2023ರ ಬಹುನಿರೀಕ್ಷಿತ 'ದಿ ವ್ಯಾಕ್ಸಿನ್ ವಾರ್' ಚಿತ್ರ ಸೆಪ್ಟೆಂಬರ್ 28ರಂದು ತೆರೆ ಕಂಡು ಉತ್ತಮ ಪ್ರದರ್ಶನ ಮುಂದುವರೆಸಿದೆ. ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆಯುತ್ತಿದೆ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಸಾಧಾರಣ ಸಾಧನೆ ಗುರುತಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದರು.
-
#WATCH राजस्थान: जोधपुर में PM मोदी ने कहा, "मैंने सुना है एक फिल्म आई है द वैक्सीन वॉर, भारत में कोविड से लड़ाई लड़ने के लिए हमारे देश के वैज्ञानिकों ने जो रात-दिन मेहनत की, अपने लैब में एक ऋषि की तरह साधना की.. उस फिल्म में इन सभी बातों को दर्शाया गया है...मैं यह फिल्म बनाने… pic.twitter.com/N9vtWkPKsT
— ANI_HindiNews (@AHindinews) October 5, 2023 " class="align-text-top noRightClick twitterSection" data="
">#WATCH राजस्थान: जोधपुर में PM मोदी ने कहा, "मैंने सुना है एक फिल्म आई है द वैक्सीन वॉर, भारत में कोविड से लड़ाई लड़ने के लिए हमारे देश के वैज्ञानिकों ने जो रात-दिन मेहनत की, अपने लैब में एक ऋषि की तरह साधना की.. उस फिल्म में इन सभी बातों को दर्शाया गया है...मैं यह फिल्म बनाने… pic.twitter.com/N9vtWkPKsT
— ANI_HindiNews (@AHindinews) October 5, 2023#WATCH राजस्थान: जोधपुर में PM मोदी ने कहा, "मैंने सुना है एक फिल्म आई है द वैक्सीन वॉर, भारत में कोविड से लड़ाई लड़ने के लिए हमारे देश के वैज्ञानिकों ने जो रात-दिन मेहनत की, अपने लैब में एक ऋषि की तरह साधना की.. उस फिल्म में इन सभी बातों को दर्शाया गया है...मैं यह फिल्म बनाने… pic.twitter.com/N9vtWkPKsT
— ANI_HindiNews (@AHindinews) October 5, 2023
ಜೋಧ್ಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದಿ ವ್ಯಾಕ್ಸಿನ್ ವಾರ್ ಎಂಬ ಚಿತ್ರ ಬಂದಿದೆ ಎಂದು ನಾನು ಕೇಳಿದ್ದೇನೆ. ನಮ್ಮ ದೇಶದ ವಿಜ್ಞಾನಿಗಳು ಕೋವಿಡ್ ವಿರುದ್ಧ ಹೋರಾಡಲು ಹಗಲಿರುಳು ಶ್ರಮಿಸಿದರು. ಅವರು ಪ್ರಯೋಗಾಲಯದಲ್ಲಿ ಋಷಿಯಂತೆ ಧ್ಯಾನ ಮಾಡಿದರು. ಈ ಎಲ್ಲಾ ವಿಷಯಗಳನ್ನು ಆ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಸಿನಿಮಾವನ್ನು ನಿರ್ಮಿಸುವ ಮೂಲಕ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದ ಈ ಚಿತ್ರದ ನಿರ್ದೇಶಕರನ್ನು ಅಭಿನಂದಿಸುತ್ತೇನೆ" ಎಂದು ಹೇಳಿದ್ದಾರೆ.
ಸಂತಸ ವ್ಯಕ್ತಪಡಿಸಿದ ಅಗ್ನಿಹೋತ್ರಿ: ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿಗೆ ನಿರ್ದೇಶಕ ಅಗ್ನಿಹೋತ್ರಿ ಧನ್ಯವಾದ ತಿಳಿಸಿದ್ದಾರೆ. ಎಕ್ಸ್ನಲ್ಲಿ ಪ್ರಧಾನಿ ಭಾಷಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ಪ್ರಧಾನಿ ಮೋದಿಯವರಿಂದ ಇಂತಹ ಮಾತು ಕೇಳಲು ಸಂತೋಷವಾಗಿದೆ. ಅವರ ನಾಯಕತ್ವದಲ್ಲಿ ಲಸಿಕೆಯನ್ನು ತಯಾರಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಪ್ರಮುಖವಾಗಿ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ನಾನು ಗುರುತಿಸಿದ್ದೇನೆ. ತಮ್ಮ ಶ್ರಮವನ್ನು ಪ್ರಧಾನಿ ಮೋದಿಯವರು ಕೊಂಡಾಡಿದ್ದಕ್ಕಾಗಿ ಮಹಿಳಾ ವಿಜ್ಞಾನಿಗಳು ನನಗೆ ಕರೆ ಮಾಡಿ ಭಾವುಕರಾದರು" ಎಂದು ಹೇಳಿದ್ದಾರೆ.
-
It’s heartening to hear PM @narendramodi acknowledge the contribution of Indian scientists, specially women scientists in making the indigenous vaccine under his leadership. Women scientists called and got emotional “first time a PM praised Virologists” they said.
— Vivek Ranjan Agnihotri (@vivekagnihotri) October 5, 2023 " class="align-text-top noRightClick twitterSection" data="
GRATITUDE. 🇮🇳 pic.twitter.com/U027q7Y4pz
">It’s heartening to hear PM @narendramodi acknowledge the contribution of Indian scientists, specially women scientists in making the indigenous vaccine under his leadership. Women scientists called and got emotional “first time a PM praised Virologists” they said.
— Vivek Ranjan Agnihotri (@vivekagnihotri) October 5, 2023
GRATITUDE. 🇮🇳 pic.twitter.com/U027q7Y4pzIt’s heartening to hear PM @narendramodi acknowledge the contribution of Indian scientists, specially women scientists in making the indigenous vaccine under his leadership. Women scientists called and got emotional “first time a PM praised Virologists” they said.
— Vivek Ranjan Agnihotri (@vivekagnihotri) October 5, 2023
GRATITUDE. 🇮🇳 pic.twitter.com/U027q7Y4pz
ಇದನ್ನೂ ಓದಿ: ಕೋವಿಡ್ಗೆ ಲಸಿಕೆ ಸಂಶೋಧಿಸಿದ ವಿಜ್ಞಾನಿಗಳ ಕಥೆಯ "ದಿ ವ್ಯಾಕ್ಸಿನ್ ವಾರ್"ನ ಟ್ರೈಲರ್ ಬಿಡುಗಡೆ.. ಇದೇ 28ಕ್ಕೆ ಚಿತ್ರ ತೆರೆಗೆ
'ದಿ ವ್ಯಾಕ್ಸಿನ್ ವಾರ್' ಸಿನಿಮಾ ಕಥೆಯು, ಕೋವಿಡ್ 19 ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಸಿಕೆಯ ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ಎದುರಿಸಿದ ಸವಾಲುಗಳ ಮೇಲೆ ಕೇಂದ್ರೀಕೃತವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಿದ ಎಲ್ಲರಿಗೂ ಗೌರವ ಸಲ್ಲಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಅನುಪಮ್ ಖೇರ್, ಗಿರಿಜಾ ಓಕ್, ನಿವೇದಿತಾ ಭಟ್ಟಾಚಾರ್ಯ, ಸಪ್ತಮಿ ಗೌಡ, ಮೋಹನ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಸಿನಿಮಾ ನಿರ್ಮಾಣಗೊಂಡಿದೆ.
ದಿ ವ್ಯಾಕ್ಸಿನ್ ವಾರ್ ಕಲೆಕ್ಷನ್: ದಿ ವ್ಯಾಕ್ಸಿನ್ ವಾರ್ ಬಾಕ್ಸ್ ಆಫೀಸ್ ವಿಚಾರದಲ್ಲಿ ಹಿಂದುಳಿದಿದೆ. ಸಿನಿಮಾ ಅಂತ್ಯಂತ ಕಡಿಮೆ ಅಂಕಿಅಂಶದೊಂದಿಗೆ ಆರಂಭಿಸಿದ್ದು, ಚಿತ್ರಮಂದಿರದಲ್ಲಿ ಪ್ರದರ್ಶನ ಮುಂದುವರಿಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಎಂಟನೇ ದಿನ (ಇಂದು) 47 ಲಕ್ಷ ರೂ. ಸಂಗ್ರಹಿಸಬಹುದು. ಈ ಸಂಖ್ಯೆಯಿಂದ ಸಿನಿಮಾದ ಒಟ್ಟು ಕಲೆಕ್ಷನ್ 8.59 ಕೋಟಿ ರೂ. ತಲುಪಲಿದೆ. ಆದ್ರೆ ಸಿನಿಮಾ ಕೇವಲ 10 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ 10 ಕೋಟಿ ರೂ. ದಾಟಿದರೂ ಹಾಕಿದ ಬಂಡವಾಳ ವಾಪಸ್ ಬರಲಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ ಪೈಪೋಟಿ: ಚಂದ್ರುಮುಖಿ 2, ವ್ಯಾಕ್ಸಿನ್ ವಾರ್, ಫುಕ್ರೆ 3 ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ