ETV Bharat / entertainment

ಕ್ರೇಜಿ ಸ್ಟಾರ್ ರವಿಚಂದ್ರನ್​ ಭೇಟಿ ಮಾಡಿದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ.. - ಮಾಸ್ ಟ್ರೇಲರ್ ಭರ್ಜರಿ ಸದ್ದು

ತಮ್ಮ ದಸರಾ ಸಿನಿಮಾ ಪ್ರಮೋಷನ್ ಮುಗಿಸಿದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ, ಕನ್ನಡ ಚಿತ್ರರಂಗದ ಶೋ ಮ್ಯಾನ್‌ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನ ಭೇಟಿ ಮಾಡಿದರು.

Telugu natural star Nani
ನಾನಿ ಜೊತೆಗೆ ರವಿಚಂದ್ರನ್ ಮಾತುಕತೆ
author img

By

Published : Mar 15, 2023, 10:47 PM IST

ಬೆಂಗಳೂರು: ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಚಿತ್ರ 'ದಸರಾ' ಸಿನಿಮಾದ ಆಫೀಶಿಯಲ್ ಟ್ರೈಲರ್ ಬಿಡುಗಡೆ ಆಗಿದ್ದು, ಇದೇ ತಿಂಗಳು ಪ್ರೇಕ್ಷಕರ ಮುಂದೆ ಬರ್ತಾ ಇದೆ. ಈಗಾಗಲೇ ಮುಂಬೈ, ಹೈದರಾಬಾದ್​ನಲ್ಲಿ ದಸರಾ ಸಿನಿಮಾದ ಪ್ರಚಾರ ಮಾಡಿದ ನಾನಿ, ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ.

Telugu natural star Nani
ರಾಜಾಜಿನಗರದಲ್ಲಿರೋ ರವಿಚಂದ್ರನ್ ಮನೆಗೆ ಭೇಟಿ ನೀಡಿದ ನಾನಿ

ತಮ್ಮ ದಸರಾ ಸಿನಿಮಾ ಪ್ರಮೋಷನ್ ಮುಗಿಸಿದ ನಾನಿ, ಕನ್ನಡ ಚಿತ್ರರಂಗದ ಶೋ ಮ್ಯಾನ್‌ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನ ಭೇಟಿ ಮಾಡಿದ್ದಾರೆ. ರಾಜಾಜಿನಗರದಲ್ಲಿರೋ ರವಿಚಂದ್ರನ್ ಮನೆಗೆ ಭೇಟಿ ನೀಡಿದ ನಾನಿ ಅವರನ್ನ ಸ್ವತಃ ರವಿಚಂದ್ರನ್ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಆದರೆ, ರವಿಚಂದ್ರನ್ ಅವರನ್ನ ಯಾಕೇ ನಾನಿ ಭೇಟಿ ಮಾಡಿದರು ಅಂತಾ ಕೇಳಿದ್ರೆ, ಸೌಹಾರ್ದ ಭೇಟಿ ಅಂತಾ ಹೇಳಲಾಗುತ್ತಿದೆ.

Telugu natural star Nani
ನಾನಿ ಜೊತೆಗೆ ರವಿಚಂದ್ರನ್ ಮಾತುಕತೆ

ದಸರಾ ಚಿತ್ರ ಮಾಸ್ ಟ್ರೇಲರ್ ಭರ್ಜರಿ ಸದ್ದು: ದಸರಾ ಚಿತ್ರ ರಗಡ್ ಹಾಗೂ ಮಾಸ್ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಧರಣಿಯಾಗಿ ನಾನಿ ಅವತಾರ ಸಖತ್ ಕಿಕ್ ನೀಡುತ್ತಿದೆ. ಟ್ರೇಲರ್ ತುಣುಕಿನಲ್ಲಿ ನಾನಿ ಮಾಸ್ ಅವತಾರ, ಸಿಂಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಮನದಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ನ್ಯಾಚುರಲ್ ಸ್ಟಾರ್ ಮೇಕೋವರ್, ರಗಡ್ ಲುಕ್, ಹಾವ ಭಾವ ಎಲ್ಲವೂ ಗಮನ ಸೆಳೆದಿದೆ. ನಾನಿ ಅಭಿಮಾನಿಗಳು ಕೂಡ ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಮಾಸ್ ಆಕ್ಷನ್ ಸಬ್ಜೆಕ್ಟ್ ಮೂಲಕ ತೆರೆ ಮೇಲೆ ಬರ್ತಿದೆ ದಸರಾ ಸಿನಿಮಾ.

Telugu natural star Nani
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಕನ್ನಡ ಚಿತ್ರರಂಗದ ಶೋ ಮ್ಯಾನ್‌ ಕ್ರೇಜಿ ಸ್ಟಾರ್ ರವಿಚಂದ್ರನ್ ಚರ್ಚೆಯಲ್ಲಿ ತೊಡಗಿರುವುದು

ಬಿಗ್ ಬಜೆಟ್​ನಲ್ಲಿ ಚಿತ್ರ ನಿರ್ಮಾಣ: ಈ ಚಿತ್ರವನ್ನು ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ನಾನಿ ಹಾಗು ಕೀರ್ತಿ ಸುರೇಶ್ ಅಲ್ಲದೇ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾ ಬಳಗವಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್​ ಭೇಟಿ ಮಾಡಿದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ

ಮಾರ್ಚ್ 30ಕ್ಕೆ ವರ್ಲ್ಡ್ ವೈಡ್ ಬಿಡುಗಡೆ: ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ‘ದಸರಾ’ ಸಿನಿಮಾ ಮೂಡಿ ಬಂದಿದೆ. ಸದ್ಯ ಟೀಸರ್, ಹಾಡುಗಳ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ಇದೀಗ ರಗಡ್ ಅಂಡ್ ಮಾಸ್ ಟ್ರೇಲರ್ ಮೂಲಕ ಸಿನಿ ಪ್ರೇಕ್ಷಕರಿಗೆ ಈ ಚಿತ್ರ ಆಮಂತ್ರಣ ನೀಡಿದೆ. ಮಾಸ್ ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಮಾರ್ಚ್ 30ರಂದು ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್​ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.