ETV Bharat / entertainment

ಪರಸ್ಪರ ಪ್ರೀತಿ ವ್ಯಕ್ತಪಡಿಸಿದ ತಮನ್ನಾ ಭಾಟಿಯಾ-ವಿಜಯ್​ ವರ್ಮಾ: ವಿಡಿಯೋ ನೋಡಿ - Tamannaah Vijay video from Jaane Jaan

Tamannaah Bhatia Vijay Varma Video: 'ಜಾನೆ ಜಾನ್​'ನ ವಿಶೇಷ ಪ್ರದರ್ಶನದಲ್ಲಿ ತಾರಾ ಜೋಡಿ ತಮನ್ನಾ ಭಾಟಿಯಾ ಹಾಗು ವಿಜಯ್​ ವರ್ಮಾ ಗಮನ ಸೆಳೆದರು.

Tamannaah Bhatia Vijay Varma
ವಿಜಯ್​ ವರ್ಮಾ ತಮನ್ನಾ ಭಾಟಿಯಾ
author img

By ETV Bharat Karnataka Team

Published : Sep 19, 2023, 12:22 PM IST

Updated : Sep 19, 2023, 3:20 PM IST

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಹಾಗು ನಟ ವಿಜಯ್​ ವರ್ಮಾ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾದ ಹೆಸರೇ 'ಜಾನೆ ಜಾನ್​' (Jaane Jaan). ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ತೆರಕಾಣಲು ಸಜ್ಜಾಗಿದೆ. ಸೆಪ್ಟೆಂಬರ್​ 21 ರಂದು ರಿಲೀಸ್​ ಆಗಲಿರುವ 'ಜಾನೆ ಜಾನ್​'ನ ವಿಶೇಷ ಪ್ರದರ್ಶನವನ್ನು ನಿನ್ನೆ (ಸೋಮವಾರ) ಹಮ್ಮಿಕೊಳ್ಳಲಾಗಿತ್ತು. ನೋರಾ ಫತೇಹಿ, ಕಾರ್ತಿಕ್​ ಆರ್ಯನ್​​, ಅರ್ಜುನ್​ ಕಪೂರ್​​ ಸೇರಿದಂತೆ ಹಲವರು ಈವೆಂಟ್​ನಲ್ಲಿ ಕಾಣಿಸಿಕೊಂಡರು. ವಿಜಯ್​ ವರ್ಮಾ ಅವರನ್ನು ಹುರಿದುಂಬಿಸಲು ಗೆಳತಿ, ನಟಿ ತಮನ್ನಾ ಭಾಟಿಯಾ ಕೂಡ ಆಗಮಿಸಿದ್ದರು.

ಜಾನೆ ಜಾನ್ ಸ್ಪೆಷಲ್​ ಸ್ಕ್ರೀನಿಂಗ್ ಈವೆಂಟ್​ನ ವಿಡಿಯೋಗಳನ್ನು ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನ್​ಲೈನ್​ನಲ್ಲಿ ಸದ್ದು ಮಾಡುತ್ತಿರುವ ವಿಡಿಯೋಗಳಲ್ಲಿ ತಮನ್ನಾ ಭಾಟಿಯಾ ಹಾಗು ವಿಜಯ್​ ವರ್ಮಾ ಕೈ ಕೈ ಹಿಡಿದು ನಡೆಯುತ್ತಿರುವುದನ್ನು ಕಾಣಬಹುದು. ಪಾಪರಾಜಿಗಳ ಕ್ಯಾಮರಾಗಳಿಗೂ ಒಟ್ಟಿಗೆ ಪೋಸ್ ನೀಡಿದ್ದಾರೆ. ಲವ್​ ಬರ್ಡ್ಸ್​ ತಮ್ಮ ಅದ್ಭುತ ಕೆಮಿಸ್ಟ್ರಿ ಇಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈವೆಂಟ್​ಗಾಗಿ ನಟ ವಿಜಯ್​ ವರ್ಮಾ ಅವರು ಬ್ಲ್ಯಾಕ್​ ಟೀ ಶರ್ಟ್, ಬ್ರೌನ್​ ಪ್ರಿಂಟೆಡ್​​ ಸೂಟ್​ ಆಯ್ದುಕೊಂಡಿದ್ದರು. ಮತ್ತೊಂದೆಡೆ, ನೇವಿ ಬ್ಲ್ಯೂ ಒನ್​ ಪೀಸ್​ ಡೆನಿಮ್​ ಡ್ರೆಸ್​ನಲ್ಲಿ ತಮನ್ನಾ ಭಾಟಿಯಾ ಮುದ್ದಾಗಿ ಕಾಣಿಸಿಕೊಂಡರು.

ಇದನ್ನೂ ಓದಿ: ತೆರೆಕಂಡು 12 ದಿನ, ಉತ್ತಮ ಪ್ರದರ್ಶನ ಮುಂದುವರಿಸಿದ 'ಜವಾನ್': ಕಲೆಕ್ಷನ್​ ಎಷ್ಟು ಗೊತ್ತೇ?

ಸುಜೋಯ್​ ಘೋಷ್​​ ಆ್ಯಕ್ಷನ್​ ಕಟ್​ ಹೇಳಿರುವ ಜಾನೆ ಜಾನ್​, ಜಪಾನೀಸ್​ ಕಾದಂಬರಿ 'ಡಿವೋಶನ್​ ಆಫ್​ ಸಸ್ಪೆಕ್ಟ್​​ ಎಕ್ಸ್​' ಆಧರಿಸಿದೆ. ಮಿಸ್ಟರಿ ಥ್ರಿಲ್ಲರ್​ ಸಿನಿಮಾವನ್ನು ಕಲಿಂಪಾಂಗ್​ನಲ್ಲಿ ಚಿತ್ರೀಕರಿಸಲಾಗಿದೆ. ಮಾಯಾ ಡಿಸೋಜಾ ಪಾತ್ರವನ್ನು ಕರೀನಾ ಕಪೂರ್​ ಖಾನ್​ ನಿರ್ವಹಿಸಿದ್ದಾರೆ. ಮಗಳ ರಕ್ಷಣೆಗೆ ತಾಯಿ ಹೋರಾಟ ನಡೆಸುವ ಕಥೆಯನ್ನು ಚಿತ್ರ ಹೊಂದಿದೆ. ಜೈದೀಪ್​ ಅಹ್ಲಾವತ್​​ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಜಾನೆ ಜಾನ್​ ಸೆಪ್ಟೆಂಬರ್​ 21 ರಂದು ನೆಟ್​ಫ್ಲಿಕ್ಸ್​​​ನಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಪರಿಣಿತಿ-ರಾಘವ್​ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ!

ಜಾನ್​​ ಜಾನ್​ ಹೊರತುಪಡಿಸಿ, ವಿಜಯ್​ ವರ್ಮಾ ಅವರು ಅಫ್ಘಾನಿ ಸ್ನೋ ಹಾಗೂ ಮರ್ಡರ್​ ಮುಬಾರಕ್​​ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಗೆಳತಿ ತಮನ್ನಾ ಭಾಟಿಯಾ ಜೊತೆ ಕೊನೆಯ ಚಿತ್ರ ಲಸ್ಟ್ ಸ್ಟೋರಿಸ್​ 2 ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದ ಶೂಟಿಂಗ್​​ ಸೆಟ್‌ನಲ್ಲಿ ಪರಸ್ಪರ ಭೇಟಿಯಾಗಿ ಇದೀಗ ಪ್ರೀತಿಯಲ್ಲಿದ್ದಾರೆ.​​ 2023ರ ನ್ಯೂ ಇಯರ್​ ಪಾರ್ಟಿ ವೇಳೆ ಈ ಜೋಡಿಯ ಚುಂಬನದ ವಿಡಿಯೋ ವೈರಲ್​ ಆಗಿ ಸಖತ್​ ಸದ್ದು ಮಾಡಿತು. ಬಳಿಕ ಡೇಟಿಂಗ್​ ವದಂತಿ ಪ್ರಾರಂಭವಾಯಿತು. ಇದೀಗ ಲವ್​ ಬರ್ಡ್ಸ್​​ಗಳಾಗಿ ಗುರುತಿಸಿಕೊಂಡಿದ್ದಾರೆ.

Last Updated : Sep 19, 2023, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.