ETV Bharat / entertainment

ಸಲ್ಲು ಎಸ್​ಅರ್​ಕೆ ಭರ್ಜರಿ ಆ್ಯಕ್ಷನ್​ ಸೀನ್​ಗೆ ಮೂವರು ಸಾಹಸ ನಿರ್ದೇಕರು?!

author img

By

Published : Apr 13, 2023, 6:59 PM IST

'ಟೈಗರ್ 3' ಚಿತ್ರದಲ್ಲಿ ಎಸ್​ಆರ್​ಕೆ ಮತ್ತು ಸಲ್ಮಾನ್​​ ಆ್ಯಕ್ಷನ್​ ಸೀನ್​ಗೆ ಜಗತ್ತಿನ ಮೂವರು ಪ್ರಮುಖ ಸಾಹಸ ನಿರ್ದೇಕರು ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಎಂಬ ಮಾಹಿತಿ ಇದೆ.

SRK Salman in Tiger 3
ಟೈಗರ್​ 3ನಲ್ಲಿ ಎಸ್​ಆರ್​ಕೆ ಸಲ್ಮಾನ್​​

ಬಾಲಿವುಡ್​​ ಬೇಡಿಕೆ ನಟ ಸಲ್ಮಾನ್ ಖಾನ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ಟೈಗರ್ 3'. ಈ ಚಿತ್ರದಲ್ಲಿ ಪಠಾಣ್​ ನಟ ಶಾರುಖ್​ ಖಾನ್ ಅತಿಥಿ ಪಾತ್ರ ವಹಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.​ ಭಾರತ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಟೈಗರ್ 3ನ ವಿಶೇಷ ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಶೂಟಿಂಗ್​​ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮೂಲಗಳ ಪ್ರಕಾರ, ಒಬ್ಬರಲ್ಲ ಮೂವರು ಸಾಹಸ ನಿರ್ದೇಶಕರು ಈ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ಯೋಜಿಸುತ್ತಿದ್ದಾರೆ. ಹೌದು, ಈ ಮೆಗಾ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ವಿಶ್ವಾದ್ಯಂತದ ಮೂವರು ಪ್ರಮುಖ ಸಾಹಸ ನಿರ್ದೇಶಕರಾದ ಫ್ರಾಂಜ್ ಸ್ಪಿಲ್‌ಹೌಸ್ (Franz Spilhaus), ಪರ್ವೇಜ್ ಶೇಖ್ (Parvez Shaikh) ಮತ್ತು ಸೆ-ಯೊಂಗ್ ಓಹ್ (Se-yeong Oh) ನಿರ್ದೇಶಿಸಲಿದ್ದಾರೆ.

"ಟೈಗರ್ 3ನಲ್ಲಿ ಸಲ್ಮಾನ್ ಮತ್ತು ಶಾರುಖ್ ಮತ್ತೆ ಒಟ್ಟಿಗೆ ನಟಿಸಲಿದ್ದಾರೆಂಬ ವಿಚಾರ ಕೇಳಿದಾಗಿನಿಂದ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಮೆಚ್ಚಿನ ನಟರು ಹೇಗೆ ಕಾಣಿಸಬಹುದು ಎಂದು ಊಹಿಸ ತೊಡಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈ ಮೇರು ನಟರ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.

ಆದಿತ್ಯ ಚೋಪ್ರಾ ನಿರ್ಮಾಣದ, ಮನೀಶ್ ಶರ್ಮಾ ನಿರ್ದೇಶನ ಈ ಚಿತ್ರದಲ್ಲಿ ಆ್ಯಕ್ಷನ್​​ ಸೀನ್​​​ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಪ್ರೇಕ್ಷಕರ ಮೇಲೆ ಪ್ರಭಾವ ಬೀರಲು ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ. ಅದಕ್ಕಾಗಿಯೇ ಟೈಗರ್ 3ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ಮೂವರು ಸಾಹಸ ನಿರ್ದೇಶಕರು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಮಗಾಗಿ ಇನ್ನೂ ಏನೆಲ್ಲ ಸರ್​ಪ್ರೈಸ್​ ಕಾಯ್ದಿರಿಸಿದ್ದಾರೆ ಎಂದು ನೋಡೋಣ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಈ ತಿಂಗಳಲ್ಲೇ ಶಾರುಖ್​ ಖಾನ್​​ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಮುಂಬೈನಲ್ಲಿ ಏಳು ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದಾರೆ. ಈ ಚಿತ್ರ ದೀಪಾವಳಿ ಸಂದರ್ಭ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ.

ಈ ಹಿಂದೆ ಸಲ್ಮಾನ್ ಮತ್ತು ಎಸ್‌ಆರ್‌ಕೆ ಸಾಹಸ ದೃಶ್ಯವನ್ನು ಸೆರೆ ಹಿಡಿಯಲು ಬೃಹತ್ ಸೆಟ್ ಅನ್ನು ನಿರ್ಮಿಸಲಾಗುತ್ತಿದ್ದು, 45 ದಿನಗಳ ಸಮಯ ಹಿಡಿಯಲಿದೆ ಎಂದು ಮೂಲಗಳು ತಿಳಿಸಿತ್ತು. ಇದೀಗ ಮೂವರು ಸ್ಟಾರ್ ಡೈರೆಕ್ಟರ್​ಗಳಲ್ಲಿ ಈ ಭಾಗಕ್ಕೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗಾದರೆ ಆ ಆ್ಯಕ್ಷನ್​ ಸೀಕ್ವೆನ್ಸ್​ ಯಾವ ಮಟ್ಟದಲ್ಲಿ ಇರಬಹುದು ಎಂದು ನೀವೇ ಊಹಿಸಿ.

ಇದನ್ನೂ ಓದಿ: The Crew: ಮೂವರು ಬಾಲಿವುಡ್​ ಬೆಡಗಿಯರ ಜೊತೆ ಕಪಿಲ್​ ಶರ್ಮಾ

ಈ ಆ್ಯಕ್ಷನ್​ ಥ್ರಿಲ್ಲರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದು ಸ್ಪೈ ಥ್ರಿಲ್ಲರ್ ಫ್ರಾಂಚೈಸಿಯ ಮೂರನೇ ಭಾಗ. ಮೊದಲೆರಡು ಭಾಗದಲ್ಲಿಯೂ ಕತ್ರಿನಾ ಮತ್ತು ಸಲ್ಮಾನ್​ ತೆರೆ ಹಂಚಿಕೊಂಡಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಮೂರನೇ ಭಾಗದಲ್ಲಿಯೂ ಅವರೇ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇದನ್ನೂ ಓದಿ: ಮುದ್ದಾದ ವಿಡಿಯೋ ಹಂಚಿಕೊಂಡು ಪುತ್ರಿಯ ಗುಣಗಾನ ಮಾಡಿದ ಕಿಂಗ್​​​​​​​ ಖಾನ್​​

2012ರಲ್ಲಿ ಬಿಡುಗಡೆ ಆದ ಮೊದಲ ಭಾಗ 'ಏಕ್ ಥಾ ಟೈಗರ್' ಅನ್ನು ಕಬೀರ್ ಖಾನ್ ನಿರ್ದೇಶಿಸಿದ್ದರು. ಟೈಗರ್​ 2 / ಟೈಗರ್ ಜಿಂದಾ ಹೈ ಸಿನಿಮಾ 2017ರಲ್ಲಿ ಬಿಡುಗಡೆ ಅಗಿದ್ದು, ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್​ ಕಟ್ ಹೇಳಿದ್ದರು. ಟೈಗರ್ 3 ಮನೀಶ್​ ಶರ್ಮಾ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.