ETV Bharat / entertainment

ಆಸ್ಕರ್​: ಬೊಮ್ಮನ್​, ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವ.. ಪ್ರಯಾಣಿಕರಿಂದ ಕರತಾಡನ - ಈಟಿವಿ ಭಾರತ ಕನ್ನಡ

'ದ ಎಲಿಫೆಂಟ್​ ವಿಸ್ಪರರ್ಸ್' ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್​ ಮತ್ತು ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಸ್ವಾಗತ ಸಿಕ್ಕಿತು.

The Elephant Whisperers
ಬೊಮ್ಮನ್​, ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವ
author img

By

Published : Mar 25, 2023, 10:41 AM IST

ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ 'ದ ಎಲಿಫೆಂಟ್​ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಡಾಕ್ಯುಮೆಂಟರಿಯ ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್​ ಮತ್ತು ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ಊಟಿಗೆ ಪ್ರಯಾಣಿಸುತ್ತಿರುವ ವೇಳೆ ವಿಶೇಷ ಸ್ವಾಗತವನ್ನು ಪಡೆದರು. ತಮಿಳುನಾಡು ರಾಜ್ಯದ ಸಣ್ಣ ಹಳ್ಳಿಯೊಂದರಿಂದ ಬಂದ ಈ ದಂಪತಿಯನ್ನು ಇಂಡಿಗೋ ಸಿಬ್ಬಂದಿ ಅಭಿನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

"ನಿಮ್ಮಲ್ಲಿ ಕೆಲವರಿಗೆ ತಿಳಿದಿಲ್ಲದಿರಬಹುದು. ಆಸ್ಕರ್​ನಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು 'ದ ಎಲಿಫೆಂಟ್​ ವಿಸ್ಪರರ್ಸ್'​ ಪಡೆದುಕೊಂಡಿದೆ ಮತ್ತು ಈ ಡಾಕ್ಯುಮೆಂಟರಿಯ ಮುಖ್ಯ ಪಾತ್ರದಾರಿಗಳು ಇಂದು ನಮ್ಮೊಂದಿಗಿದ್ದಾರೆ. ಅವರಿಗೊಂದು ಚಪ್ಪಾಳೆ ನೀಡಿ" ಎಂದು ಪೈಲೆಟ್​​ ಹೇಳಿದರು. ಈ ವೇಳೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ದಂಪತಿಯನ್ನು ಹುರಿದುಂಬಿಸಿದರು. ಈ ವಿಡಿಯೋ ಅನೇಕ ಹೃದಯಗಳನ್ನು ಗೆದ್ದಿದೆ. ಇಂಡಿಗೋ ಸಿಬ್ಬಂದಿಗಳ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು "ಇದು ಅತ್ಯುತ್ತಮ ವಿಡಿಯೋಗಳಲ್ಲಿ ಒಂದಾಗಿದೆ. ಬೊಮ್ಮನ್​ ಮತ್ತು ಬೆಳ್ಳಿ ಎಲ್ಲಾ ಪ್ರೀತಿಗೂ ಅರ್ಹರು" ಎಂಬುದಾಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 'ದ ಎಲಿಫೆಂಟ್​ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು

'ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ದ ಎಲಿಫೆಂಟ್ ವಿಸ್ಪರರ್ಸ್' ಜೊತೆಗೆ ‘ಹಾಲ್‌ ಔಟ್’, ‘ಹೌ ಡು ಯು ಮೆಷರ್‌ ಎ ಈಯರ್?' ಮತ್ತು 'ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಹಾಗೂ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಡಾಕ್ಯುಮೆಂಟರಿಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ಭಾರತದ 'ದ ಎಲಿಫೆಂಟ್ ವಿಸ್ಪರರ್ಸ್' ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿತು.

'ದ ಎಲಿಫೆಂಟ್​ ವಿಸ್ಪರರ್ಸ್' ಕಥೆ.. ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ 'ದ ಎಲಿಫೆಂಟ್​ ವಿಸ್ಪರರ್ಸ್'ನಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಇದರಲ್ಲಿ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ಒಟ್ಟು 41 ನಿಮಿಷಗಳ ಡಾಕ್ಯುಮೆಂಟರಿ ಇದಾಗಿದ್ದು, ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆದಿದೆ.

ಇದನ್ನೂ ಓದಿ: ಎಸ್​​ಆರ್​ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್​ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ

ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ವರ್ಷಗಳ ಕಾಲ ತಂಗಿದ್ದರಂತೆ. ಈ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ನಿರೂಪಿಸುತ್ತದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ 'ದ ಎಲಿಫೆಂಟ್​ ವಿಸ್ಪರರ್ಸ್' ಸಾಕ್ಷ್ಯಚಿತ್ರವನ್ನು ವೀಕ್ಷಿಸಬಹುದು.

ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್‌ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.