ETV Bharat / entertainment

ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರು - ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ

ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕೌಂಟ್​ಡೌನ್ ಶುರುವಾಗಿದೆ. ಟ್ರೈಲರ್​​ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ವಿಶ್ವಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಕ್ರೇಜ್ ಹುಟ್ಟಿಸಿದೆ. ಕಿಚ್ಚ ಸುದೀಪ್ ಸೂಪರ್ ಕಾಫ್ ಆಗಿ ಕಾಣಿಸಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇವೆ.

The countdown for the worldwide release of 'Vikrant Rona' has begun
ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರು
author img

By

Published : Jul 27, 2022, 9:01 PM IST

ಜಗತ್ತಿನಾದ್ಯಂತ ವಿಕ್ರಾಂತ್ ರೋಣ ಸಿನಿಮಾದ ಹವಾ ಜೋರಾಗಿದೆ. ಅದಕ್ಕೆ ಕಾರಣ ಕಿಚ್ಚ ಸುದೀಪ್ ಅಂಡ್ ಟೀಮ್ ವಿಶ್ವಾದ್ಯಂತ ಮಾಡಿರುವ ಅದ್ಧೂರಿ ಪ್ರಚಾರದ ಜೊತೆಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್​ಗಳು ವಿಕ್ರಾಂತ್ ರೋಣ ಸಿನಿಮಾವನ್ನು ಮೆಚ್ಚಿಕೊಂಡಿರೋದು. ನಾಳೆ (ಗುರುವಾರ) ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಅದ್ಧೂರಿ ಮೇಕಿಂಗ್ ಹೊಂದಿರುವ ಈ ಸಿನಿಮಾದ ಬಿಡುಗಡೆ ಆಗಲಿದೆ.

ವಿಕ್ರಾಂತ್ ರೋಣ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 2,500 ಸಾವಿರ ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುತ್ತಿದೆ. ನಿರ್ಮಾಪಕ ಜಾಕ್ ಮಂಜು ಪ್ರಕಾರ ವರ್ಲ್ಡ್ ವೈಡ್ ಮೊದಲ ದಿನ 9000ಕ್ಕೂ ಅಧಿಕ ಶೋಗಳು ಆಗುತ್ತಿವೆಯಂತೆ. ಕರ್ನಾಟಕದಲ್ಲಿ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯನ್ನ ಹಬ್ಬದಂತೆ ಆಚರಿಸಲು ರೆಡಿಯಾಗಿದ್ದಾರೆ.

The countdown for the worldwide release of 'Vikrant Rona' has begun
'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರು

ಕರುನಾಡಿನಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್​, 65 ಮಲ್ಟಿಪ್ಲೆಕ್ಸ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2,500 ಶೋಸ್ ನಡೆಯುವ ಸಾಧ್ಯತೆ ಇದೆ. ಸುಮಾರು 900 ಸ್ಕ್ರೀನ್​ 3ಡಿ ಹಾಗೂ 1,600 ಸ್ಕ್ರೀನ್​ನಲ್ಲಿ 2ಡಿ ವರ್ಷನ್​ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಕಿಚ್ಚನ ಹವಾ ಜೋರಾಗಿದ್ದು, ಇಲ್ಲಿ 40 ಮಲ್ಟಿಪ್ಲೆಕ್ಸ್​ನಲ್ಲಿ 800 ಶೋ, ಒಟ್ಟು 70 ಸಿಂಗಲ್ ಸ್ಕ್ರೀನ್​ನಲ್ಲಿ 400 ಶೋ ಆಗಲಿದೆ.

'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಿರೂಪ್​ ಭಂಡಾರಿ

ಬೆಳಗ್ಗೆ 6 ಗಂಟೆಗೆಯಿಂದ ವಿಕ್ರಾಂತ್ ರೋಣ ಸಿನಿಮಾದ ಶೋ ಆರಂಭ ಆಗಲಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ​ 5.30ಕ್ಕೆ ಮೊದಲ ಶೋ ಸ್ಟಾರ್ಟ್ ಆಗುತ್ತಿದೆ. ದೇಶದಲ್ಲೇ ಶಂಕರ್ ನಾಗ್ ಚಿತ್ರಮಂದಿರದಲ್ಲೇ ಮೊದಲ ಶೋ ಆಗಲಿದೆ.ಇನ್ನು ವಿಕ್ರಾಂತ್ ರೋಣಗೆ ಮೇನ್ ಥಿಯೇಟರ್ ಕಾನ್ಸೆಪ್ಟ್ ಇರುವುದಿಲ್ಲ. ಊರ್ವಶಿಯಲ್ಲಿ ಬೆಳಗ್ಗೆ 7 ಗಂಟೆಗೆ ಅನೂಪ್ ಭಂಡಾರಿ & ಟೀಮ್ ಬರಲಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ.

ಇದರ ಜೊತೆಗೆ ಆಂಧ್ರ - ತೆಲಂಗಾಣದಲ್ಲಿ ಸುದೀಪ್ ಕ್ರೇಜ್ ಜಾಸ್ತಿನೆ ಇದೆ. ತೆಲುಗು ರಾಜ್ಯಗಳ 350 ಸಿಂಗಲ್ ಸ್ಕ್ರೀನ್​ನಲ್ಲಿ ರಿಲೀಸ್ ಆಗುತ್ತಿದೆ. ಮೊದಲ ದಿನ 1,400 ಶೋ ಆಗುವ ನಿರೀಕ್ಷೆ ಇದೆ. ಇನ್ನು ತಮಿಳುನಾಡಿನ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗುತ್ತಿದೆ. ಕೇರಳದಲ್ಲಿ 110 ಸ್ಕ್ರೀನ್​ನಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗುತ್ತಿದೆ. ಕೇರಳದಲ್ಲೂ 600 ಕ್ಕೂ ಹೆಚ್ಚು ಶೋಗಳು ಆಗಲಿವೆಯಂತೆ.

ಇದನ್ನೂ ಓದಿ: ಕನ್ನಡದ 'ವಿಕ್ರಾಂತ್ ರೋಣ' ಪ್ರೀಮಿಯರ್ ಶೋ.. ಸಂಸದರು, ಅಧಿಕಾರಿಗಳಿಗೆ ಕಿಚ್ಚನ ವಿಶೇಷ ಆಹ್ವಾನ

ಇದು ಅಷ್ಟೇ ಅಲ್ಲ ಉತ್ತರ ಭಾರತಲ್ಲಿ ಒಟ್ಟು 690 ಸ್ಕ್ರೀನ್​ನಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರುತ್ತಿದೆ. ಉತ್ತರ ಭಾರತ ಭಾಗದಲ್ಲಿ ಮೊದಲ ದಿನ 2,800 ಶೋಗಳು ಆಗಲಿದೆಯಂತೆ. ಅದೇ ರೀತಿ ವಿದೇಶದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಸುದೀಪ್ ಸಿನಿಮಾ ರಿಲೀಸ್ ಆಗುತ್ತಿದೆ. ಓವರ್​ಸೀಸ್​ನ 600 ಸ್ಕ್ರೀನ್​ನಲ್ಲಿ ಬಿಡುಗಡೆ ಆಗುತ್ತಿದೆ. ಅಂದಾಜಿನ ಪ್ರಕಾರ ವಿದೇಶದಲ್ಲೂ ಮೊದಲ ದಿನ 1500 ಶೋಗಳು ಆಗುತ್ತಿದೆ.

'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನೀತು ಅಶೋಕ್

ಇನ್ನು ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೇಲಿನ್ ಫರ್ನಾಂಡಿಸ್ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ, ಡೇವಿಡ್ ವಿಲಿಯಂ ಕ್ಯಾಮರವರ್ಕ್ ಈ ಚಿತ್ರಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಪಕ ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಹೈಲೆಟ್ಸ್​ಗಳಿಗೆ ಕಾರಣವಾಗಿರೋ ವಿಕ್ರಾಂತ್ ರೋಣ ಚಿತ್ರ ಕಿಚ್ಚನ ಅಬ್ಬರ ಹೇಗಿರುತ್ತೆ ಅನ್ನೋದು ನಾಳೆ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.