ETV Bharat / entertainment

'ಅರಣ್ಯಾಧಿಕಾರಿಗಳ ದಾಳಿ ಕಾನೂನುಬಾಹಿರ': ಹುಲಿ ಉಗುರು ಮಾದರಿ ಪೆಂಡೆಂಟ್‌ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್‌ - ಈಟಿವಿ ಭಾರತ ಕನ್ನಡ

ಹುಲಿ ಉಗುರಿನ ಮಾದರಿಯ ಪೆಂಡೆಂಟ್‌ ವಿಚಾರವಾಗಿ ಅರಣ್ಯಾಧಿಕಾರಿಗಳ ದಾಳಿ ಕಾನೂನುಬಾಹಿರ ಎಂದು ದೂರಿರುವ ನಟ ಜಗ್ಗೇಶ್,​ ಹೈಕೋರ್ಟ್​ಗೆ​ ಅರ್ಜಿ ಸಲ್ಲಿಸಿದ್ದಾರೆ.

Tiger claw case actor jaggesh moves high court against forest officials
ಹುಲಿ ಉಗುರು ಮಾದರಿ ಪೆಂಡೆಂಟ್‌ ಪ್ರಕರಣ: ಅರಣ್ಯಾಧಿಕಾರಿಗಳ ವಿರುದ್ಧ ಕೋರ್ಟ್​ ಮೊರೆ ಹೋದ ಜಗ್ಗೇಶ್​
author img

By ETV Bharat Karnataka Team

Published : Oct 26, 2023, 8:09 PM IST

Updated : Oct 26, 2023, 8:32 PM IST

ಬೆಂಗಳೂರು: ಹುಲಿ ಉಗುರಿನ ಮಾದರಿಯ ಪೆಂಡೆಂಟ್‌ ಧರಿಸಿರುವ ಆರೋಪ ಪ್ರಕರಣದಲ್ಲಿ ಮನೆ ಶೋಧ ನಡೆಸಿದ ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹುಲಿ ಉಗುರಿನ ಮಾದರಿ ಪೆಂಡೆಂಟ್‌ ಧರಿಸಿದ ಕೆಲವರ ಫೋಟೋಗಳು ವೈರಲ್​ ಆದ ಬಳಿಕ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ನಟರಾದ ಜಗ್ಗೇಶ್, ದರ್ಶನ್ ತೂಗುದೀಪ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಿ, ಬುಧವಾರ ಅವರ ಮನೆಗಳನ್ನು ಶೋಧಿಸಿದ್ದರು. ಆದರೆ, ಈ ನೋಟಿಸ್​ ಪ್ರಶ್ನಿಸಿ ಜಗ್ಗೇಶ್ ಇಂದು​ ನ್ಯಾಯಾಲಯದ ಕದ ತಟ್ಟಿದ್ದಾರೆ.

ನೋಟಿಸ್‌ಗೆ ಉತ್ತರಿಸುವ ಮೊದಲೇ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನು ಬಾಹಿರ. ಈ ನೋಟಿಸ್​ ಅನ್ನು ರದ್ದುಗೊಳಿಸುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಹುಲಿ ಉಗುರು ಮಾದರಿ ಪೆಂಡೆಂಟ್​ ಪ್ರಕರಣದಲ್ಲಿ ಇಬ್ಬರು ಅರ್ಚಕರ ಬಂಧನ

ಲಾಕೆಟ್​ ತಾಯಿ ಕೊಟ್ಟಿರುವ ಕಾಣಿಕೆ: ಇದಕ್ಕೂ ಮುನ್ನ, ತಾವು ಧರಿಸುವ ಲಾಕೆಟ್ ತಾಯಿ ಕೊಟ್ಟಿರುವ ಕಾಣಿಕೆ. ಅದನ್ನು ಅಧಿಕಾರಿಗಳಿಗೆ ಒಪ್ಪಿಸಿರುವುದಾಗಿ ಎಕ್ಸ್​ನಲ್ಲಿ ಬರೆದುಕೊಂಡಿದ್ದರು.

"ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತುವನ್ನು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ನೀಡಿದ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದಗಳು. ತಲೆತಗ್ಗಿಸುವ ಯಾವುದೇ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ" ಎಂದು ಜಗ್ಗೇಶ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

"ಒಂದು ವಿಷಯ ಅದ್ಭುತವಾಗಿ ಅರಿತೇ ಪ್ರೀತಿಸುವವರು 1,000 ಜನ ಇದ್ದರೆ, ವಿಷಯವಿಲ್ಲದೆ ದ್ವೇಷ ಮಾಡುವ 100 ಜನರೂ ಇದ್ದೇ ಇರುತ್ತಾರೆ. But remember one thing ಒಳ್ಳೆಯ ಗುಣ ನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರು ಕಾಯಲು ದೇವರು ಒಬ್ಬ ಬರುತ್ತಾನೆ. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶವಾಗುತ್ತಾರೆ" ಎಂದು ಹೇಳಿದ್ದರು.

ಹುಲಿ ಉಗುರು ಮಾದರಿ ಪೆಂಡೆಂಟ್‌ ಧರಿಸಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಿಗ್​ಬಾಸ್ ಸ್ಫರ್ಧಿ ವರ್ತೂರು ಸಂತೋಷ್ ಬಂಧನವಾಗಿದೆ. ಈ ಬೆನ್ನಲ್ಲೇ ಹುಲಿ ಉಗುರು ಧರಿಸಿದ ಆರೋಪದಡಿ ಜಗ್ಗೇಶ್, ತೂಗುದೀಪ್ ದರ್ಶನ್, ಬಿದನಗೆರೆಯ ಶನೇಶ್ವರ ದೇವಾಲಯದ ಅರ್ಚಕ ಧನಂಜಯ ಗುರೂಜಿ ಸೇರಿದಂತೆ ಹಲವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ನಟ ದರ್ಶನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋ ವೈರಲ್​: ಹುಬ್ಬಳ್ಳಿ ಕಾಂಗ್ರೆಸ್​ ಮುಖಂಡನ ಸ್ಪಷ್ಟನೆ ಹೀಗಿದೆ

Last Updated : Oct 26, 2023, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.