಗಾನಕೋಗಿಲೆ' ಸ್ಮಾರಕ​ - ಈಟಿವಿ ಭಾರತ ಕನ್ನಡ

ಇಂದು ಗಾನಕೋಗಿಲೆ ಲತಾ ಮಂಗೇಶ್ಕರ್ ಪುಣ್ಯತಿಥಿ- ಮಹಾರಾಷ್ಟ್ರ ಸರ್ಕಾರದಿಂದ ಗಾಯಕಿಯ ಸ್ಮಾರಕ ನಿರ್ಮಾಣ- ಮುಂಬೈನ ಹಾಜಿ ಅಲಿ ಪ್ರದೇಶದಲ್ಲಿ ಸ್ಮಾರಕದ ಭೂಮಿಪೂಜೆ

lata-mangeshkar
ಲತಾ ಮಂಗೇಶ್ಕರ್
author img

By

Published : Feb 6, 2023, 1:58 PM IST

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​ ಮರೆಯಾಗಿ ಇಂದಿಗೆ ಒಂದು ವರ್ಷ. ಮಾಧುರ್ಯಪೂರ್ಣ ಗಾಯನಕ್ಕೆ ಮತ್ತೊಂದು ಹೆಸರಾಗಿರುವ ಇವರನ್ನು ಇಡೀ ದೇಶವೇ ಪ್ರೀತಿಯಿಂದ 'ಲತಾ ದೀದಿ' ಎಂದೇ ಕರೆಯುತ್ತಾರೆ. ವಿಶಿಷ್ಟ ಮತ್ತು ಗೌರವಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವತ ಕಾಲದಲ್ಲೇ ದಂತಕಥೆಯಾದವರು. ಇವರು ಗಾನ ಲೋಕದಲ್ಲಿ ಮರೆಯಾಗಿರುವ ದಿವಸವಾದ ಇಂದು ಅವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಹೌದು. ಭಾರತ ಮತ್ತು ಇತರೆ ದೇಶಗಳ ಸುಮಾರು 36 ಭಾಷೆಗಳಲ್ಲಿ ಹಾಡಿ ಅಪ್ರತಿಮ ಸಾಧನೆಗೈದಿರುವ ಗಾಯಕಿ ಲತಾ ಮಂಗೇಶ್ಕರ್​. ಇವರು 1929ರ ಸೆಪ್ಟಂಬರ್​ 28ರಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ಜನಸಿದರು. ಬಾಲ್ಯದಿಂದಲೇ ಸಂಗೀತವನ್ನು ಆರಾಧಿಸುತ್ತಲೇ ಬೆಳೆದ ಇವರು ಕೋಗಿಲೆ ಕಂಠದಿಂದಲೇ ಗಾನಕೋಗಿಲೆಯಾದರು. ಸಾಕಷ್ಟು ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿ 2022ರ ಫೆಬ್ರವರಿ 6ರಂದು ಗಾಯನಲೋಕಕ್ಕೆ ವಿದಾಯ ಹೇಳಿದರು. ಇವರ ಮೊದಲ ಪುಣ್ಯತಿಥಿಯಾದ ಇಂದು ಮಹಾರಾಷ್ಟ್ರ ಸರ್ಕಾರ ಲತಾ ಮಂಗೇಶ್ಕರ್​ ಸ್ಮಾರಕವನ್ನು ಮುಂಬೈನ ಹಾಜಿ ಅಲಿ ಪ್ರದೇಶದಲ್ಲಿ ನಿರ್ಮಿಸಲು ನಿರ್ಧರಿಸಿದೆ. ಆ ಪ್ರಯುಕ್ತ ಇಂದು ಸ್ಮಾರಕದ ಭೂಮಿ ಪೂಜೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್​ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್​ ಪ್ರಭಾತ್​ ಲೋಧಾ ಅವರ ಸಮ್ಮುಖದಲ್ಲಿ ಈ ಭೂಮಿಪೂಜೆ ಸಮಾರಂಭ ನಡೆಯಲಿದೆ. ರಾಜ್ಯ ಸರ್ಕಾರವು ಈ ಮೂಲಕ ಲತಾ ಮಂಗೇಶ್ಕರ್​ಗೆ ಗೌರವ ನಮನ ಸಲ್ಲಿಸಲಿದೆ. ಇದಕ್ಕೂ ಮೊದಲು ಮುಂಬೈ ವಿಶ್ವವಿದ್ಯಾಲಯದ ಕಲಿನಾ ಪ್ರದೇಶದಲ್ಲಿ ದೇಶದ ಮೊದಲ ಲತಾ ಮಂಗೇಶ್ಕರ್ ಸಂಗೀತ ಕಾಲೇಜು ಅಕಾಡೆಮಿಯನ್ನು ಪ್ರಾರಂಭಿಸಲಾಗುವುದು ಎಂದು ಸರ್ಕಾರದಿಂದ ಘೋಷಣೆ ಮಾಡಲಾಗಿತ್ತು. ಸರ್ಕಾರಿ ಕಾರ್ಯಕ್ರಮದ ಜೊತೆಗೆ ಮುಂಬೈ ಸೇರಿದಂತೆ ದೇಶದ ಹಲವೆಡೆ ಲತಾ ಮಂಗೇಶ್ಕರ್​ ಗಾಯನ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ ಮುಂಬೈನ ಮಾಟುಂಗಾದಲ್ಲಿರುವ ಶಾಮುಕಾನಂದ ಸಭಾಂಗಣದಲ್ಲಿ 'ಲತಾಂಜಲಿ' ಕಾರ್ಯಕ್ರಮ ಆಯೋಜನೆಯಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಕನ್ನಡಿಗ ರಿಕಿ ಕೇಜ್​ ಮುಡಿಗೆ ಮತ್ತೊಂದು ಗ್ರ್ಯಾಮಿ ಗರಿ.. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ

'ಲತಾ ದೀದಿ'ಯದ್ದು ಕಲಾವಿದರ ಕುಟುಂಬ: ಲತಾ ಮಂಗೇಶ್ಕರ್​ ಕುಟುಂಬದಲ್ಲಿ ಎಲ್ಲರೂ ಕಲಾವಿದರೇ. ಅವರ ಸಹೋದರಿಯಾದರಾದ ಮೀನಾ ಖಾಡಿಕರ್, ಉಷಾ ಮಂಗೇಶ್ಕರ್ ಮತ್ತು ಆಶಾ ಬೋಂಸ್ಲೆ ಪ್ರಸಿದ್ಧ ಗಾಯಕಿಯರು. ಇನ್ನು ಅವರ ತಂದೆ ದೀನನಾಥ್​ ಮಂಗೇಶ್ಕರ್​ ರಂಗಭೂಮಿ ಕಲಾವಿದರು. ಲತಾ ಐದು ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ತಮ್ಮ ತಂದೆಯ ನಾಟಕಗಳಲ್ಲಿ ಹಾಡುತ್ತಿದ್ದರು. ಅವರ ತಂದೆ ಸಡನ್ನಾಗಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಸಾವಿಗೀಡಾದರು. ತಂದೆಯ ಸಾವಿನ ಬಳಿಕ ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿಯನ್ನು 13 ವರ್ಷದ ಬಾಲಕಿ ಲತಾ ಹೊತ್ತುಕೊಂಡರು. ಹಾಡುವುದು ಮಾತ್ರ ಗೊತ್ತಿದ್ದ ಪುಟ್ಟ ಬಾಲಕಿ ಅದನ್ನೇ ಬಳಸಿಕೊಂಡು ತನ್ನ ಕುಟುಂಬ ನಿರ್ವಹಣೆ ಮಾಡಬೇಕಾದಂತಹ ಅನಿವಾರ್ಯತೆ ಸೃಷ್ಟಿಯಾಯಿತು. ಅಲ್ಲಿಂದ ಸಂಗೀತ ಲೋಕದಲ್ಲಿ ಛಾಪನ್ನು ಮೂಡಿಸಿದ ಲತಾ ಮಂಗೇಶ್ಕರ್​ ಗಾನಕೋಗಿಲೆಯಾಗಿ ಮಿಂಚಿದರು.

36 ಭಾಷೆಗಳ ಹಾಡಿಗೆ ಸ್ವರವಾದ ಕೋಗಿಲೆ: ಲತಾ ಮಂಗೇಶ್ಕರ್ ಅವರು ಹಿಂದಿ ಸಿನಿಮಾಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳ ಹಾಡುಗಳಲ್ಲಿ ಮಾತ್ರ ಆಳ್ವಿಕೆ ನಡೆಸಲಿಲ್ಲ. ಜೊತೆಗೆ ಮರಾಠಿ, ತಮಿಳು, ಭೋಜ್‌ಪುರಿ, ಬಂಗಾಳಿ ಮುಂತಾದ ಹಲವು ಭಾಷೆಗಳು ಸೇರಿದಂತೆ ದೇಶಾದ್ಯಂತ 36 ಭಾರತೀಯ ಭಾಷೆಗಳಲ್ಲಿ ಧ್ವನಿ ನೀಡಿದ್ದಾರೆ. ಅಲ್ಲದೇ ಕನ್ನಡದ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ಬೆಳ್ಳನೆ ಬೆಳಗಾಯಿತು ಹಾಡಿನ ಮೂಲಕ ಕನ್ನಡವನ್ನೂ ತಮ್ಮ ಹಾಡುಗಳ ಭಾಷೆಯಾಗಿ ಸೇರಿಸಿಕೊಂಡಿದ್ದಾರೆ. ಇವರ ಸಂಗೀತ ಲೋಕದ ಸಾಧನೆಗಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದಿವೆ.

'ಗಾಯಕಿಯಾಗುತ್ತಾಳೆ' ಭವಿಷ್ಯ ನುಡಿದಿದ್ದ ತಂದೆ..: ಒಮ್ಮೆ ಸಂದರ್ಶನವೊಂದರಲ್ಲಿ ಲತಾ ಜೀ, "ನನ್ನ ತಂದೆ ಬದುಕಿದ್ದರೆ ಇಂದು ನಾನು ಗಾಯಕಿಯಾಗುತ್ತಿರಲಿಲ್ಲ. ನನಗೆ ಮಧುರ ಕಂಠವಿದೆ ಎಂದು ನಮ್ಮ ತಂದೆಗೆ ಬಹಳ ದಿನಗಳ ಬಳಿಕ ತಿಳಿಯಿತು. ಆಗ ನನ್ನ ಪ್ರತಿಭೆಯನ್ನು ಹೆಚ್ಚಿಸಲು ಅವರು ಬಯಸಿದರು. ಆದರೆ ನಾನು ತಂದೆಯ ಮುಂದೆ ಹಾಡಲು ತುಂಬಾ ನಾಚಿಕೆಪಡುತ್ತಿದ್ದೆ. ಆಗ ಅಡುಗೆಮನೆಯಲ್ಲಿದ್ದ ತಾಯಿಯ ಬಳಿಗೆ ಓಡಿ ಹೋಗುತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಮಗಳು ದೊಡ್ಡ ಗಾಯಕಿಯಾಗುತ್ತಾಳೆ ಎಂದು ನಮ್ಮ ತಂದೆ ಆಗಲೇ ಭವಿಷ್ಯ ನುಡಿದಿದ್ದರು" ಎಂದು ಹೇಳಿದ್ದರು.

ಲತಾಗೆ ಅಡುಗೆ ಮಾಡುವುದು ತುಂಬಾ ಇಷ್ಟ: ಲತಾ ಅವರ ಗಾಯನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅವರು ಅಡುಗೆ ಮಾಡಲು ತುಂಬಾ ಇಷ್ಟಪಡುತ್ತಾರೆ. ಲತಾ ಜೀ ಅವರು ಚಿಕನ್ ಮತ್ತು ಹಲ್ವಾವನ್ನು ಚೆನ್ನಾಗಿ ರೆಡಿ ಮಾಡುತ್ತಿದ್ದರಂತೆ. ಜೊತೆಗೆ ಅವರ ಕೈಯಿಂದ ಚಿಕನ್ ಖಾದ್ಯಗಳನ್ನು ತಿಂದವರು ಆ ರುಚಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅವರಿಗೂ ವೆರೈಟಿ ಅಡುಗೆ ಮಾಡಿ ತಿನ್ನುವುದೆಂದರೆ ಬಹಳ ಖುಷಿ ಮತ್ತು ಇಷ್ಟವಿತ್ತು. ಅವರು ಸಮುದ್ರ ಆಹಾರವನ್ನು ಪ್ರೀತಿಸುತ್ತಿದ್ದರು. ವಿಶೇಷವಾಗಿ ಗೋವಾದ ಮೀನು ಮತ್ತು ಸಿಗಡಿಗಳು. ಇದಲ್ಲದೇ ಕೇಸರಿ ಜಿಲೇಬಿ ಕೂಡ ಅವರಿಗೆ ಅತ್ಯಂತ ಪ್ರಿಯ ತಿನಿಸು ಆಗಿತ್ತು.

ಇದನ್ನೂ ಓದಿ: 3 ಮಿಲಿಯನ್​ ವೀಕ್ಷಣೆ ಕಂಡ 'ಕಬ್ಜ' ಚಿತ್ರದ ಮಾಸ್ ಸಾಂಗ್​: ರೆಟ್ರೋ ಅವತಾರದಲ್ಲಿ ಅಬ್ಬರಿಸಿದ ರಿಯಲ್ ಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.