ETV Bharat / entertainment

ತಮಿಳಿನ ಖ್ಯಾತ​ ನಟ ಅಜಿತ್​ ತಂದೆ ಸುಬ್ರಹ್ಮಣ್ಯಂ ವಿಧಿವಶ - etv bharat kannada

ಕಾಲಿವುಡ್​ ನಟ ಅಜಿತ್ ಕುಮಾರ್ ಅವರ​​ ತಂದೆ ಪಿ.ಸುಬ್ರಮಣ್ಯಂ ಇಂದು ನಿಧನರಾದರು.

ajith
ಅಜಿತ್​ ತಂದೆ ಸುಬ್ರಹ್ಮಣ್ಯಂ ವಿಧಿವಶ
author img

By

Published : Mar 24, 2023, 11:10 AM IST

Updated : Mar 24, 2023, 11:56 AM IST

ತಮಿಳಿನ ಸ್ಟಾರ್​ ನಟ ಅಜಿತ್ ಕುಮಾರ್​​ ಅವರ ತಂದೆ ಪಿ.ಸುಬ್ರಮಣ್ಯಂ (84) ಅವರಿಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ತಂದೆಯ ಸಾವಿನಿಂದ ಅಜಿತ್​ ಮನೆಯಲ್ಲಿ ದುಃಖ ಮಡುಗಟ್ಟಿದೆ. ಇಂದು ಸಂಜೆ ಚೆನ್ನೈನ ಬೀಸೆಂಟ್ ನಗರದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಅಜಿತ್​ ಕುಮಾರ್​, ಪತ್ನಿ ಶಾಲಿನಿ ಮತ್ತು ಕುಟುಂಬಸ್ಥರು ಸದ್ಯ ಯುರೋಪ್​ನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಫ್ಯಾಮಿಲಿ ಟೂರ್​ಗೆ ತೆರಳಿದ್ದರು. ಆದರೆ ತಂದೆ ಸಾವಿನ ಸುದ್ದಿ ತಿಳಿದ ತಕ್ಷಣ ಅಜಿತ್​ ಮತ್ತು ಕುಟುಂಬ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅಜಿತ್​ ತಂದೆಯ ಸಾವಿನಿಂದ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಸಂಪಾಪ ಸೂಚಿಸಿದ್ದಾರೆ.

ಅಜಿತ್​ ಕುಮಾರ್​ ತಂದೆ ಪಿ.ಸುಬ್ರಹ್ಮಣ್ಯಂ (84) ಮೂಲತಃ ಕೇರಳದ ಪಾಲಕ್ಕಾಡಿನವರು. ಇವರು ಪಶ್ಚಿಮ ಬಂಗಾಳದ ಮೋಹಿನಿ ಎಂಬವರನ್ನು ಮದುವೆಯಾಗಿದ್ದರು. ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಅಜಿತ್​ ನಡುವಿನವರಾಗಿದ್ದಾರೆ. ಅಜಿತ್​ ಕಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಅಪಾರ ಖ್ಯಾತಿ ಗಳಿಸಿದ್ದು, ಇನ್ನಿಬ್ಬರು ಮಕ್ಕಳು ಅನುಪ್​ ಕುಮಾರ್​ ಮತ್ತು ಅನಿಲ್​ ಕುಮಾರ್​ ಉದ್ಯಮ ಕ್ಷೇತ್ರದಲ್ಲಿದ್ದಾರೆ.

ಇದನ್ನೂ ಓದಿ: ಜೂಮೆ ಜೋ ಪಠಾಣ್​​ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ.. ವಿಡಿಯೋ ಮೆಚ್ಚಿದ ಎಸ್​ಆರ್​ಕೆ

ಅಜಿತ್​ ಸಿನಿಮಾ ಬದುಕು: ವಿಘ್ನೇಶ್​ ಶಿವನ್​ ನಿರ್ದೇಶನದಲ್ಲಿ ಅಜಿತ್​ ಕುಮಾರ್​ ಹೀರೋ ಆಗಿ ಸಿನಿಮಾ ಮಾಡಲು ಪ್ಲಾನ್​ ಮಾಡಲಾಗಿತ್ತು. ಆದರೆ ಚಿತ್ರದ ಶೂಟಿಂಗ್​ ಅರ್ಧದಲ್ಲೇ ನಿಂತು ಹೋಗಿತ್ತು. ಇದೀಗ ಈ ಸಿನಿಮಾವನ್ನು ವಿಘ್ನೇಶ್​ ಶಿವನ್​ ಬದಲಿಗೆ 'ಕಳಗ ತಲೈವನ್' ನಿರ್ದೇಶಕ ತಿರುಮೇನಿ ಜೊತೆ ಮಾಡಲಾಗುತ್ತಿದೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್​ ನಿರ್ಮಿಸಲಿದೆ.​

ಇದನ್ನೂ ಓದಿ: ಕಾಶ್ಮೀರದ ಕೊರೆಯುವ ಚಳಿಯಲ್ಲಿ 'ಲಿಯೋ' ಶೂಟಿಂಗ್: ಸಿಬ್ಬಂದಿ ಶ್ರಮಕ್ಕೆ ನಿರ್ಮಾಪಕರಿಂದ ವಿಶೇಷ ಧನ್ಯವಾದ

ಮಕ್ಕಳಿಂದ ಹೃದಯಸ್ಪರ್ಶಿ ಪೋಸ್ಟ್​: ಈ ಮಧ್ಯೆ ಅಜಿತ್​ ಅವರ ಸಹೋದರರಾದ ಅನುಪ್​ ಕುಮಾರ್​ ಮತ್ತು ಅನಿಲ್​ ಕುಮಾರ್​ ತಮ್ಮ ತಂದೆಯ ನಿಧನದ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್​ ಅನ್ನು ಬಿಡುಗಡೆ ಮಾಡಿದ್ದಾರೆ. "ನಮ್ಮ ತಂದೆ ಬಿ.ಎಸ್​.ಮಣಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಎಲ್ಲಾ ವೈದ್ಯರಿಗೂ ನಾವು ಋಣಿಯಾಗಿದ್ದೇವೆ. ಈ ದುಃಖದ ಸಮಯದಲ್ಲಿ ನಮಗೆ ಸಾಂತ್ವನ ಹೇಳಲು ಅನೇಕ ಜನರು ಫೋನ್​ ಮತ್ತು ಮೆಸೇಜ್​ ಮಾಡುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಅವರ ಅಂತಿಮ ವಿಧಿ ವಿಧಾನಗಳನ್ನು ಖಾಸಗಿಯಾಗಿ ನೆರವೇಸಲು ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ" ಎಂಬುದಾಗಿ ಬರೆದಿದ್ದಾರೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್ ನಿರ್ದೇಶಕ ಪ್ರದೀಪ್​ ಸರ್ಕಾರ್ (68) ನಿಧನ

Last Updated : Mar 24, 2023, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.