ETV Bharat / entertainment

'ದಿ ಫಾಲನ್​' ಆಗಿ ಬಂದ್ರು ಅನುಪಮಾ ಗೌಡ: ಇಂದು ಟ್ರೇಲರ್​ ರಿಲೀಸ್​ - ಈಟಿವಿ ಭಾರತ ಕನ್ನಡ

ನಟಿ ಅನುಪಮಾ ಗೌಡ ಅವರ 'ದಿ ಫಾಲನ್'​ ಸಿನಿಮಾದ ಟ್ರೇಲರ್​ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ.

trailer
'ದಿ ಫಾಲನ್​
author img

By

Published : Apr 1, 2023, 10:13 AM IST

'ಅಕ್ಕ' ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ಅನುಪಮಾ ಗೌಡ 'ದಿ ಫಾಲನ್​' ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅನು ಬಳಿಕ ನಿರೂಪಕಿಯಾಗಿಯೂ ಮಿಂಚಿದ್ದರು. ಅಲ್ಲದೇ ಎರಡು ಬಾರಿ ಬಿಗ್​ ಬಾಸ್​ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರ ಮನೆ ಮಾತಾಗಿದ್ದರು. ಇದೀಗ ಹೊಸ ಚಿತ್ರದ ಮೂಲಕ ಅನುಪಮಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ನಟಿಯೇ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ.

"ನಾವು ದಿ ಫಾಲನ್​ನೊಂದಿಗೆ ಸುದೀರ್ಘ ಮತ್ತು ಸುಂದರವಾದ ಪ್ರಯಾಣವನ್ನು ಹೊಂದಿದ್ದೇವೆ. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾದ ಅನೇಕ ಹಬ್ಬಗಳ ಒಂದು ಭಾಗವಾಗಿತ್ತು. ನಾವು ಇದೀಗ ನಿಮಗಾಗಿ ಟ್ರೇಲರ್​ ಅನ್ನು ತರಲು ನಿರ್ಧರಿಸಿದ್ದೇವೆ. ನಮ್ಮ ಚಿತ್ರದ ಟ್ರೇಲರ್​ 2023ರ ಏಪ್ರಿಲ್​ 1 ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಎಂದಿನಂತೆ ನಿಮ್ಮ ಪ್ರೀತಿ ತೋರಿಸಿ" ಎಂದು ಕ್ಯಾಪ್ಶನ್​ ಬರೆದುಕೊಂಡು 'ದಿ ಫಾಲನ್​' ಪೋಸ್ಟರ್​ ಶೇರ್​ ಮಾಡಿಕೊಂಡಿದ್ದಾರೆ.

ಜೈಪುರಕ್ಕೆ ಟ್ರಿಪ್​ ಹೋಗಿದ್ದ ಅನು: ನಟಿ ಅನುಪಮಾಗೆ ಪ್ರವಾಸ​ ಹೋಗುವುದೆಂದ್ರೆ ಭಾರಿ ಇಷ್ಟವಂತೆ. ಅದರಲ್ಲೂ ಸೋಲೋ ಟ್ರಿಪ್​ ಹೋಗಲು ಜಾಸ್ತಿ ಇಷ್ಟಪಡ್ತಾರೆ. ಇತ್ತೀಚೆಗೆ ಅವರು ಜೈಪುರಕ್ಕೆ ಟ್ರಿಪ್​ ಹೋಗಿದ್ದರು. ಅಲ್ಲಿನ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಜೊತೆಗೆ ಅವರು ತೆರಳಿದ್ದ ಎಲ್ಲಾ ಸ್ಥಳಗಳ ಫೋಟೋಗಳನ್ನು ಹಂಚಿಕೊಂಡು, ಅಲ್ಲಿನ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದರು.

ಎರಡು ಬಾರಿ ಬಿಗ್​ ಬಾಸ್​ ಸ್ಪರ್ಧಿ: ಅನುಪಮಾ ಗೌಡ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಲಂಕೇಶ್​ ಪತ್ರಿಕೆ ಮೂಲಕ ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಅಕ್ಕ' ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯವಾದರು. ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಯಿಸುವುದರ ಮೂಲಕ ಸೈ ಎನಿಸಿಕೊಂಡರು. ಅದಕ್ಕೂ ಮೊದಲು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲೂ ನಟಿಸಿದ್ದರು. ನಂತರ ಬಿಗ್​ ಬಾಸ್​ ಕನ್ನಡ ಸೀಸನ್​ 5ರಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾದರು.

ಇದನ್ನೂ ಓದಿ: 'ಗುರುದೇವ್​ ಹೊಯ್ಸಳ'ನಿಗೆ ಭರ್ಜರಿ ರೆಸ್ಪಾನ್ಸ್​: ನಿರ್ಮಾಪಕರಿಂದ ಡಾಲಿಗೆ ದುಬಾರಿ ಮೌಲ್ಯದ ಕಾರ್ ಗಿಫ್ಟ್

ಅದಾಗಿ ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್​ ಸ್ಟಾರ್​ ಶೋಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದರು. ನಂತರ ಜಯರಾಮ್​ ಕಾರ್ತಿಕ್​ ಅಭಿನಯದ 'ಆ ಕರಾಳ ರಾತ್ರಿ' ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದರು. ಬಳಿಕ ರಾಘವೇಂದ್ರ ರಾಜ್​ಕುಮಾರ್​ ಮತ್ತು ಆರ್​ ಜೆ ರೋಹಿತ್​ ಅಭಿನಯದ 'ತ್ರಯಂಬಕಂ' ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡರು. ಇದಲ್ಲದೇ 8ನೇ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ನಂತರ ಎರಡನೇ ಬಾರಿ ಬಿಗ್​ ಬಾಸ್​ ಕನ್ನಡ ಸೀಸನ್​ 9ರ ಸ್ಪರ್ಧಿಯಾಗಿ ಅಪಾರ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ರಾಲಿಯಾ ಅಭಿನಯದ 'ಬ್ರಹ್ಮಾಸ್ತ್ರ 2' 2026ರಲ್ಲಿ ತೆರೆಗೆ: ಮತ್ತೆ ತಪ್ಪು ಮಾಡಲ್ಲವೆಂದ ನಿರ್ದೇಶಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.