ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಯಶಸ್ವಿ ಸಿನಿಮಾಗಳನ್ನು ಮಾಡುತ್ತಿರುವ ನಟ. ನಟನಾ ಕೌಶಲ್ಯದಿಂದ ನಟ ರಾಕ್ಷಸ ಅಂತಾ ಕರೆಯಿಸಿಕೊಂಡಿರುವ ಡಾಲಿ ಅಭಿನಯದ ಮಾನ್ಸೂನ್ ರಾಗ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ತೋತಾಪುರಿ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಹೊಯ್ಸಳ, ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಧನಂಜಯ್ ಅಕೌಂಟ್ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ.
![The 26th movie of Dolly dhananjay is being produced in Kannada Telugu](https://etvbharatimages.akamaized.net/etvbharat/prod-images/16421760_news.jpg)
ಪುಷ್ಪ ಸಿನಿಮಾ ಮೂಲಕ ತೆಲುಗು ಸಿನಿಲೋಕಕ್ಕೂ ಪರಿಚಿತರಾದ ಇವರೀಗ ಬಹುಭಾಷಾ ನಟ. ಈ ಮೂಲಕ ಡಾಲಿಗೆ ಬೇಡಿಕೆ ಹೆಚ್ಚಿದ್ದು, ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆಯ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾ. ಈ ಚಿತ್ರದಲ್ಲಿ ಧನಂಜಯ್ ಜೊತೆಗೆ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ಕೂಡ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಕೂಡ ಹೌದು.
ಇದನ್ನೂ ಓದಿ: ಖಡಕ್ ಪೊಲೀಸ್ ಪಾತ್ರದಲ್ಲಿ ಮಿಂಚಿದ ಡೈನಾಮಿಕ್ ಹೀರೋ ದೇವರಾಜ್ ಜನ್ಮದಿನ
ಈ ಹಿಂದೆ ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕ್ರೈಮ್ ಕಥೆಯನ್ನೊಳಗೊಂಡ ಈ ಚಿತ್ರವನ್ನು ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ ಸಿನಿಮಾಕ್ಕಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.