ETV Bharat / entertainment

ಸ್ಯಾಂಡಲ್​ವುಡ್​​ನ ಉಸಿರೇ ಉಸಿರೇ ಸಿನಿಮಾದಲ್ಲಿ ತೆಲುಗಿನ ಹಾಸ್ಯ ದಿಗ್ಗಜರಾದ ಬ್ರಹ್ಮಾನಂದಂ, ಅಲಿ - ಉಸಿರೇ ಉಸಿರೇ ಕನ್ನಡ ಸಿನಿಮಾದ ಚಿತ್ರೀಕರಣ

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗು ಅಲಿ ಸ್ಯಾಂಡಲ್​ವುಡ್​ನ ಉಸಿರೇ ಉಸಿರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ನಾಟಕದ ಮೇಷ್ಟ್ರು ಪಾತ್ರದಲ್ಲಿ ಬ್ರಹ್ಮಾನಂದಂ ನಟಿಸಿದ್ರೆ, ಅಲಿ ಉಪನ್ಯಾಸಕರಾಗಿ ಅಭಿನಯಿಸಿದ್ದಾರೆ.

telugu-comedy-actors-in-sandalwood-cinema-usire-usire
ಸ್ಯಾಂಡಲ್​ವುಡ್​​ನ ಉಸಿರೇ ಉಸಿರೇ ಸಿನಿಮಾದಲ್ಲಿ ತೆಲುಗಿನ ಹಾಸ್ಯ ದಿಗ್ಗಜರಾದ ಬ್ರಹ್ಮಾನಂದಂ, ಅಲಿ
author img

By

Published : Apr 13, 2022, 8:26 AM IST

ಸಿಸಿಎಲ್ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ರಾಜೀವ್. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಜನಮಸೂರೆಗಂಡಿದ್ದ ರಾಜೀವ್ ಅವರು ಉಸಿರೇ ಉಸಿರೇ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಗೆಲ್ಲುವ ಪಣ ತೊಟ್ಟಿದ್ದಾರೆ. ಅದ್ಧೂರಿಯಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಂಡ ಉಸಿರೇ ಉಸಿರೇ ಸಿನಿಮಾ‌ದ ಒಂದಲ್ಲಾ ಒಂದು ಹೈಲೆಟ್ಸ್​​ಗೆ ಸದ್ದು ಮಾಡುತ್ತಿದೆ. ಹೌದು, ಈ ಚಿತ್ರದಲ್ಲಿ ತೆಲುಗು ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗು ಅಲಿ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನ ವರದರಾಜ ಕಲಾಮಂದಿರದಲ್ಲಿ ಸಿನಿಮಾದಲ್ಲಿ ಬರುವ ನಾಟಕವೊಂದರ ಸನ್ನಿವೇಶವನ್ನು ಚಿತ್ರೀಕರಣ ಮಾಡಲಾಯಿತು.

ನಟ‌ ರಾಜೀವ್ ರಾಮನ ವೇಷ ಹಾಕಿದ್ರೆ, ಹಾಸ್ಯ ನಟ ಪಾವಗಡ ಮಂಜು ಹನುಮಂತನ ಪಾತ್ರ ಮಾಡಿದ್ದಾರೆ. ಇಲ್ಲಿ ಈ ನಾಟಕದ ಮೇಷ್ಟ್ರು ಪಾತ್ರದಲ್ಲಿ ಬ್ರಹ್ಮಾನಂದಂ ನಟಿಸಿದ್ರೆ, ಅಲಿ ಉಪನ್ಯಾಸಕರಾಗಿ ಕಾಣಿಸಿಕೊಂಡಿದ್ದಾರೆ. ಈ ಸನ್ನಿವೇಶಕ್ಕೆ ನಿರ್ದೇಶಕ ಸಿ.ಎಂ.ವಿಜಯ್ ಆ್ಯಕ್ಷನ್ ಕಟ್ ಹೇಳಿದ್ರೆ, ಕ್ಯಾಮರಾಮ್ಯಾನ್ ಸರಣವನ್ ಈ ಸನ್ನಿವೇಶವನ್ನು ಚಿತ್ರೀಕರಿಸಿದ್ದಾರೆ. ಚಿತ್ರೀಕರಣದ ಬಳಿಕ ಮಾತನಾಡಿದ ನಿರ್ದೇಶಕ ವಿಜಯ್ ಇದೊಂದು ಪಕ್ಕಾ ಪ್ರೇಮಕಥೆ.‌ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಹಾಡುಗಳು ಮಾತ್ರ ಬಾಕಿ ಇದೆ. ಈ ಚಿತ್ರದಲ್ಲಿ ಬ್ರಹ್ಮಾನಂದಂ ಸಾರ್ ಹಾಗು ಅಲಿ ಸಾರ್ ಪಾತ್ರಗಳಿಗೆ ತುಂಬಾ ಸ್ಕೋಪ್ ಇದೆ ಅಂದರು.

ಉಸಿರೇ ಉಸಿರೇ ಸಿನಿಮಾದಲ್ಲಿ ತೆಲುಗಿನ ಹಾಸ್ಯ ದಿಗ್ಗಜರಾದ ಬ್ರಹ್ಮಾನಂದಂ, ಅಲಿ

ರಾಜೀವ್ ಜೋಡಿಯಾಗಿ ನಟಿಸುತ್ತಿರುವ,‌ ಶ್ರೀಜಿತ ಘೋಷ್ ಮಾತನಾಡಿ, ತೆಲುಗು ಚಿತ್ರರಂಗದ ಲೆಜೆಂಡ್ ನಟರ ಜೊತೆ ಅಭಿನಯಿಸಿರೋದು ನನ್ನ‌ ಅದೃಷ್ಟ ಅಂದರು. ಬಳಿಕ ಮಾತನಾಡಿದ ತೆಲುಗು ನಟ‌ ಅಲಿ, ಈ ಸಿನಿಮಾದಲ್ಲಿ ನಾನು ವಿಶೇಷ ಪಾತ್ರ ಅಭಿನಯಿಸುತ್ತಿದ್ದೇನೆ. ರಾಜೀವ್ ಒಳ್ಳೆ ನಟ. ನಾನು ಸಿಸಿಎಲ್ ಕ್ರಿಕೆಟ್ ಟೂರ್ನಿಮೆಂಟ್ ಚಿತ್ರದಲ್ಲಿ ನಾನು ನೋಡಿದ್ದೇನೆ. ಇದರ ಜೊತೆಗೆ ನನ್ನ ಗುರುಗಳಾದ ಬ್ರಹ್ಮಾನಂದಂ ಅಣ್ಣನ ಜೊತೆ ಕನ್ನಡ ಚಿತ್ರದಲ್ಲಿ ಅಭಿನಯಿಸಿರೋದು ಖುಷಿ ಅಂದರು.

ಕೊನೆಯದಾಗಿ ಮಾತನಾಡಿದ ನಟ ಬ್ರಹ್ಮಾನಂದಂ ಈ‌ ಸಿನಿಮಾ ಒಪ್ಪಿಕೊಳ್ಳೋದಕ್ಕೆ ನಿರ್ಮಾಪಕ ಪ್ರದೀಪ್ ಕಾರಣ. ಕನ್ನಡ ಸಿನಿಮಾದಲ್ಲಿ ಅಭಿನಯಿಸೋಕೆ ಡಾ.ರಾಜ್​ಕುಮಾರ್ ಅವರು ಕಾರಣ. ಯಾಕೆಂದರೆ ರಾಜ್​ಕುಮಾರ್ ಸಿನಿಮಾ ಅವರ ಸರಳತೆ ಕೋಟ್ಯಂತರ ಜನರಿಗೆ ಸ್ಫೂರ್ತಿ. ಈ ಚಿತ್ರದಲ್ಲಿ ರಾಜೀವ್, ನಟಿ ಶ್ರೀಜಿತ, ನಿರ್ದೇಶಕ ವಿಜಯ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಹಾಡುವ ಮೂಲಕ ಈ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತಾ ಹಾರೈಸಿದರು. ಇನ್ನು ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣವಿದೆ. ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಅಮೆರಿಕಾ ಸಿನಿಮಾಗೆ 25 ವರ್ಷ.. ಈ ಚಿತ್ರದ ಕಷ್ಟ-ಸುಖಗಳ ಬಿಚ್ಚಿಟ್ಟ ನಟ, ನಿದೇಶಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.