ETV Bharat / entertainment

Tiger vs Pathaan: ಬರಲಿದೆ ಟೈಗರ್​ vs ಪಠಾಣ್​ ಸಿನಿಮಾ - ಸಲ್ಲು, ಎಸ್​ಆರ್​ಕೆ ಸ್ಕ್ರೀನ್​ ಶೇರ್ - ಶಾರುಖ್​​ ಸಲ್ಮಾನ್ ಸಿನಿಮಾ

Tiger vs Pathaan: ಬಾಲಿವುಡ್​​ನ ದಿಗ್ಗಜರಾದ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಮುಖ್ಯಭೂಮಿಕೆಯಲ್ಲಿ ಟೈಗರ್​ vs ಪಠಾಣ್ ಸಿನಿಮಾ ಮೂಡಿ ಬರಲಿದೆ.

Tiger vs Pathaan
ಟೈಗರ್​ vs ಪಠಾಣ್
author img

By ETV Bharat Karnataka Team

Published : Sep 16, 2023, 4:52 PM IST

ಶಾರುಖ್​ ಖಾನ್​​ ಅವರ ಇತ್ತೀಚಿನ ಬ್ಲಾಕ್​ಬಸ್ಟರ್ ಸಿನಿಮಾ 'ಪಠಾಣ್​​'. ಸಲ್ಮಾನ್​ ಖಾನ್​​ ಮುಖ್ಯಭೂಮಿಕೆಯ ಹಿಟ್​ ಚಿತ್ರ 'ಟೈಗರ್'​​. ಇದೀಗ ''ಟೈಗರ್​ vs ಪಠಾಣ್'' ಶೀರ್ಷಿಕೆಯ ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಟೈಗರ್​ ವರ್ಸಸ್​ ಪಠಾಣ್​​ ಸ್ಕ್ರಿಪ್ಟ್​ಗೆ ಬಾಲಿವುಡ್​ ದಿಗ್ಗಜರಾದ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​​ ಕೂಡ ಗ್ರೀನ್​​ ಸಿಗ್ನಲ್​ ಕೊಟ್ಟಿದ್ದಾರೆಂದು ವರದಿಯಾಗಿದೆ.

ಒಂದು ತಿಂಗಳ ಹಿಂದೆ ಪ್ರತ್ಯೇಕ ಮೀಟಿಂಗ್​​ಗಳಲ್ಲಿ ಶಾರುಖ್​ ಮತ್ತು ಸಲ್ಮಾನ್​ ಎದುರು ಟೈಗರ್​ ವರ್ಸಸ್​ ಪಠಾಣ್​​ ಸ್ಕ್ರಿಪ್ಟ್ ಪ್ರಸ್ತುತಪಡಿಸಲಾಗಿದೆ. ಇಬ್ಬರೂ ಸ್ಟಾರ್​ ನಟರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಾಜೆಕ್ಟ್​​ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಚಿತ್ರಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನವೆಂಬರ್​ನಲ್ಲಿ ಪ್ರಾರಂಭ ಆಗಲಿದೆ. ಮುಂದಿನ ಮಾರ್ಚ್​​ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಚಿತ್ರರಂಗದ ಮೂಲಗಳು ಈ ಚಿತ್ರದ ಬೆಳವಣಿಗೆ ಕುರಿತು ಮಾಹಿತಿ ಹಂಚಿಕೊಂಡಿವೆ. ಹಿಂದಿ ಚಿತ್ರರಂಗದ ಇಬ್ಬರು ದಿಗ್ಗಜರ ಕಾಂಬೋದ ಮಹತ್ವವವನ್ನು ಒತ್ತಿ ಹೇಳಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಒಂದೇ ಸ್ಕ್ರೀನ್​ನಲ್ಲಿ ತಂದು, ಅಪ್ರತಿಮ ಸ್ಪೈ ಆ್ಯಕ್ಷನ್ ಸಿನಿಮಾ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ​​

ಚಿತ್ರರಂಗದ ಮೂಲಗಳು, ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸಲು ಹೇಗೆ ಒಪ್ಪಿಕೊಂಡರು ಎಂಬುದಕ್ಕೆ ಕಾರಣವನ್ನೂ ಬಹಿರಂಗಪಡಿಸಿದೆ. ನಿರ್ಮಾಪಕ ಆದಿತ್ಯ ಚೋಪ್ರಾ, ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್ ಅವರೊಂದಿಗೆ ಸಿನಿಮಾ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಮೀಟಿಂಗ್​ನಲ್ಲಿ ಸಿನಿಮಾದ ಸ್ಟೋರಿ ಲೈನ್​ ಅನ್ನು ವಿವರಿಸಲಾಗಿದೆ. ಸೂಪರ್​​ ಸ್ಟಾರ್​ಗಳು ಸ್ಕ್ರಿಪ್ಟ್​ನಿಂದ ಪ್ರಭಾವಿತರಾಗಿದ್ದಾರೆ. ಹಾಗಾಗಿ ಯೋಜನೆ ಮುಂದುವರಿದಿದೆ. ಮಾರ್ಚ್​ನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಸದ್ಯದ ಮಾಹಿತಿ ನಿಜವಾದರೆ, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಪಕ್ಕಾ.

ಇದನ್ನೂ ಓದಿ: ಕರಣ್​ ಜೋಹರ್​ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್​ - ಸಮಂತಾ?!

ಟೈಗರ್​ ಮತ್ತು ಪಠಾಣ್​​ ವೈಆರ್​ಎಫ್​​ / ಯಶ್​​ ರಾಜ್​ ಫಿಲ್ಮ್ (ಚಲನಚಿತ್ರ ನಿರ್ಮಾಣ ಸಂಸ್ಥೆ)ಯ ಸ್ಪೈ ಯೂನಿವರ್ಸ್​​ನ ಪ್ರಮುಖ ಸಿನಿಮಾಗಳು. ಸ್ಪೈ ಆ್ಯಕ್ಷನ್​ ಸಿನಿಮಾಗಳು ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಅವರನ್ನೊಳಗೊಂಡ ಟೈಗರ್​ 1, ಟೈಗರ್​ 2 ಇಂದ ಹಿಡಿದು ಶಾರುಖ್​ ಮತ್ತು ದೀಪಿಕಾ ಪಡುಕೋಣೆ ಅವರನ್ನೊಳಗೊಂಡ ಪಠಾಣ್​ ವರೆಗೆ ತಲುಪಿದೆ. ಟೈಗರ್​ ವರ್ಸಸ್​ ಪಠಾಣ್​​ ಕೂಡ ಸ್ಪೈ ಸಿನಿಮಾವಾಗಿ ಮೂಡಿ ಬರಲಿದೆ.

ಇದನ್ನೂ ಓದಿ: ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡುತ್ತಾ 'ಜವಾನ್'​​?!

ಸ್ಪೈ ಯೂನಿವರ್ಸ್​ನ ಮುಂದಿನ ಸಿನಿಮಾ ಟೈಗರ್​ 3. ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಳಿಕ ಟೈಗರ್​ ವರ್ಸಸ್​ ಪಠಾಣ್​​ ಸಿನಿಮಾ ಕೆಲಸ ಚುರುಕುಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.