ಮುಂಬೈ: ಬಾಲಿವುಡ್ ನಟಿ ತಾರಾ ಸುತಾರಿಯಾ ಅವರ ಅಪೂರ್ವ ಚಿತ್ರದ ಮೊದಲ ಲುಕ್ ಬಿಡುಗಡೆಗೊಂಡಿದೆ. ಕ್ಲಾಪ್ ಬೋರ್ಡ್ ಮೂಲಕ ತಮ್ಮ ಮುಂದಿನ ಚಿತ್ರದ ಕುರಿತ ಅಪ್ಡೇಟ್ ನೀಡಿರುವ 'ಹಿರೋಪತಿ 2' ಚಿತ್ರದ ನಟಿ, ತಮ್ಮ ಉಗ್ರ, ಗಟ್ಟಿ ಮತ್ತು ಆಳ ನೋಟದ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಕೂಡ ಅವರು ತಿಳಿಸಿದ್ದಾರೆ.
'ಅಪೂರ್ವ' ಸಿನಿಮಾ ಥ್ರಿಲ್ಲರ್ ಆಧಾರಿತ ಕಥೆ ಹೊಂದಿದ್ದು, ಈ ಹಿಂದೆ ಕಂಡರಿಯದ ಪಾತ್ರದಲ್ಲಿ ತಾರಾ ಸುತರಿಯಾ ನಟಿಸಲಿದ್ದಾರೆ. ಇನ್ನು ಭಾರಿ ಕುತೂಹಲ ಮೂಡಿಸುವ ಈ ಚಿತ್ರದ ಕುರಿತು ತಾರಾ ಕಳೆದ ಜುಲೈನಲ್ಲಿ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದರು. 'ಭಯ ಹೊಂದಿರದ ಮುಖ. ಆಕೆಯ ಹೆಸರು ಅಪೂರ್ವ!' ಎಂದು ಚಿತ್ರದ ಕುರಿತು ಅಪ್ಡೇಟ್ ನೀಡಿದ್ದರು.
ಗಟ್ಟಿ ಮತ್ತು ಶಕ್ತಿಯುವ ಯುವ ಮಹಿಳೆ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. 'ಅಪೂರ್ವ' ಅಸಾಧ್ಯಗಳ ಸುಳಿಯಲ್ಲಿ ಬದುಕುಳಿಯುವ ಆಟವಾಗಲಿದ್ದು, ಈ ಚಿತ್ರ ಕಡೆಯವರೆಗೂ ನಿಮ್ಮನ್ನು ಹಿಡಿದು ಕೂರಿಸುತ್ತದೆ ಎಂದಿದ್ದಾರೆ.
'ಅಪೂರ್ವ'ಕ್ಕಿಂತ ಉತ್ತಮ ಕಥೆ ಕೇಳಲು ಸಾಧ್ಯವಿಲ್ಲ. ಯುವ ಮಹಿಳೆಯಾಗಿ ಇಂತಹ ಕಥೆಯಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಮಹಿಳೆಯ ಒಳಶಕ್ತಿ ಮತ್ತು ಧೈರ್ಯದ ಕುರಿತ ಕಥೆ ಇದಾಗಿದೆ. ಬುದ್ಧಿವಂತ, ಧೈರ್ಯವಂತ ಮಹಿಳೆ ಪಾತ್ರದಲ್ಲಿ ನಟಿಸಲು ನಾನು ಕಾಯುತ್ತಿದ್ದೇನೆ ಎಂದಿದ್ದಾರೆ. ಇತ್ತೀಚೆಗಷ್ಟೆ ತಾರಾ 'ಏಕ್ ವಿಲನ್ ರಿಟರ್ನ್ಸ್' ಪಾತ್ರದಲ್ಲಿ ಮಿಂಚಿದ್ದರು.
ಇದನ್ನೂ ಓದಿ: 'ಮಿರ್ಜಾ ಮಲಿಕ್ ಶೋ'.. ಬೇರ್ಪಡೆ ವದಂತಿ ನಡುವೆ ಒಟ್ಟಿಗೆ ಕೆಲಸ ಮಾಡಲು ಮುಂದಾದ ದಂಪತಿ