ETV Bharat / entertainment

ಸಿನಿಪ್ರೇಮಿಗಳೇ...! ಇದೇ 28ರಂದು ಕನ್ನಡದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ - ತೋತಾಪುರಿ 2

ಸೆಪ್ಟೆಂಬರ್​ 28ರಂದು 4 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

three kannada movies will be release on september 28
ಇದೇ 28ರಂದು ಕನ್ನಡದಲ್ಲಿ ಮೂರು ಸಿನಿಮಾಗಳು ರಿಲೀಸ್​
author img

By ETV Bharat Karnataka Team

Published : Sep 26, 2023, 11:05 PM IST

ಸ್ಯಾಂಡಲ್​ವುಡ್​ನಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಸಿನಿಮಾಗಳೇ ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್​, ಚಾರ್ಲಿ ಹೀಗೆ ಸಾಕಷ್ಟು ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಕೋಟ್ಯಾಂತರ ರೂಪಾಯಿ ಸಂಪಾದಿಸಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿದೆ. ವಿಶ್ವದಾದ್ಯಂತ ಅನೇಕ ಕನ್ನಡದ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ. ಈ ನಡುವೆ ಇದೇ ತಿಂಗಳು ಮತ್ತೆ ನಾಲ್ಕು ಸಿನಿಮಾಗಳು ಒಂದೇ ದಿನ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿಯಾಗಲು ಸಜ್ಜಾಗಿವೆ.

ಸೆಪ್ಟೆಂಬರ್​ 28ರಂದು 4 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ 'ಬಾನ ದಾರಿಯಲಿ', ರಾಘವ​ ಲಾರೆನ್ಸ್​​ ಮತ್ತು ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿರುವ 'ಚಂದ್ರಮುಖಿ 2', 'ದಿ ಕಾಶ್ಮೀರಿ ಫೈಲ್ಸ್​' ಖ್ಯಾತಿಯ ವಿವೇಕ್​​ ರಂಜನ್​ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್​ ವಾರ್' ಮತ್ತು ನವರಸ ನಾಯಕ ಜಗ್ಗೇಶ್​ ಮತ್ತು ಡಾಲಿ ಧನಂಜಯ್​ ನಟನೆಯ 'ತೋತಾಪುರಿ 2' ಇನ್ನೆರಡು ದಿನಗಳಲ್ಲಿ ನಿಮ್ಮನ್ನು ರಂಜಿಸಲು ಥಿಯೇಟರ್​ಗೆ ಬರುತ್ತಿದೆ. 'ಬಾನ ದಾರಿಯಲಿ' ಮತ್ತು 'ತೋತಾಪುರಿ 2' ಕನ್ನಡ ಸಿನಿಮಾವಾದರೆ, ಉಳಿದೆರಡು ಚಿತ್ರಗಳು ಕೂಡ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗಲಿದೆ.

'ಬಾನ ದಾರಿಯಲಿ': ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಬಾನದಾರಿಯಲಿ'. ಸಿನಿಮಾದಲ್ಲಿ ಗಣೇಶ್​ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ ಹಾಗೂ ಅರ್ಜುನ್ ಜನ್ಯ ಸಂಗೀತವಿದೆ.

ಶ್ರೀವಾರಿ ಟಾಕೀಸ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಟ್ರೇಲರ್ ಬಿಡುಗಡೆಯಾಗಿದ್ದು, ಹೆಚ್ಚು​ ಸದ್ದು ಮಾಡುತ್ತಿದೆ. ಗೆಲ್ಲುವ ಭರವಸೆ ಹುಟ್ಟಿಸಿರೋ 'ಬಾನದಾರಿಯಲಿ' ಸಿನಿಮಾ ಸೆಪ್ಟೆಂಬರ್ 28ರಂದು ಕೆಆರ್​ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕ್ರಿಕೆಟ್ ಆಟಗಾರನಾಗಿ ಗಣಿ ಸಿನಿಪ್ರೇಮಿಗಳನ್ನು ಎಷ್ಟರ ಮಟ್ಟಿಗೆ ರಂಜಿಸುತ್ತಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

'ತೋತಾಪುರಿ 2': ಒಂದೇ ಸೂರಿನಡಿ ಬದುಕುತ್ತಿರುವ ನಾವೆಲ್ಲ ಒಂದೇ ಎನ್ನುವ ಭಾವೈಕ್ಯತೆಯ ಸಂದೇಶ ಹೊಂದಿದ್ದ 'ತೋತಾಪುರಿ' ಚಿತ್ರ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮುಂದುವರಿದ ಭಾಗ 'ತೋತಾಪುರಿ 2' ಇನ್ನೆರಡು ದಿನದಲ್ಲಿ ತೆರೆಕಾಣಲು ಸಿದ್ಧವಾಗಿದೆ. 'ಸಿದ್ಲಿಂಗು' ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ 'ತೋತಾಪುರಿ 2' ಚಿತ್ರದಲ್ಲಿ ನವರಸನಾಯಕ ಜಗ್ಗೇಶ್​ ಮತ್ತು ಡಾಲಿ ಧನಂಜಯ್​ ಅಭಿನಯಿಸಿದ್ದಾರೆ.

'ಚಂದ್ರಮುಖಿ 2': ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್​ ಕೊರಿಯೋಗ್ರಾಫರ್​ ರಾಘವ​ ಲಾರೆನ್ಸ್​​ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಯ ಬಹುನಿರೀಕ್ಷಿತ ಚಿತ್ರ 'ಚಂದ್ರಮುಖಿ 2'. ಈ ಹಾರರ್​ ಕಾಮಿಡಿ ಸಿನಿಮಾ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿದೆ. 2005 ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್​ ಸಿನಿಮಾ ಚಂದ್ರಮುಖಿ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್​ಸ್ಟಾರ್​ ರಜನಿಕಾಂತ್​ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್​ ಲೀಸ್ಟ್​ ಸೇರಿತ್ತು.

18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್​ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟಂಬರ್​ 28ರಂದು ಬಿಡುಗಡೆಯಾಗಲಿದೆ. ಈ ಮೊದಲು ಸಿನಿಮಾವನ್ನು ಸೆಪ್ಟೆಂಬರ್​ 19ರಂದು ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು.

'ದಿ ವ್ಯಾಕ್ಸಿನ್​ ವಾರ್': ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ 'ದಿ ಕಾಶ್ಮೀರಿ ಫೈಲ್ಸ್​' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ಇದೀಗ, ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್​ ವಾರ್​' ಚಲನಚಿತ್ರ ತಯಾರಿಸಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಸೆಪ್ಟೆಂಬರ್​ 28ರಂದು ತೆರೆ ಕಾಣಲಿದೆ.

ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್​ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಜಯ್​ ಭೂಪತಿ ನಿರ್ದೇಶನದ 'ಮಂಗಳವಾರಂ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.