ETV Bharat / entertainment

ಕಮಲ್​ ಹಾಸನ್​ ಜೊತೆ ನಟಿಸಿದ್ದ ಹಾಸ್ಯ ನಟ ಬೀದಿಯಲ್ಲಿ ಶವವಾಗಿ ಪತ್ತೆ! - ನಟನ ಮೃತದೇಹ ಬೀದಿಯಲ್ಲಿ ಪತ್ತೆ

ಕಾಲಿವುಡ್​ ಹಿರಿಯ ನಟ ಕಮಲ್ ಹಾಸನ್ ಜೊತೆ ನಟಿಸಿದ್ದ ಪೋಷಕ ನಟ ಮೋಹನ್ ಅವರು ಶವವಾಗಿ ಪತ್ತೆಯಾಗಿದ್ದಾರೆ.

Tamil actor Mohan found dead  Tamil actor Mohan found dead under mysterious  Mohan found dead in Madurai  ಹಾಸ್ಯ ನಟ ಬೀದಿಯಲ್ಲಿ ಶವವಾಗಿ ಪತ್ತೆ  ಕಮಲ್​ ಹಾಸನ್​ ಜೊತೆ ನಟಿಸಿದ್ದ ಹಾಸ್ಯ ನಟ  ಕಾಲಿವುಡ್​ ಹಿರಿಯ ನಟ ಕಮಲ್ ಹಾಸನ್  ಕಮಲ್ ಹಾಸನ್ ಜೊತೆ ನಟಿಸಿದ್ದ ಪೋಷಕ ನಟ ಮೋಹನ್  ನಟ ಮೋಹನ್ ಅವರು ಶವವಾಗಿ ಪತ್ತೆ  ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದ ತಮಿಳು ನಟ  ತಮಿಳು ನಟ ಮೋಹನ್ ಅವರು ನಿಧನ  ನಟನ ಮೃತದೇಹ ಬೀದಿಯಲ್ಲಿ ಪತ್ತೆ  ಸೇಲಂ ಜಿಲ್ಲೆಯ ಮೆಟ್ಟೂರು
ಕಮಲ್​ ಹಾಸನ್​ ಜೊತೆ ನಟಿಸಿದ್ದ ಹಾಸ್ಯ ನಟ ಬೀದಿಯಲ್ಲಿ ಶವವಾಗಿ ಪತ್ತೆ!
author img

By

Published : Aug 5, 2023, 7:06 AM IST

ಮಧುರೈ, ತಮಿಳುನಾಡು: ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದ ತಮಿಳು ನಟ ಮೋಹನ್ ಅವರು ನಿಧನರಾಗಿದ್ದು, ನಟನ ಮೃತದೇಹ ಬೀದಿಯಲ್ಲಿ ಪತ್ತೆಯಾಗಿದೆ. 60 ವರ್ಷದ ಮೋಹನ್ ಅವರು ಸೇಲಂ ಜಿಲ್ಲೆಯ ಮೆಟ್ಟೂರು ಮೂಲದವರಾಗಿದ್ದು, ಅವರ ಮೃತ ದೇಹ ಮಧುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿದೆ. ಮೋಹನ್​ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಕೆಲಸ ಮಾಡಿದ್ದರು.

ಪೋಷಕ ಮತ್ತು ಹಾಸ್ಯ ನಟ ಮೋಹನ್ ಅವರು ತಮಿಳು ಚಿತ್ರರಂಗದಲ್ಲಿ ಗಮನಾರ್ಹ ನಟ. ಅವರು ಆಗಾಗ್ಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು ಮತ್ತು ಅವರ ಕುಬ್ಜ ಪಾತ್ರಕ್ಕೆ ಹೆಸರುವಾಸಿಯಾಗಿದ್ದರು. ಕಮಲ್ ಹಾಸನ್ ಅಭಿನಯದ ‘ಅಪೂರ್ವ ಸಹೋದರ್ಗಲ್’​ ಚಿತ್ರದಲ್ಲಿ ಮೋಹನ್​ ಅವರು ಗೆಳೆಯರ ಪಾತ್ರದಲ್ಲಿ ಒಬ್ಬರಾಗಿ ನಟಿಸಿದ್ದರು. ಈ ಚಿತ್ರ ಅವರಿಗೆ ಖ್ಯಾತಿ ತಂದು ಕೊಟ್ಟಿತ್ತು.

ನಾನ್ ಗೋಡ, ಮಿರಾಕ್ಯುಲಸ್ ಪೀಪಲ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಮೃತ ಪೋಷಕ ನಟ ಮೋಹನ್‌ ತನ್ನ ಮನೆಯಿಂದ ಹೊರಬಂದ ನಂತರ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಅವರಿಗೆ ಯಾವುದೇ ಸಿನಿಮಾಗಳಲ್ಲಿ ಅವಕಾಶಗಳು ಸಿಗದ ಕಾರಣ ಬಡತನದಿಂದಾಗಿ ತಿರುಪರಂಗುನ್ರಂನ ಪೆರಿಯಾ ರಥ ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದರು ಎನ್ನಲಾಗ್ತಿದೆ.

ಜುಲೈ 31ರಂದು ತಿರುಪರಂಗುನ್ರಂನ ಪೆರಿಯಾ ರಥ ಬೀದಿಯಲ್ಲಿ ಪೋಷಕ ನಟ ಮೋಹನ್ ಅವರ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇದಾದ ನಂತರ ತಿರುಪರಂಗುನ್ರಂ ಪೊಲೀಸ್ ಇಲಾಖೆ ಮೋಹನ್ ಮೃತದೇಹವನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಬಳಿಕ ಮೃತ ಪೋಷಕ ನಟ ಮೋಹನ್ ಅವರ ಪಾರ್ಥಿವ ಶರೀರವನ್ನು ಉಚಿತ ಆಂಬ್ಯುಲೆನ್ಸ್​ನಲ್ಲಿ ಮೋಹನ್ ಅವರ ಹುಟ್ಟೂರು ಸೇಲಂ ಪಕ್ಕದಲ್ಲಿರುವ ಮೆಟ್ಟೂರಿಗೆ ಕಳುಹಿಸಲು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿತ್ತು. ಮೋಹನ್ ಅವರು ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ಕಮಲ್ ಹಾಸನ್ ಸೇರಿದಂತೆ ನಾನಾ ನಾಯಕ ನಟರ ಜೊತೆ ಸಿನಿಮಾದಲ್ಲಿ ನಟಿಸಿದ್ದ ಪೋಷಕ ನಟನೊಬ್ಬ ಇಂತಹ ಬಡತನದಿಂದ ಬೀದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕ್ಷೇತ್ರದ ಜನರಲ್ಲಿ ಬೇಸರ ಮೂಡಿಸಿದೆ. ಮೋಹನ್​ ಅವರು ಮತ್ತೊಂದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ 'ನಾನ್ ಕಡವುಲ್' ನಲ್ಲಿ ನಟಿಸಿದ್ದಾರೆ, ಇದರಲ್ಲಿ ಆರ್ಯ ಮತ್ತು ಪೂಜಾ ಕೂಡ ಅಭಿನಯಿಸಿದ್ದಾರೆ.

ಓದಿ: ಮುಂಜಾನೆ 3ರವರೆಗೂ ನಟ ಮೈಲಿಸ್ವಾಮಿ ನನ್ನೊಂದಿಗಿದ್ದರು: ನಂತರ ಇನ್ನಿಲ್ಲ ಎಂಬ ಸುದ್ದಿ ಬಂತು: ಡ್ರಮ್ಸ್ ಶಿವಮಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.