ಕ್ರಿಕೆಟ್ ದಿಗ್ಗಜರ ಸಿನಿಮಾಗಳು ಈಗ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿವೆ. ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಜೂಲನ್ ಗೋಸ್ವಾಮಿ ಬಳಿಕ ಈಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಮಹಿಳಾ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ನಟಿ ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ನಟಿಸಲಿದ್ದು, ಚಿತ್ರಕ್ಕೆ 'ಶಹಬ್ಬಾಸ್ ಮಿಥು' ಎಂದು ಹೆಸರಿಡಲಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ.
- " class="align-text-top noRightClick twitterSection" data="">
ಮಿಥಾಲಿ ರಾಜ್ ತಾವು ಕ್ರಿಕೆಟಿಗರಾಗಿ ಬೆಳೆಯಲು ಏನೆಲ್ಲಾ ಕಷ್ಟಗಳನ್ನು ದಾಟಿ ಬಂದರು. ಕ್ರಿಕೆಟ್ ಬಗ್ಗೆ ಎಷ್ಟೆಲ್ಲಾ ಆಸೆಗಳನ್ನು ಹೊಂದಿದ್ದರು. ಆ ಕಾಲದಲ್ಲಿ ಮಹಿಳಾ ಕ್ರಿಕೆಟ್ಗೆ ಎಷ್ಟರ ಮಟ್ಟಿಗೆ ಮನ್ನಣೆ ಇತ್ತು ಎಂಬುದನ್ನು ಸಿನಿಮಾ ಹೊಂದಿದೆ. ತಾಪ್ಸಿ ಪನ್ನು ನಾಯಕಿಯಾಗಿರುವ ಈ ಸಿನಿಮಾವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
'ಮೆನ್ ಇನ್ ಬ್ಲೂ ರೀತಿಯೇ 'ವುಮೆನ್ ಇನ್ ಬ್ಲೂ' ಟೀಂ ಇದ್ದರೆ ಎಷ್ಟು ಚೆನ್ನ ಅಲ್ವಾ? ಎಂಬ 8 ವರ್ಷದ ಬಾಲಕಿ ಹೇಳುವ ಆ ಡೈಲಾಗ್ ಸಿನಿಮಾದ ಸತ್ವವನ್ನು ಹೆಚ್ಚಿಸಿದೆ. ಮಿಥಾಲಿ ಪಾತ್ರದಲ್ಲಿ ತಾಪ್ಸಿ ಆಕರ್ಷಕವಾಗಿ ಅಭಿನಯಿಸಿದ್ದು, ಕೆಲವು ದೃಶ್ಯಗಳಲ್ಲಿ ಆಕೆಯ ಅಭಿನಯ ಪ್ರೇಕ್ಷಕರನ್ನು ಭಾವುಕರನ್ನಾಗಿಸುವಂತಿದೆ. ಸಿನಿಮಾವನ್ನು ವಯಾಕಾಮ್ 18 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಜುಲೈ 15 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ದಿಶಾ ಪಟಾನಿ ಮಾದಕ ಲುಕ್ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್