ETV Bharat / entertainment

ದೀಪಾವಳಿಗೆ ಬರಲಿದೆ ಬಹುನಿರೀಕ್ಷಿತ 'ಟೈಗರ್​ 3'.. ಸಲ್ಮಾನ್​- ಕತ್ರಿನಾ ಬಂಧೂಕು ಹಿಡಿದ ಪೋಸ್ಟರ್​ ಔಟ್​ - ಈಟಿವಿ ಭಾರತ ಕನ್ನಡ

Tiger 3 new poster out: ಸಲ್ಮಾನ್​ ಖಾನ್​ ನಟನೆಯ ಬಹುನಿರೀಕ್ಷಿತ 'ಟೈಗರ್​ 3' ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ.

Tiger 3 new poster out
'ಟೈಗರ್​ 3'
author img

By ETV Bharat Karnataka Team

Published : Sep 2, 2023, 7:26 PM IST

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟೈಗರ್​ 3'. ಟೈಗರ್ 3 ಆಕ್ಷನ್ ಚಿತ್ರದ ಮೂರನೇ ಭಾಗವಾಗಿದೆ. ಇದರ ಮೊದಲ ಅಧ್ಯಾಯವು 'ಏಕ್ ಥಾ ಟೈಗರ್ ಥಾ' 2012 ರಲ್ಲಿ ಬಿಡುಗಡೆಯಾಯಿತು. ಕಬೀರ್ ಖಾನ್ ನಿರ್ದೇಶಿಸಿದ್ದರು. ಇದರ ನಂತರ 2017 ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ರಿಲೀಸ್​ ಆಯಿತು. ಇದೀಗ ಟೈಗರ್​ 3ಯನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಸಿನಿ ಪ್ರೇಮಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ.

ಪೋಸ್ಟರ್​ ರಿಲೀಸ್​: ಸಲ್ಮಾನ್ ಖಾನ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ. ಸಲ್ಮಾನ್​​ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್​ ವಿರುದ್ಧ ಹೋರಾಡುವ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಬಿಡುಗಡೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗ ಸಲ್ಮಾನ್​ ಖಾನ್​ ಟೈಗರ್​ ಚಿತ್ರದ ಹೊಸ ಪೋಸ್ಟರ್​ ಅನ್ನು ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಪೋಸ್ಟರ್​ ಅನ್ನು ಹಂಚಿಕೊಳ್ಳಲು ಸಲ್ಮಾನ್​ ಖಾನ್​ ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು. "ಬರ್ತಾ ಇದ್ದೀವಿ. ಟೈಗರ್​ 3, 2023ರ ದೀಪಾವಳಿಗೆ. ನಿಮ್ಮ ಹತ್ತಿರದ ದೊಡ್ಡ ಪರದೆಯಲ್ಲಿ ಆಚರಿಸಿ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ." ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಪೋಸ್ಟರ್​ನಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಯಲ್ಲಿ ಬಂದೂಕು ಹಿಡಿದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಅರ್ಬಾಜ್​ ಖಾನ್​ ಬರ್ತ್​ಡೇ ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಹೊಸ ಲುಕ್: 'ಬಾರ್ಬಿ'ಗೆ ಹೋಲಿಸಿದ ನೆಟ್ಟಿಗರು​

ಕತ್ರಿನಾ ಕೈಫ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ. "ನೋ ಮಿಲ್ ಇಟ್ಸ್. ನೋ ಫಿಯರ್. ನೋ ಟರ್ನ್ ಬ್ಯಾಕ್. ಈ ದೀಪಾವಳಿಗೆ ಟೈಗರ್ 3 ಥಿಯೇಟರ್‌ಗಳಲ್ಲಿ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್​ ಶೇರ್​ ಆದ ಕೂಡಲೇ ಅಭಿಮಾನಿಗಳು ಕಮೆಂಟ್​ ವಿಭಾಗಕ್ಕೆ ಮುಗಿಬಿದ್ದರು. ನೆಟ್ಟಿಗರೊಬ್ಬರು, "ಕಾಯುತ್ತಿದ್ದೇವೆ.. ಆ ಜಾವೋ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ವಾವ್! ಚಿತ್ರ ವೀಕ್ಷಿಸಲು ಎದುರು ನೋಡುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಶಾರುಖ್​- ಸಲ್ಮಾನ್​ ಮತ್ತೊಮ್ಮೆ.. ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಬಾಲಿವುಡ್​​ನ ಸೂಪರ್​ ಸ್ಟಾರ್​ಗಳು. ಇವರಿಬ್ಬರು 'ಪಠಾಣ್'​ ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ವಿವಾದಗಳಿಂದಲೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದವು. ಅವರು ಮತ್ತೆ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್​ 3'. ಈ ಸ್ಟಾರ್​ ನಟರ ಕಾಂಬೋವನ್ನು ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: Tiger 3 ಹಾಡಿಗೆ ನಟಿ ಕತ್ರಿನಾ ರಿಹರ್ಸಲ್​; ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.