ETV Bharat / entertainment

ಸುಚೇಂದ್ರ ಪ್ರಸಾದ್ ಅಭಿನಯದ 'ತಿಮ್ಮನ ಮೊಟ್ಟೆಗಳು' ಸಿನಿಮಾ ಬಿಡುಗಡೆ ಸಜ್ಜು - timmana mottegalu movie updates

Timmana Mottegalu Movie: ತಿಮ್ಮನ ಮೊಟ್ಟೆಗಳು ಚಿತ್ರದ ಮೇಕಿಂಗ್ ಟೀಸರ್ ಅನಾವರಣಗೊಂಡಿದೆ.

timmana mottegalu movie
'ತಿಮ್ಮನ ಮೊಟ್ಟೆಗಳು' ಸಿನಿಮಾ ಬಿಡುಗಡೆ ಸಜ್ಜು
author img

By ETV Bharat Karnataka Team

Published : Sep 6, 2023, 7:25 PM IST

ತಿಮ್ಮನ ಮೊಟ್ಟೆಗಳು ಚಿತ್ರದ ಮೇಕಿಂಗ್ ಟೀಸರ್

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ದಿ ಬೆಸ್ಟ್ ಸಿನಿಮಾಗಳ ಜೊತೆ ಜೊತೆಗೆ ಸಾಕಷ್ಟು ಪ್ರತಿಭೆ ಇರುವ ನಿರ್ದೇಶಕರು ಹಾಗೂ ನಟರ ಆಗಮನವಾಗುತ್ತಿದೆ. ಇದೀಗ 'ತಿಮ್ಮನ ಮೊಟ್ಟೆಗಳು' ಎಂಬ ಕುತೂಹಲಕಾರಿ ಟೈಟಲ್​ನ ಸಿನಿಮಾದೊಂದಿಗೆ ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ ಮುಖ್ಯ ಭೂಮಿಕೆಯಲ್ಲಿರೋ 'ತಿಮ್ಮನ ಮೊಟ್ಟೆಗಳು' ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

timmana mottegalu movie
'ತಿಮ್ಮನ ಮೊಟ್ಟೆಗಳು' ಸಿನಿಮಾ ಬಿಡುಗಡೆ ಸಜ್ಜು

ಕಾಡಿನ ನೆಂಟರು ಕಥಾ ಸಂಕಲನದಿಂದ ಆಯ್ದ ಕಥೆ: ತಿಮ್ಮನ ಮೊಟ್ಟೆಗಳು ಸಿನಿಮಾ ಸೆನ್ಸಾರ್​ ಮಂಡಳಿಯ ಪರೀಕ್ಷೆಯಲ್ಲಿ ಪಾಸಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ಕೊಟ್ಟಿದೆ. ನಿರ್ದೇಶಕ ರಕ್ಷಿತ್ ಬರೆದ ಕಾಡಿನ ನೆಂಟರು ಎಂಬ ಕಥಾ ಸಂಕಲನದಿಂದ ಆಯ್ದ ಕಥೆಯೇ 'ತಿಮ್ಮನ ಮೊಟ್ಟೆಗಳು' ಸಿನಿಮಾವಾಗಿದೆ.

ಮಲೆನಾಡಿನಲ್ಲಿ ತಿಮ್ಮನ ಮೊಟ್ಟೆಗಳು ಶೂಟಿಂಗ್​: ಮನುಷ್ಯನ ನಂಬಿಕೆ ಮತ್ತು ಆತನ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾವಸ್ತುವನ್ನು ಈ ಸಿನಿಮಾ ಒಳಗೊಂಡಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಜಾಗಗಳಲ್ಲಿ 'ತಿಮ್ಮನ ಮೊಟ್ಟೆಗಳು' ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

ತಿಮ್ಮನ ಮೊಟ್ಟೆಗಳು ಕಲಾವಿದರು: ಈ ಚಿತ್ರದಲ್ಲಿ ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ ಅಲ್ಲದೇ ಪ್ರಗತಿ ಪ್ರಭು, ಮಾಸ್ಟರ್ ಹರ್ಷ, ವಿನಯ್ ಕಣಿವೆ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.

timmana mottegalu movie
'ತಿಮ್ಮನ ಮೊಟ್ಟೆಗಳು' ಸಿನಿಮಾ ಬಿಡುಗಡೆ ಸಜ್ಜು

ಚಿತ್ರತಂಡ ಕುರಿತು... ಪ್ರವೀಣ್ ಎಸ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜ್ ಅವರ ಸಂಕಲನ ಹಾಗೂ ಹೇಮಂತ್ ಜೋಯ್ಸ್ ಸಂಗೀತ ಈ ಚಿತ್ರಕ್ಕಿದೆ. ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿರುವ ಮೂರು ಹಾಡುಗಳಿಗೆ ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ದನಿಯಾಗಿದ್ದಾರೆ.

ಇದನ್ನೂ ಓದಿ: ಸಿಬ್ಬಂದಿ ಮದುವೆಯಲ್ಲಿ ನ್ಯಾಷನಲ್ ಕ್ರಶ್.. ಒಂದೇ ಲೊಕೇಶನ್​ನಲ್ಲಿ ವಿಜಯ್​, ರಶ್ಮಿಕಾ ಫೋಟೋ - ಅಭಿಮಾನಿಗಳಲ್ಲಿ ಗೊಂದಲ

ಶ್ರೀಕೃಷ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಆದರ್ಶ ಅಯ್ಯಂಗಾರ್ ತಿಮ್ಮನ ಮೊಟ್ಟೆಗಳು ಚಿತ್ರಕ್ಕೆ ಹಣ ಹಾಕಿದ್ದಾರೆ. ಸದ್ಯ ತಿಮ್ಮನ ಮೊಟ್ಟೆಗಳು ಚಿತ್ರದ ಮೇಕಿಂಗ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಮಾರ್ಕೆಟಿಂಗ್ ಕೆಲಸದಲ್ಲಿ ತೊಡಗಿದ್ದು, ಈ ತಿಂಗಳಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದೆ.

ಇದನ್ನೂ ಓದಿ: 'ಟೇಲ್ಸ್ ಆಫ್ ಮಹಾನಗರ' ಟ್ರೇಲರ್​ ರಿಲೀಸ್​: ಸೆ.15ಕ್ಕೆ ತೆರೆ ಕಾಣಲಿದೆ ವಿಭಿನ್ನ ಕಥಾಹಂದರವುಳ್ಳ ಸಿನಿಮಾ

ಕನ್ನಡ ಚಿತ್ರರಂಗದಲ್ಲೀಗ ಕಂಟೆಂಟ್​ ಅಧಾರಿತ ಸಿನಿಮಾಗಳು ಮೂಡಿ ಬರುತ್ತಿವೆ. ಕೆಜಿಎಫ್​, ಕಾಂತಾರದಂತಹ ಸಿನಿಮಾಗಳ ಮೂಲಕ ಸ್ಯಾಂಡಲ್​ವುಡ್​ ಕಿರ್ತಿ ಹೆಚ್ಚಿದೆ. ಇತ್ತೀಚೆಗೆ ತೆರೆಕಂಡಿರುವ ಹಲವು ಸಿನಿಮಾಗಳು ಸಹ ಸಖತ್​ ಸದ್ದು ಮಾಡಿವೆ. ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ 'ತಿಮ್ಮನ ಮೊಟ್ಟೆಗಳು' ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.