ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಟನೆಯ ಬ್ಲಾಕ್ ಬಸ್ಟರ್ ಚಿತ್ರ ಪುಷ್ಪ ಚಿತ್ರ ಇದೆ ಡಿಸೆಂಬರ್ 1ರಂದು ಮಾಸ್ಕೋದಲ್ಲಿ ತೆರೆ ಕಾಣಲಿದೆ. ಭಾರತದಲ್ಲಿ ಸೂಪರ್ ಸಕ್ಸಸ್ ಕಂಡ ಪುಷ್ಪ ಸಿನಿಮಾ ಇದೀಗ ರಷ್ಯಾದಲ್ಲಿ ಬಿಡುಗಡೆ ಆಗುತ್ತಿರುವುದಕ್ಕೆ ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ.
ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೆಂಟ್ ಪೀಟರ್ ಬರ್ಗ್‌ನಲ್ಲಿ ಮೊದಲ ಪ್ರದರ್ಶನವನ್ನು ಕಾಣಲಿದ್ದು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ರಷ್ಯಾದ 24 ನಗರಗಳಲ್ಲಿ ನಡೆಯಲಿರುವ 5ನೇ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿಯೂ ಚಲನಚಿತ್ರವು ಮೊದಲಿಗೆ ಪ್ರದರ್ಶನಗೊಳ್ಳುತ್ತಿದೆ ಚಿತ್ರತಂಡ ಟ್ವೀಟ್ ಮಾಡಿದೆ.
-
Team #PushpaTheRise Landed in Russia 💥💥
— Pushpa (@PushpaMovie) November 30, 2022 " class="align-text-top noRightClick twitterSection" data="
Meet the team at the Russian language Special premieres on Dec 1st at Moscow & Dec 3rd at St. Petersburg 💥💥#PushpaInRussia from Dec 8th 🔥
Icon Star @alluarjun @iamRashmika @aryasukku @ThisIsDSP @MythriOfficial @4SeasonsCreati1 pic.twitter.com/Mt6xucws4h
">Team #PushpaTheRise Landed in Russia 💥💥
— Pushpa (@PushpaMovie) November 30, 2022
Meet the team at the Russian language Special premieres on Dec 1st at Moscow & Dec 3rd at St. Petersburg 💥💥#PushpaInRussia from Dec 8th 🔥
Icon Star @alluarjun @iamRashmika @aryasukku @ThisIsDSP @MythriOfficial @4SeasonsCreati1 pic.twitter.com/Mt6xucws4hTeam #PushpaTheRise Landed in Russia 💥💥
— Pushpa (@PushpaMovie) November 30, 2022
Meet the team at the Russian language Special premieres on Dec 1st at Moscow & Dec 3rd at St. Petersburg 💥💥#PushpaInRussia from Dec 8th 🔥
Icon Star @alluarjun @iamRashmika @aryasukku @ThisIsDSP @MythriOfficial @4SeasonsCreati1 pic.twitter.com/Mt6xucws4h
ಈಗಾಗಲೇ ಚಿತ್ರದ ತಂಡ ರಷ್ಯಾಗೆ ಹಾರಿದ್ದು ಅಲ್ಲಿ ಪ್ರದರ್ಶನಗೊಳ್ಳುತ್ತಿರುವ ಶೋನಲ್ಲಿ ಅವರು ಭಾಗಿಯಾಗಲಿದ್ದಾರೆ. ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್ ಸೇರಿದಂತೆ ಇಡೀ ತಂಡ ರಷ್ಯಾದಲ್ಲಿ ಬೀಡು ಬಿಟ್ಟಿದೆ. ಚಿತ್ರತಂಡಕ್ಕೆ ಮಾಸ್ಕೋ ಜನರು ವೆಲ್‌ಕಮ್ ಮಾಡಿದ್ದಾರೆ. ಡಿಸೆಂಬರ್ 1ಕ್ಕೆ ಪ್ರದರ್ಶನವಾಗುತ್ತಿರುವ ಈ ಚಿತ್ರವನ್ನು ಮಾಸ್ಕೋ ಚಿತ್ರಪ್ರೇಮಿಗಳು ಯಾವ ರೀತಿ ಅಪ್ಪಿ ಒಪ್ಪಿಕೊಳ್ಳತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ರವೀನಾ ಟಂಡನ್ಗೆ ಆಪತ್ತು ತಂದ ವೈರಲ್ ವಿಡಿಯೋ: ತನಿಖೆಗೆ ಆದೇಶ