ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಿನಿಮಾಗಳು ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್, ಪಠಾಣ್, ಜೈಲರ್ ಹೀಗೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿವೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿವೆ. ವಿಶ್ವಾದ್ಯಂತ ಭಾರತದ ಸಿನಿಮಾಗಳು ತಿಂಗಳುಗಟ್ಟಲೆ ಪ್ರದರ್ಶನ ಕಾಣುತ್ತಿವೆ. ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಇದೀಗ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಈ ನಡುವೆ ಇದೇ ತಿಂಗಳು ಮತ್ತೆ ಮೂರು ಸಿನಿಮಾಗಳು ಒಂದೇ ದಿನ ಸಿಲ್ವರ್ ಸ್ಟ್ಕೀನ್‌ನಲ್ಲಿ ಮಿಂಚಲು ಸಜ್ಜಾಗಿವೆ.
ಸೆಪ್ಟೆಂಬರ್ 28ರಂದು ಬಹುನಿರೀಕ್ಷಿತ 3 ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬಾನ ದಾರಿಯಲಿ', ರಾಘವ ಲಾರೆನ್ಸ್ ಮತ್ತು ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿರುವ 'ಚಂದ್ರಮುಖಿ 2' ಹಾಗೂ 'ದಿ ಕಾಶ್ಮೀರಿ ಫೈಲ್ಸ್' ಖ್ಯಾತಿಯ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಈ ಸಿನಿಮಾಗಳಿಗಾಗಿ ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ. 'ಬಾನ ದಾರಿಯಲಿ' ಕನ್ನಡ ಸಿನಿಮಾವಾದರೆ, ಉಳಿದೆರಡು ಸಿನಿಮಾ ಕೂಡ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗಲಿದೆ.
-
It never trends without love 💕#Baanadariyalli trailer Trending at #1#BaanadariyalliTrailer 𝐎𝐔𝐓 𝐍𝐎𝐖 on @aanandaaudio YouTube Channel.#Baanadariyalli https://t.co/4z6UrWguRI pic.twitter.com/zPwatV9LxV
— Ganesh (@Official_Ganesh) September 6, 2023 " class="align-text-top noRightClick twitterSection" data="
">It never trends without love 💕#Baanadariyalli trailer Trending at #1#BaanadariyalliTrailer 𝐎𝐔𝐓 𝐍𝐎𝐖 on @aanandaaudio YouTube Channel.#Baanadariyalli https://t.co/4z6UrWguRI pic.twitter.com/zPwatV9LxV
— Ganesh (@Official_Ganesh) September 6, 2023It never trends without love 💕#Baanadariyalli trailer Trending at #1#BaanadariyalliTrailer 𝐎𝐔𝐓 𝐍𝐎𝐖 on @aanandaaudio YouTube Channel.#Baanadariyalli https://t.co/4z6UrWguRI pic.twitter.com/zPwatV9LxV
— Ganesh (@Official_Ganesh) September 6, 2023
'ಬಾನ ದಾರಿಯಲಿ': ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಬಾನದಾರಿಯಲಿ'. ಸಿನಿಮಾದಲ್ಲಿ ಗಣೇಶ್ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ ಹಾಗೂ ಅರ್ಜುನ್ ಜನ್ಯ ಸಂಗೀತವಿದೆ.
ಶ್ರೀವಾರಿ ಟಾಕೀಸ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಟ್ರೇಲರ್ ಬಿಡುಗಡೆಯಾಗಿದ್ದು, ಹೆಚ್ಚು ಸದ್ದು ಮಾಡುತ್ತಿದೆ. ಗೆಲ್ಲುವ ಭರವಸೆ ಹುಟ್ಟಿಸಿರೋ 'ಬಾನದಾರಿಯಲಿ' ಸಿನಿಮಾ ಸೆಪ್ಟೆಂಬರ್ 28ರಂದು ಕೆಆರ್ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕ್ರಿಕೆಟ್ ಆಟಗಾರನಾಗಿ ಗಣಿ ಸಿನಿಪ್ರೇಮಿಗಳನ್ನು ಎಷ್ಟರ ಮಟ್ಟಿಗೆ ರಂಜಿಸುತ್ತಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.
ಇದನ್ನೂ ಓದಿ: ಬಾನ ದಾರಿಯಲ್ಲಿ.."ನಿನ್ನನ್ನು ನೋಡಿದ ನಂತರ" ಹಾಡು ಬಿಡುಗಡೆ
-
Chandramukhi-2 release date has been pushed to September 28 due to technical delays. 🌸 Vettaiyan & Chandramukhi will be back fiercer than ever. 🏇🗡️
— Lyca Productions (@LycaProductions) September 8, 2023 " class="align-text-top noRightClick twitterSection" data="
See you at the theatres with an extra special treat. 🕴🏻🤗
🎬 #PVasu
🌟 @offl_Lawrence @KanganaTeam
🎶 @mmkeeravaani
🎥… pic.twitter.com/zrJAT7psri
">Chandramukhi-2 release date has been pushed to September 28 due to technical delays. 🌸 Vettaiyan & Chandramukhi will be back fiercer than ever. 🏇🗡️
— Lyca Productions (@LycaProductions) September 8, 2023
See you at the theatres with an extra special treat. 🕴🏻🤗
🎬 #PVasu
🌟 @offl_Lawrence @KanganaTeam
🎶 @mmkeeravaani
🎥… pic.twitter.com/zrJAT7psriChandramukhi-2 release date has been pushed to September 28 due to technical delays. 🌸 Vettaiyan & Chandramukhi will be back fiercer than ever. 🏇🗡️
— Lyca Productions (@LycaProductions) September 8, 2023
See you at the theatres with an extra special treat. 🕴🏻🤗
🎬 #PVasu
🌟 @offl_Lawrence @KanganaTeam
🎶 @mmkeeravaani
🎥… pic.twitter.com/zrJAT7psri
'ಚಂದ್ರಮುಖಿ 2': ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಚಂದ್ರಮುಖಿ 2'. ಈ ಹಾರರ್ ಕಾಮಿಡಿ ಸಿನಿಮಾ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿದೆ. 2005 ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು.
18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟಂಬರ್ 28ರಂದು ಬಿಡುಗಡೆಯಾಗಲಿದೆ. ಈ ಮೊದಲು ಸಿನಿಮಾವನ್ನು ಸೆಪ್ಟೆಂಬರ್ 19ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು.
-
PRESENTING:
— Vivek Ranjan Agnihotri (@vivekagnihotri) September 9, 2023 " class="align-text-top noRightClick twitterSection" data="
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtI
">PRESENTING:
— Vivek Ranjan Agnihotri (@vivekagnihotri) September 9, 2023
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtIPRESENTING:
— Vivek Ranjan Agnihotri (@vivekagnihotri) September 9, 2023
The first look of India’s first ever Bio-science film #TheVaccineWar.
Releasing worldwide on 28 September 2023. pic.twitter.com/svasq9XXtI
'ದಿ ವ್ಯಾಕ್ಸಿನ್ ವಾರ್': ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಇದೀಗ, ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್ ವಾರ್' ಚಲನಚಿತ್ರ ತಯಾರಿಸಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಸೆಪ್ಟೆಂಬರ್ 28ರಂದು ತೆರೆ ಕಾಣಲಿದೆ.
ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: Chandramukhi 2 trailer: ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಟ್ರೇಲರ್ ಬಿಡುಗಡೆ