ETV Bharat / entertainment

'ದಿ ವ್ಯಾಕ್ಸಿನ್​​ ವಾರ್' ರಿಲೀಸ್​​: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಗೌಡ

The Vaccine War: ವಿವೇಕ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್​​ ವಾರ್' ರಿಲೀಸ್​​ ಆಗಿದೆ.

The Vaccine War
ದಿ ವ್ಯಾಕ್ಸಿನ್​​ ವಾರ್
author img

By ETV Bharat Karnataka Team

Published : Sep 28, 2023, 5:21 PM IST

ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಆ್ಯಕ್ಷನ್​ ಕಟ್​ ಹೇಳಿರುವ ಬಹುನಿರೀಕ್ಷಿತ ಚಿತ್ರ ದಿ ವ್ಯಾಕ್ಸಿನ್​​ ವಾರ್ ಇಂದು (ಸೆಪ್ಟೆಂಬರ್ 28) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದಿ ವ್ಯಾಕ್ಸಿನ್ ವಾರ್ ಚಿತ್ರದ ಜೊತೆಗೆ ಕಂಗನಾ ರಣಾವತ್ ಅವರ ಚಂದ್ರಮುಖಿ 2, ಸ್ಕಂದ ಮತ್ತು ಕಾಮಿಡಿ ಚಿತ್ರ ಫುಕ್ರೆ 3 ಸಹ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದಕ್ಷಿಣ, ಉತ್ತರ ಚಿತ್ರರಂಗದ ಹಲವು ಸಿನಿಮಾಗಳು ಇಂದು ತೆರೆಕಂಡಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿವೆ.

ವಿವೇಕ್ ಅಗ್ನಿಹೋತ್ರಿ ಅವರ ಬಹುನಿರೀಕ್ಷಿತ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಮೊದಲ ದಿನದ ಫಸ್ಟ್ ಶೋ ನೋಡಿದೆ, ಅದ್ಭುತ ಸಿನಿಮಾ. ವಾಸ್ತವ ವಿಷಯವನ್ನು ತೆರೆ ಮೇಲೆ ತೋರಿಸಲಾಗಿದೆ. ಕೋವಿಡ್​ 19 ನಂತಹ ಕಠಿಣ ಸಂದರ್ಭ ನೆರವಿನ ಹಸ್ತ ಚಾಚಿದ ನಮ್ಮ ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಸೇರಿದಂತೆ ಎಲ್ಲರಿಗೂ ನಮನ ಎಂದು ಓರ್ವರು ಬರೆದಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಜಾಗೃತಿ ಯುದ್ಧ, ಈ ಸಿನಿಮಾ ದೇಶಭಕ್ತಿಯನ್ನು ತೋರಿಸುತ್ತದೆ ಎಂದು ಮತ್ತೋರ್ವರು ತಿಳಿಸಿದ್ದಾರೆ.

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೇವಲ 10 ಕೋಟಿ ರೂ. ಬಜೆಟ್‌ನಲ್ಲಿ ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರದ ಮೊದಲ ದಿನದ ಗಳಿಕೆ ಬಗ್ಗೆ ಹೇಳುವುದಾದರೆ, ಬಾಕ್ಸ್ ಆಫೀಸ್​ನಲ್ಲಿ 2 ಕೋಟಿ ರೂಪಾಯಿ ವ್ಯವಹಾರ ನಡೆಸಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್​ ಸಿನಿಮಾ ಮೆಚ್ಚಿದ ಸ್ಯಾಂಡಲ್​​ವುಡ್ ಸ್ಟಾರ್ಸ್

ಕೋವಿಡ್​ ಸೋಂಕು, ಎದುರಿಸಿದ ಸವಾಲುಗಳು, ವೈದ್ಯಕೀಯ ಕ್ಷೇತ್ರದ ಸೇವೆ, ದೇಶೀಯ ಲಸಿಕೆ ತಯಾರಿ ಸೇರಿದಂತೆ ಸಂಪೂರ್ಣ ಸಿನಿಮಾ ಕೋವಿಡ್​ 19 ಸುತ್ತ ಸುತ್ತುತ್ತದೆ. ಕೋವಿಡ್​ 19 ಪ್ರಪಂಚವನ್ನು ಆವರಿಸಿ ಅವಾಂತರ ಸೃಷ್ಟಿಸಿದ ಸಂದರ್ಭ ಸ್ವದೇಶಿ ಲಸಿಕೆಯನ್ನು ತಯಾರಿಸಿದ ಭಾರತೀಯ ವಿಜ್ಞಾನಿಗಳ ಅಸಾಧಾರಣ ಸಾಧನೆಯನ್ನು ಈ ಸಿನಿಮಾ ತೋರಿಸಿದೆ. ವೈದ್ಯಕೀಯ ಕ್ಷೇತ್ರಕ್ಕೆ ಗೌರವ ಸಲ್ಲಿಸುವ ಸಲುವಾಗಿ ಸಿನಿಮಾ ನಿರ್ಮಾಣಗೊಂಡಿದೆ.

  • Just watched #TheVaccineWar 👌🏼firstdayfirstshow 😎🎭
    Well researched movie! 👍🏼👏🏼
    Factual ✅
    Salute to all our scientists,docs,frontline workers,animals etc every living creature who genuinely helped,sacrificed their lives to save our nation! #Respect 🇮🇳 (1/2)

    — Abhi (@e1_lion) September 28, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ರೂಪವತಿ ಮೌನಿ ರಾಯ್​​​: ಕೆಜಿಎಫ್​​​ ಚೆಲುವೆಯ ಹಳೇ ಫೋಟೋ ನೋಡಿದ್ದೀರಾ?!

ವಿವೇಕ್​ ಅಗ್ನಿಹೋತ್ರಿ ಸಿನಿಮಾದಲ್ಲಿ ಕಾಂತಾರಾ ಖ್ಯಾತಿಯ ಸಪ್ತಮಿ ಗೌಡ, ನಾನಾ ಪಾಟೇಕರ್​, ಪಲ್ಲವಿ ಜೋಶಿ, ರೈಮಾ ಶೇನ್​​, ಗಿರಿಜಾ ಓಕ್​, ಅನುಪಮ್​ ಖೇರ್ ಸೇರಿದಂತೆ ಹಲವರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.