ETV Bharat / entertainment

ರಜನಿಕಾಂತ್​ 170ನೇ ಸಿನಿಮಾಗೆ ಟಿ.ಜೆ.ಜ್ಞಾನವೇಲ್ ಆ್ಯಕ್ಷನ್​ ಕಟ್​; ಚಿತ್ರತಂಡದಿಂದ ಅಧಿಕೃತ ಘೋಷಣೆ - etv bharat kannada

Thalaivar170: ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಮತ್ತು 'ಜೈ ಭೀಮ್​' ಖ್ಯಾತಿಯ ಟಿ.ಜೆ.ಜ್ಞಾನವೇಲ್ ಕಾಂಬೋದಲ್ಲಿ 'ತಲೈವರ್​ 170' ಅಧಿಕೃತ ಘೋಷಣೆಯಾಗಿದೆ.

Official team of makers of Rajinikanth's film Thalaivar 170 announced know about more details
Thalaivar170: ರಜನಿಕಾಂತ್​ 170ನೇ ಸಿನಿಮಾಗೆ ಟಿಜೆ ಜ್ಞಾನವೇಲ್ ಆಕ್ಷನ್​ ಕಟ್​; ಚಿತ್ರತಂಡದಿಂದ ಅಧಿಕೃತ ಘೋಷಣೆ
author img

By ETV Bharat Karnataka Team

Published : Oct 1, 2023, 5:55 PM IST

ಕಾಲಿವುಡ್​ ಹಿರಿಯ ನಟ​ ರಜನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಆಗಸ್ಟ್​ 10ರಂದು ತೆರೆಕಂಡು ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಮೂಲಕ ತಲೈವಾ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಇದು ಒಂದಾಗಿದೆ. ಇದರ ಹೊರತಾಗಿ ರಜನಿ ಮುಂದಿನ ಪ್ರಾಜೆಕ್ಟ್​ ಕುರಿತಾಗಿ ಈಗಾಗಲೇ ಸಾಕಷ್ಟು ಅಪ್​ಡೇಟ್ಸ್​ ಅವರ ಅಭಿಮಾನಿಗಳಿಗೆ ಸಿಕ್ಕಿದೆ. ಇದೀಗ 'ತಲೈವರ್​ 170' ಸಿನಿಮಾ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗಿದೆ.

'ಜೈಲರ್'​ ಹಿಟ್​ ನಂತರ ರಜನಿಕಾಂತ್​ 170ನೇ ಸಿನಿಮಾದ ಬಗ್ಗೆ ಸೋಷಿಯಲ್​ ಮೀಡಿಯಾಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಕೆಲವು ಅಂತೆ-ಕಂತೆಗಳು ಕೇಳಿಬರುತ್ತಿದೆ. ಈ ನಡುವೆ ಚಿತ್ರತಂಡದಿಂದ ಅಧಿಕೃತ ಘೋಷಣೆಯೊಂದು ಹೊರಬಿದ್ದಿದೆ. ತಲೈವರ್​ 170ನೇ ಸಿನಿಮಾವನ್ನು 'ಜೈ ಭೀಮ್​' ಖ್ಯಾತಿಯ ಟಿ.ಜೆ.ಜ್ಞಾನವೇಲ್​ ನಿರ್ದೇಶಿಸಲಿದ್ದಾರೆ. ಜವಾನ್​, ಜೈಲರ್​ನಂತಹ ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನಿರುದ್ಧ್​ ರವಿಚಂದರ್ ಈ ಸಿನಿಮಾಗೂ​ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಮೂಲಕ ಸುಭಾಸ್ಕರನ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಇದನ್ನೂ ಓದಿ: ಗೆಳೆಯ ರಜನಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ; ಕಮಲ್​ ಹಾಸನ್​ ರಿಯಾಕ್ಷನ್​ ಹೀಗಿತ್ತು..

ಪ್ರಸ್ತುತ ಈ ಸಿನಿಮಾಗೆ 'ತಲೈವರ್ 170' ಎಂದೇ ಹೆಸರಿಡಲಾಗಿದೆ. ಈ ಚಿತ್ರವು ಆ್ಯಕ್ಷನ್​ ಪ್ಯಾಕ್ಡ್​ ಎಂಟರ್ಟೈನರ್​ ಆಗಿರಲಿದೆ. ರಜನಿಕಾಂತ್​ ವಿಶೇಷ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕಥೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ತಲೈವಾ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ರಜನಿ ಮುಂದಿನ ಸಿನಿಮಾ ತಲೈವರ್​ 171 ಬಗ್ಗೆಯೂ ಅಭಿಮಾನಿಗಳಿಗೆ ಈಗಾಗಲೇ ಅಪ್​ಡೇಟ್ಸ್​ ಸಿಕ್ಕಿದೆ.

ಲೋಕೇಶ್​ ಕನಕರಾಜ್​ ಜೊತೆ ರಜನಿ ಸಿನಿಮಾ: ರಜನಿಕಾಂತ್​ ಮತ್ತು ಸ್ಟಾರ್​ ನಿರ್ದೇಶಕ ಲೋಕೇಶ್​ ಕನಕರಾಜ್ ಕಾಂಬೋದಲ್ಲಿ ಮತ್ತೊಂದು ಬ್ಲಾಕ್​ಬಸ್ಟರ್​ ಚಿತ್ರ ಬರಲಿದೆ ಎಂದು ಈಗಾಗಲೇ ಅಧಿಕೃತ ಘೋಷಣೆಯಾಗಿದೆ. 'ಜೈಲರ್'​ ಸೂಪರ್​ ಹಿಟ್​ ಆದ ನಂತರ, ರಜನಿಕಾಂತ್​ ಅವರು ತಮ್ಮ 171ನೇ ಚಿತ್ರಕ್ಕಾಗಿ ಸನ್​ಪಿಕ್ಚರ್ಸ್​ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ತಲೈವರ್​ 171 ಎಂದು ಶೀರ್ಷಿಕೆ ಇಡಲಾಗಿದೆ.

ಈ ಸಿನಿಮಾಗೆ ಕೈದಿ, ವಿಕ್ರಮ್​ ಮತ್ತು ಲಿಯೋಗೆ ಹೆಸರುವಾಸಿಯಾಗಿರುವ ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್​ ಕನಕರಾಜ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾದ ಯಶಸ್ಸಿನಲ್ಲಿರುವ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಮ್ಯೂಸಿಕ್​ನಲ್ಲಿ ​ತಲೈವರ್​ 171 ಹಾಡುಗಳು ಕೂಡ ಬರಲಿದೆ.

ಇದನ್ನೂ ಓದಿ: ICC World Cup 2023: ರಜನಿಕಾಂತ್​ಗೆ​ ಗೋಲ್ಡನ್​ ಟಿಕೆಟ್​ ನೀಡಿ ವಿಶ್ವಕಪ್​ಗೆ ಆಹ್ವಾನಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.