ETV Bharat / entertainment

ತಿಂಗಳಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.. ರೋಮ್ಯಾನ್ಸ್​ನಿಂದ ಹಿಡಿದು ಆ್ಯಕ್ಷನ್​ವರೆಗಿನ ಸಿನಿಮಾ, ವೆಬ್​ ಸರಣಿ ತೆರೆಗೆ - ಲಸ್ಟ್​ ಸ್ಟೋರಿಸ್​ 2

ಜೂನ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹಾಲಿವುಡ್​ನಿಂದ ಹಿಡಿದು ಬಾಲಿವುಡ್​ವರೆಗಿನ ಸಿನಿಮಾ ಹಾಗೂ ವೆಬ್​ ಸರಣಿಯ ಡಿಟೇಲ್ಸ್​ ಇಲ್ಲಿದೆ ನೋಡಿ..

ಸಿನಿಮಾ, ವೆಬ್​ ಸರಣಿ ತೆರೆಗೆ
ಸಿನಿಮಾ, ವೆಬ್​ ಸರಣಿ ತೆರೆಗೆ
author img

By

Published : Jun 27, 2023, 10:25 AM IST

ಜೂನ್​ ತಿಂಗಳು ಬಹುತೇಕ ಮುಗಿದಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಸಿನಿ ಪ್ರಿಯರಿಗೆ ಒಟಿಟಿ ಫ್ಲಾಟ್​ಫಾರ್ಮ್​ ಮತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ರಸದೌತಣಕ್ಕೆ ಏನು ಕಡಿಮೆಯಿಲ್ಲ. ಹೌದು ತಿಂಗಳ ಕೊನೆಗೆ ರೊಮ್ಯಾನ್ಸ್​ನಿಂದ ಹಿಡಿದು ಆ್ಯಕ್ಷನ್​ ಥ್ರಿಲ್ಲರ್​ವರೆಗೆ ಹಲವು ಸಿನಿಮಾ ಕಥೆಗಳು ಬಿಡುಗಡೆಗೆ ಸಿದ್ಧವಾಗಿದೆ. ಹಾಗಾದರೇ ಬನ್ನಿ ಈ ವಾರ ಬಿಡುಗಡೆಯಾಗಲಿರುವ ನಿಮ್ಮ ಮೆಚ್ಚಿನ ಚಲನಚಿತ್ರಗಳು ಮತ್ತು ವೆಬ್​ ಸರಣಿಗಳನ್ನು ನೋಡೋಣ..

ಸತ್ಯಪ್ರೇಮ್ ಕಿ ಕಥಾ
ಸತ್ಯಪ್ರೇಮ್ ಕಿ ಕಥಾ

ಸತ್ಯಪ್ರೇಮ್ ಕಿ ಕಥಾ: ಈಗಾಗಲೇ ಚಿತ್ರದ ಹಾಡು ಮತ್ತು ಟ್ರೇಲರ್​ನಿಂದ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ, ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 'ಸತ್ಯಪ್ರೇಮ್ ಕಿ ಕಥಾ' ಮೂವಿ ಜೂನ್​ 29 ರಂದು ತೆರೆ ಕಾಣಲು ಸಿದ್ಧವಾಗಿದೆ. ಚಿತ್ರದ ನಾಯಕ ಕಾರ್ತಿಕ್ ಆರ್ಯನ್​ ಮತ್ತು ನಾಯಕಿ ಕಿಯಾರಾ ಅಡ್ವಾಣಿ 2022 ರಲ್ಲಿ ಒಟ್ಟಿಗೆ ನಟಿಸಿದ್ದ 'ಭೂಲ್ ಭುಲೈಯಾ 2' ಹಿಟ್​ ಆಗಿದ್ದು, ಈ ಬಾರಿಯು ಇವರ ಜೋಡಿ ಬಿಗ್​ ಸ್ಕ್ರೀನಲ್ಲಿ ಮತ್ತೆ ಮೋಡಿ ಮಾಡಲಿದೆಯಾ ನೋಡಬೇಕಾಗಿದೆ. ಇನ್ನು ಈ ಸಿನಿಮಾವನ್ನು ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಸುಪ್ರಿಯಾ ಪಾಠಕ್ ಕಪೂರ್, ಗಜರಾಜ್ ರಾವ್, ಸಿದ್ಧಾರ್ಥ್ ರಂಧೇರಿಯಾ, ಅನೂರಾಧಾ ಪಟೇಲ್, ರಾಜ್ಪಾಲ್ ಯಾದವ್, ನಿರ್ಮಿತೆ ಸಾವಂತ್ ಮತ್ತು ಶಿಖಾ ತಲ್ಸಾನಿಯಾ ಸಹ ನಟಿಸಿದ್ದಾರೆ.

ನೈಟ್ ಮ್ಯಾನೇಜರ್- ಭಾಗ 2
ನೈಟ್ ಮ್ಯಾನೇಜರ್- ಭಾಗ 2

ನೈಟ್ ಮ್ಯಾನೇಜರ್- ಭಾಗ 2: ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ನೈಟ್ ಮ್ಯಾನೇಜರ್- ಭಾಗ 2 ವೆಬ್​ ಸರಣಿಯ ಸಂಚಿಕೆಯು ಜೂನ್ 30 ರಿಂದ OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಕಥೆಯು ಜಾನ್ ಲೆ ಕ್ಯಾರೆ ಅವರ ಆಧಾರಿತ ಬ್ರಿಟಿಷ್ ದೂರದರ್ಶನ ನಾಟಕ 'ದಿ ನೈಟ್ ಮ್ಯಾನೇಜರ್' ನ ಹಿಂದಿ ರಿಮೇಕ್ ಆಗಿದೆ. ಈ ವೆಬ್​ ಸರಣಿಯ ಮೊದಲ ಭಾಗವು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿತ್ತು. ಇದೀಗ ಭಾಗ 2 ಪ್ರೇಕ್ಷಕರಿಗಾಗಿ ರೆಡಿಯಾಗಿದೆ.

ಸ್ಪೈ
ಸ್ಪೈ

ಸ್ಪೈ: ‘ಸ್ಪೈ’ ಒಂದು ಆಕ್ಷನ್ ಥ್ರಿಲ್ಲರ್ ಆಗಿದ್ದು, ತೆಲುಗು ನಟ ನಿಖಿಲ್ ಸಿದ್ಧಾರ್ಥ್​ ಮತ್ತು ಐಶ್ವರ್ಯ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ 29 ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಚಿತ್ರದ ಕಥೆಯು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ದಾಖಲೆಗಳ ಸುತ್ತ ಸುತ್ತುತ್ತದೆ.

ಇಂಡಿಯಾನಾ ಜೋನ್ಸ್ 5
ಇಂಡಿಯಾನಾ ಜೋನ್ಸ್ 5

ಇಂಡಿಯಾನಾ ಜೋನ್ಸ್ 5: 'ಇಂಡಿಯಾನಾ ಜೋನ್ಸ್ ಅಂಡ್​​ ದಿ ಡಯಲ್ ಆಫ್ ಡೆಸ್ಟಿನಿ' ಜೂನ್ 29 ರಂದು ಅಮೆರಿಕಕ್ಕಿಂತ ಒಂದು ದಿನ ಮುಂಚಿತವಾಗಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಜೇಮ್ಸ್ ಮ್ಯಾಂಗೋಲ್ಡ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಹ್ಯಾರಿಸನ್ ಫೋರ್ಡ್, ಫಿಯೋಬ್ ವಾಲರ್ ಬ್ರಿಡ್ಜ್, ಆಂಟೋನಿಯೊ ಬಂಡೆರಾಸ್ ಮತ್ತು ಜಾನ್ ರೈಸ್-ಡೇವಿಸ್ ನಟಿಸಿದ್ದಾರೆ.

ದಿ ವಿಚರ್ ಸೀಸನ್ 3
ದಿ ವಿಚರ್ ಸೀಸನ್ 3

ದಿ ವಿಚರ್ ಸೀಸನ್ 3: ಹೆನ್ರಿ ಕ್ಯಾವಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, 'ದಿ ವಿಚರ್' ಸೀಸನ್ 3 OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮುಂಬರುವ ಸೀಸನ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮೊದಲ ಐದು ಸಂಚಿಕೆಗಳು ಜೂನ್ 29 ರಂದು ಬಿಡುಗಡೆಯಾಗಲಿವೆ ಮತ್ತು ಉಳಿದ ಮೂರು ಸಂಚಿಕೆಗಳು ಜುಲೈ 27 ರಂದು ಬಿಡುಗಡೆಯಾಗುತ್ತವೆ.

ಲಸ್ಟ್​ ಸ್ಟೋರಿಸ್​  2
ಲಸ್ಟ್​ ಸ್ಟೋರಿಸ್​ 2

ಲಸ್ಟ್​ ಸ್ಟೋರಿಸ್​ 2: ಅಮಿತ್ ರವೀಂದ್ರನಾಥ್ ಶರ್ಮಾ, ಆರ್ ಬಾಲ್ಕಿ, ಕೊಂಕಣ ಸೇನ್ ಶರ್ಮಾ, ಮತ್ತು ಸುಜೋಯ್ ಘೋಷ್ ಅವರು ನಿರ್ದೇಶಿಸಿರುವ ಲಸ್ಟ್​ ಸ್ಟೋರಿಸ್​ 2 ವೆಬ್​ ಸರಣಿಯಲ್ಲಿ, ಕಾಜೋಲ್, ನೀನಾ ಗುಪ್ತಾ, ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಅಂಗದ್ ಬೇಡಿ, ಅಮೃತಾ ಶುಭಾಷ್, ತಿಲೋತಮಾ ಶೋಮ್ ಮತ್ತು ಕುಮುದ್ ಮಿಶ್ರಾ ನಟಿಸಿದ್ದಾರೆ. ಮೊದಲ ಸಂಚಿಕೆಗಳಲ್ಲಿ ವಯಸ್ಸಿನ ಗುಂಪುಗಳು ಮತ್ತು ವರ್ಗದಾದ್ಯಂತ ಕಾಮದ ಬಹು ಛಾಯೆಗಳನ್ನು ಮತ್ತು ನಿಷೇಧಿತ ವಿಷಯದ ಕಡೆಗೆ ಅವರ ದೃಷ್ಟಿಕೋನವನ್ನು ತೋರಿಸಲಿದೆ. ಇದು ಜೂನ್ 29 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ: ಕಿರಿಕ್ et 11: ಕನ್ನಡದಲ್ಲಿ ಕ್ರಿಕೆಟಿಗ ಕೆ.ಎಲ್.ರಾಹುಲ್​ ಕುರಿತ ಸಿನಿಮಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.