ETV Bharat / entertainment

OMG 2 ಚಿತ್ರದಲ್ಲಿ ಯಾವುದೇ ಸಂಶಯಾತ್ಮಕ ಅಂಶವಿಲ್ಲ.. ಯಾಮಿ ಗೌತಮ್​​

author img

By

Published : Aug 9, 2023, 8:10 AM IST

ಶುಕ್ರವಾರ ತೆರೆ ಮೇಲೆ ಅಪ್ಪಳಿಸಲು ಅಕ್ಷಯ್​ ಕುಮಾರ್​ ಅಭಿನಯದ ಓಎಂಜಿ- 2 ಸನ್ನದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರು ನಟಿ ಯಾಮಿ ಗೌತಮಿ, ಚಿತ್ರದಲ್ಲಿ ಅಂತಹ ಯಾವುದೇ ಸಂಶಯಾತ್ಮಕ ಅಂಶಗಳು ಇಲ್ಲ ಎಂದು ಹೇಳಿದ್ದಾರೆ.

There is nothing sceptical in this film
OMG 2 ಚಿತ್ರದಲ್ಲಿ ಯಾವುದೇ ಸಂಶಯಾತ್ಮಕ ಅಂಶವಿಲ್ಲ... ಯಾಮಿ ಗೌತಮ್​​

ಮುಂಬೈ: ಬಹು ನಿರೀಕ್ಷಿತ ಓ ಮೈ ಗಾಡ್​ -2 (OMG 2) ಚಿತ್ರ ಚಿತ್ರರಸಿಕರ ಮನ ತಣಿಸಲು ಸನ್ನದ್ಧವಾಗಿದೆ. ಆಗಸ್ಟ್​ 11 ರಂದು ತೆರೆ ಮೇಲೆ ಅಪ್ಪಳಿಸಲಿದೆ. ಅಕ್ಷಯ್​ ಕುಮಾರ್​ ಬಹುನಿರೀಕ್ಷಿತ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅನುಮತಿ ಸಿಕ್ಕಿದೆ. ಸಿಬಿಎಫ್​ಸಿ ಅನುಮತಿ ಬಳಿಕ ಮಾತನಾಡಿರುವ ನಟಿ ಯಾಮಿ ಗೌತಮ್ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದಲ್ಲಿ ಯಾವುದೇ ವಿವಾದಿತ ಅಂಶಗಳಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದ ಜತೆ ಮಾಡತನಾಡಿದ ಅವರು, ಈ ಚಿತ್ರವನ್ನು ಬಂದು ನೋಡಿದಾಗ ಗೊತ್ತಾಗುತ್ತದೆ. ಸಿನಿಮಾದಲ್ಲಿ ಅಂತಹ ಯಾವುದೇ ಸಂದೇಹಾತ್ಮಕ ಅಂಶಗಳಿಲ್ಲ ಎನ್ನುವುದನ್ನು ಅವರೇ ಕಂಡುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮವಾದ ವಿಷಯವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇಡೀ ವಿಷಯವನ್ನು ಮನಮುಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ನ್ಯಾಯಾಲಯಗಳಲ್ಲಿ ನಡೆಯುವ ವಿಷಯಗಳನ್ನ ಪ್ರೇಕ್ಷಕರಿಗೆ ನೀಡಲಾಗಿದೆ. ಈ ಚಿತ್ರದಲ್ಲಿ ಹಾಸ್ಯ ಮತ್ತು ಸಾಕಷ್ಟು ಮನರಂಜನೆಯೂ ಇದೆ. ನಾನು ಸಹ ಈ ಚಿತ್ರದ ಭಾಗವಾಗಿರಲು ಸಂತೋಷಪಡುತ್ತೇನೆ ಎಂದು ಯಾಮಿ ಹೇಳಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ನಟ ಪಂಕಜ್ ತ್ರಿಪಾಠಿ ಮಾತನಾಡಿ, ಚಿತ್ರವನ್ನು "ಮುನ್ನೆಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ. “ಇದೊಂದು ಪ್ರಮುಖ ಕಥೆಯಾಗಿದ್ದು, ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದಾಗ ಸಾಕಷ್ಟು ವಿವಾದಗಳು ಎದ್ದಿದ್ದವು. ನಾನು ಚಿತ್ರದ ಬಗ್ಗೆ ತುಂಬಾ ಮಾತನಾಡಲು ಬಯಸುತ್ತೇನೆ ಮತ್ತು ಎಲ್ಲರಿಗೂ ಹೇಳಲು ಬಯಸುವುದೇನು ಎಂದರೆ ದಯವಿಟ್ಟು ಮೊದಲು ಸಿನಿಮಾ ನೋಡಿ, ಅರ್ಥ ಮಾಡಿಕೊಳ್ಳಿ, ಆ ಬಳಿಕ ನಿರ್ಣಯಕ್ಕೆ ಬನ್ನಿ. ನಾವು ಅತ್ಯಂತ ಜವಾಬ್ದಾರಿಯಿಂದ ಚಿತ್ರವನ್ನು ತಯಾರಿಸಿದ್ದೇವೆ. ಅಮಿತ್ ರೈ ಈ ಕಥೆಯನ್ನು ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಅಮಿತ್ ರೈ ಅವರ ನೇತೃತ್ವದಲ್ಲಿ, 'OMG 2' ನಿರ್ಮಾಪಕರು ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳನ್ನು ಅನಾವರಣಗೊಳಿಸಿದ ದಿನದಿಂದಲೂ ಸಿಬಿಎಫ್​​​ಸಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಚಿತ್ರ ಧಾರ್ಮಿಕ ವಿಷಯವನ್ನು ಆಧರಿಸಿರುವುದರಿಂದ ಸಮಿತಿ ಹೆಚ್ಚು ಜಾಗರೂಕರಾಗಿರಲು ಬಯಸಿದೆ. ಸೆನ್ಸಾರ್ ಮಂಡಳಿ ಕೆಲ ದೃಶ್ಯಗಳನ್ನು ಮಾರ್ಪಾಡು ಮಾಡಲು ಹೇಳಿದೆ ಎನ್ನಲಾಗಿದ್ದು, ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಂಗೀಕರಿಸಿದೆ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' (ವಯಸ್ಕರ ಮಾತ್ರ) ಪ್ರಮಾಣಪತ್ರವನ್ನು ನೀಡಿದೆ. ಚಿತ್ರದಲ್ಲಿ ಅಕ್ಷಯ್ ಶಿವನ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನು ಓದಿ: ರಜಿನಿಕಾಂತ್​ ಜೈಲರ್​​​ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.