ETV Bharat / entertainment

ಖಳನಟ ವಜ್ರಮುನಿಯ ‘‘ಯಲಾ‌ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್ - dialogue is now the title of Komal new film

ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನ ಮಾಡ್ತಾ ಇರುವ ಕೋಮಲ್ ಕುಮಾರ್ ‘ಯಲಾ ಕುನ್ನಿ’ ಚಿತ್ರದ ಮೂಲಕ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

the-villain-vajramunis-yala-kunni-dialogue-is-now-the-title-of-komal-new-film
ಖಳನಟ ವಜ್ರಮುನಿಯ ‘‘ಯಲಾ‌ ಕುನ್ನಿ’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್
author img

By

Published : Mar 9, 2023, 9:09 PM IST

ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುತ್ತಾ ಬೆಳ್ಳಿ ತೆರೆ ಮೇಲೆ ಹೀರೋ ಆಗಿ ಕನ್ನಡಿಗರ ಮನಗೆದ್ದ ನಟ ಕೋಮಲ್. ತಮ್ಮ ವಿಭಿನ್ನ ಮ್ಯಾನರಿಸಂ ನಿಂದಲೇ ಸೆನ್ಸೇಷನಲ್ ಸ್ಟಾರ್ ಆದವರು ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನ ಮಾಡ್ತಾ ಇರುವ ಕೋಮಲ್ ಕುಮಾರ್. ಇದೀಗ ಕನ್ನಡದ ಪ್ರಸಿದ್ಧ ಖಳನಟ ವಜ್ರಮುನಿಯ ಫೇಮಸ್ ಡೈಲಾಗ್ ‘‘ಯಲಾ ಕುನ್ನಿ’’ ಈಗ ಕೋಮಲ್ ಕುಮಾರ್ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಆಗಿದೆ. ಇದರ ಜೊತೆಗೆ ‘‘ಯಲಾ ಕುನ್ನಿ ಮೇರಾ ನಾಮ್ ವಜ್ರಮುನಿ’’ ಎಂಬ ಅಡಿ ಬರಹ ಇರುವ ಶೀರ್ಷಿಕೆ ಇತ್ತೀಚೆಗೆ ಅನಾವರಗೊಂಡಿದೆ.

ನಟ ಕೋಮಲ್
ನಟ ಕೋಮಲ್

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಗರಡಿಯಲ್ಲಿ ಪಳಗಿರುವ ಎನ್. ಆರ್ ಪ್ರದೀಪ ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆಯು 1981ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್​ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುವುದು ಎಂದು ಸಿನಿಮಾ ನಿರ್ದೇಶಕರು ತಿಳಿಸಿದ್ದಾರೆ.

ಕನ್ನಡದ ಖ್ಯಾತ ಖಳನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ ‘‘ಯಲಾ ಕುನ್ನಿ’’. ಈ ಪದವನ್ನೇ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ‘ವಜ್ರಮುನಿ’ ಯಾಗಿ ಕೋಮಲ್ ರೆಟ್ರೂ ಲುಕ್​ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ ‘ಫ್ರೆಂಚ್ ಬಿರಿಯಾನಿ’ ಖ್ಯಾತಿಯ ಮಹಾಂತೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್​ ಆಗಿ ಖ್ಯಾತ ನಿರ್ದೇಶಕ ರಾಜಮೌಳಿ ಆಯ್ಕೆ

ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಸಹ ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತ ರಚನೆ ಸಹ ಮಾಡಿದ್ದಾರೆ ಧರ್ಮವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು.ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ‌.

ನಟ ಕೋಮಲ್ ಸೆಕೆಂಡ್​ ಇನ್ನಿಂಗ್ಸ್: ಕೆಂಪೇಗೌಡ ಸಿನಿಮಾ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ನಟ ಕೋಮಲ್ ‘ಕಾಲಾಯ ನಮಃ’ ಚಿತ್ರದ ಮೂಲಕ ಕೆಲ ತಿಂಗಳ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ಸೆಕೆಂಡ್ ಇನ್ನಿಂಗ್ಸ್​​ ಶುರು ಮಾಡಿದರು. ಕಾಲಾಯ ನಮಃ ಚಿತ್ರ ಬಿಡುಗಡೆಗೂ ಮುನ್ನ ನಟ ಕೋಮಲ್ ರೋಲೆಕ್ಸ್ ಸಿನಿಮಾಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಈಗ ‘ಯಲಾ ಕುನ್ನಿ’ ಚಿತ್ರದಲ್ಲಿ ನಟಿಸಲು ತಯಾರಾಗುತ್ತಿದ್ದಾರೆ.

ಇದನ್ನೂ ಓದಿ: ಕಬ್ಜ ಹವಾ: 30ಕ್ಕೂ ಹೆಚ್ಚು ಅದ್ಧೂರಿ ಸೆಟ್​​​​ಗಳಿಗಾಗಿ ಕೋಟಿ ಕೋಟಿ ಖರ್ಚು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.