ETV Bharat / entertainment

2023ರಲ್ಲಿ ಕಂಬ್ಯಾಕ್​ ಮಾಡಲಿದ್ದಾರೆ ಬಾಲಿವುಡ್​ನ ಈ ತಾರೆಗಳು - ನಟಿ ಅನುಷ್ಕಾ ಶರ್ಮಾ

ಸುದೀರ್ಘ ವಿರಾಮದ ಬಳಿಕ ಅನೇಕ ನಟ ನಟಿಯರ ಚಿತ್ರ ಬಿಡುಗಡೆಗೆ ಸಜ್ಜು - ಹೊಸ ವರ್ಷಕ್ಕೆ ಬಾಲಿವುಡ್​ನಲ್ಲಿ ಸಿನಿಮಾ ಹಬ್ಬ- ಸ್ಟಾರ್​ ನಟರ ಚಿತ್ರ ಬಿಡುಗಡೆಗೆ ಸಿದ್ದ

2023ರಲ್ಲಿ ಕಂಬ್ಯಾಕ್​ ಮಾಡಲಿದ್ದಾರೆ ಬಾಲಿವುಡ್​ನ ಈ ತಾರೆಗಳು
these-bollywood-stars-will-make-a-comeback-in-2023
author img

By

Published : Jan 2, 2023, 3:23 PM IST

ಮುಂಬೈ: ಈ ವರ್ಷ ಬಾಲಿವುಡ್​ನ ಅನೇಕ ನಟ - ನಟಿಯರ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಕಿಂಗ್​ ಖಾನ್​ ಶಾರುಖ್​ ಖಾನ್​ನಿಂದ ಫರ್ದೀನ್​ ಖಾನ್​ ವರೆಗೆ ಅನೇಕ ನಟರು ದೀರ್ಘ ಕಾಲದ ವಿರಾಮದ ಬಳಿಕ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ.

2023 ಯಾವ ನಟರ ಕಂಬ್ಯಾಕ್ - ಶಾರುಖ್​ ಖಾನ್​: 2018ರಲ್ಲಿ ಜೀರೋ ಚಿತ್ರ ಶಾರುಖ್​ ಖಾನ್​ ಅಭಿನಯದ ಕಡೆಯ ಚಿತ್ರವಾಗಿದೆ. ಈ ನಾಲ್ಕು ವರ್ಷಗಳ ಬಳಿಕ ಕಿಂಗ್​ ಖಾನ್​ ಪಠಾಣ್​ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ಸಾಹಸ ಆಧಾರಿತ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಹಾಂ ನಟನೆ ಕೂಡ ಇದೆ. ಈ ಚಿತ್ರ ಇದೆ ಜನವರಿ 25ರಂದು ಬಿಡುಗಡೆಯಾಗಲಿದೆ. ಇದಾದ ಬೆನ್ನಲ್ಲೇ ಜವಾನ್​ ಮತ್ತು ಡುಂಕಿ ಬಿಡುಗಡೆಯಾಗಲಿದೆ.

ಫರ್ದಿನ್​ ಖಾನ್​
ಫರ್ದಿನ್​ ಖಾನ್​

ಫರ್ದಿನ್​ ಖಾನ್​: 11 ವರ್ಷಗಳ ಭಾರೀ ಅಂತರದ ಬಳಿಕ ನಟ ಫರ್ದೀನ್​ ಖಾನ್​ ವಿಸ್ಫೋಟ್​ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಲಿದ್ದಾರೆ. ವೆನಿಜೂಲೆನ್​ ಫಿಲ್ಮ್​ ರಾಕ್​ ಪೇಪರ್​ ಸೀಸರ್​ ಚಿತ್ರದ ಹಿಂದಿ ರಿಮೇಕ್​ ಆಗಿದೆ. 85ನೇ ಅಕಾಡೆಮಿ ಅವಾರ್ಡ್​​ನಲ್ಲಿ ಈ ಚಿತ್ರ ಉತ್ತಮ ವಿದೇಶಿ ಬಾಷಾ ಸಿನಿಮಾ ಅಡಿ ಪ್ರವೇಶ ಪಡೆದಿತ್ತು. ಈ ಚಿತ್ರವನ್ನು ಕೋಕಿ ಗುಲಟಿ ನಿರ್ದೇಶಿಸಿದ್ದು, ರಿತೇಶ್​ ದೇಶ್​ಮುಖ ಕೂಡ ಚಿತ್ರದಲ್ಲಿದ್ದಾರೆ. ಫರ್ದೀನ್​ ಖಾನ್​ 2010ರಲ್ಲಿ ದುಲ್ಹಾ ಮಿಲ್​ಗಾಯ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು.

ಅನುಷ್ಕಾ ಶರ್ಮಾ: ನಾಲ್ಕು ವರ್ಷಗಳ ಬಳಿಕ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಜೀರೋ ಚಿತ್ರದಲ್ಲಿ ಕಡೆಯದಾಗಿ ನಟಿಸಿದ್ದ ಅನುಷ್ಕಾ ಶರ್ಮಾ ಚಕ್ಡಾ ಎಕ್ಸ್​ಪ್ರೆಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಭಾರತೀಯ ಕ್ರಿಕೆಟರ್​ ಜುಲನ್​ ಗೋಸ್ವಾಮಿ ಜೀವನಾಧರಿತ ಸಿನಿಮಾ ಇದಾಗಿದೆ. ವಿಶೇಷ ಎಂದರೆ ಮಗಳು ವಮಿಕಾ ಹುಟ್ಟಿದ ಬಳಿಕ ಬರುತ್ತಿರುವ ಚಿತ್ರ ಇದಾಗಿದೆ.

ಹೆಲೆನ್​: ಮಧುರ್​ ಬಂಡಾರ್ಕರ್​ ಹಿರೋಹಿನ್​ ಎಂದೇ ಖ್ಯಾತಿ ಗೊಂಡಿರುವ ಹಿರಿಯ ನಟಿ ಹೆಲೆನ್​ ಚಿತ್ರ ಕೂಡ ಇದೇ ವರ್ಷ ತೆರೆಗೆ ಬರುತ್ತಿದೆ.

ಇದನ್ನೂ ಓದಿ: 'ಪೆಪೆ' ಸಿನಿಮಾದ ಹೊಸ ಪೋಸ್ಟರ್​ ಹಂಚಿಕೊಂಡ ಚಿತ್ರತಂಡ: ವಿನಯ್​ ರಾಜ್​ಕುಮಾರ್​ ಲುಕ್​ಗೆ ಫ್ಯಾನ್ಸ್​ ಫಿದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.