ETV Bharat / entertainment

ತಮನ್ನಾ ಭಾಟಿಯಾ ಬಗ್ಗೆ ನಿಮಗೆಷ್ಟು ಗೊತ್ತು? ಇಂಟ್ರೆಸ್ಟಿಂಗ್​​ ವಿಚಾರಗಳನ್ನು ಹಂಚಿಕೊಂಡ ನಟಿ - ತಮನ್ನಾ ಭಾಟಿಯಾ ಆಸ್ಕ್ ಅವೇ

Tamannaah Bhatia 'Asks Away' session: ಇನ್​ಸ್ಟಾಗ್ರಾಮ್​ನಲ್ಲಿ 'Asks Away' ಸೆಷನ್ ನಡೆಸಿದ ನಟಿ ತಮನ್ನಾ ಭಾಟಿಯಾ ಕೆಲ ಇಂಟ್ರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Tamannaah Bhatia
ನಟಿ ತಮನ್ನಾ ಭಾಟಿಯಾ
author img

By ETV Bharat Karnataka Team

Published : Nov 8, 2023, 3:53 PM IST

ತಮನ್ನಾ ಭಾಟಿಯಾ ಸದಾ ಸಖತ್​ ಸುದ್ದಿಯಲ್ಲಿರುವ ಬಹುಭಾಷಾ ನಟಿ. ಸಿನಿಮಾ ಸಾಧನೆ ಜೊತೆ ಜೊತೆಗೆ ಅದ್ಭುತ ಸೌಂದರ್ಯದ ಸಲುವಾಗಿ ಯಾವಾಗಲೂ ಜನರ ಚರ್ಚೆಯ ವಿಷಯವಾಗಿ ಉಳಿದು ಬಿಡುತ್ತಾರೆ. ಈ ನಟಿಮಣಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳಿಗಾಗಿ ಅತಿ ಹೆಚ್ಚು ಆಕರ್ಷಣೀಯ ಫೋಟೋಗಳನ್ನು ಹಂಚಿಕೊಳ್ಳುವ ಅಭಿನೇತ್ರಿ, ಆಗಾಗ್ಗೆ ಅವರೊಟ್ಟಿಗೆ ಸಂವಾದ ಕೂಡ ನಡೆಸುತ್ತಾರೆ.

Tamannaah Bhatia Instagram stories
ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿಸ್

ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ: ಮಂಗಳವಾರದಂದು ನಟಿ ತಮನ್ನಾ ಭಾಟಿಯಾ ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಭಿಮಾನಿಗಳನ್ನು ವರ್ಚುಯಲ್​ ವೇದಿಕೆಯಲ್ಲಿ ಭೇಟಿ ಮಾಡಲು ಹಾಲ್ಗೆನ್ನೆ ಚೆಲುವೆ 'Asks Away' ಸೆಷನ್ ನಡೆಸಿದರು. ಅಭಿಮಾನಿಗಳ ಬಹುತೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೈಲರ್ ನಟಿ ತಮ್ಮ ಇನ್​​ಸ್ಟಾಗ್ರಾಂ​ ಸ್ಟೋರಿಸ್​ನಲ್ಲಿ, ಕೆಲ ವಿಶೇಷ ಪ್ರಶ್ನೋತ್ತರಗಳನ್ನು ಹಂಚಿಕೊಂಡಿದ್ದಾರೆ.

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಭಕ್ಷ್ಯಗಳನ್ನು ಇಷ್ಟ ಪಡುತ್ತಾರೆ. ಕೆಲ ತಿಂಗಳ ಹಿಂದೆ ಬಾಳೆ ಎಲೆಯ ಮೇಲೆ ರುಚಿಕರವಾಗಿ ಕಾಣುವ ಆಹಾರದ ಫೋಟೋವನ್ನು ಹಂಚಿಕೊಂಡಿದ್ದರು. ಇದು ತಾವು ಸೇವಿಸಿದ ಅತ್ಯಂತ ರುಚಿಕರ ಆಹಾರ ಎಂದು ಹೇಳಿದ್ದರು. ಆಸ್ಕ್​​ ಅವೇ ಸೆಷನ್​ನಲ್ಲಿ ಅಭಿಮಾನಿಯೊಬ್ಬರು ನಟಿ ಬಳಿ ನಿಮ್ಮ 'ಕಂಫರ್ಟ್​​ ಫುಡ್' ಯಾವುದೆಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ, 'ಖಿಚಡಿ, ಸಬ್ಜಿ ಮತ್ತು ಉಪ್ಪಿನಕಾಯಿ' ಎಂದು ತಿಳಿಸಿದ್ದಾರೆ.

Tamannaah Bhatia Instagram stories
ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿಸ್

ಅಭಿಮಾನಿಯೊಬ್ಬರು ಚೆನ್ನೈಗೆ ಯಾವಾಗ ಬರುತ್ತೀರ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ತಮನ್ನಾ, 'ಶೀಘ್ರದಲ್ಲೇ ಅಲ್ಲಿಗೆ ಬರಲು ಹೆಚ್ಚು ಕಾಯಲು ಸಾಧ್ಯವಿಲ್ಲ' ಎಂದಿದ್ದಾರೆ. 'ನೀವು ನಮ್ಮೆಲ್ಲರನ್ನು ಯಾವಾಗ ಭೇಟಿಯಾಗುತ್ತೀರಿ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಮಿಲ್ಕಿ ಬ್ಯೂಟಿ, ನಾನು ದೀಪಾವಳಿ ಪಾರ್ಟಿ ಯೋಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Tamannaah Bhatia Instagram stories
ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿಸ್

ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್‌ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಸೇನ್​: ವಿಡಿಯೋ ವೈರಲ್

ಈ ಸೆಷನ್​ನಲ್ಲಿ ತಮನ್ನಾ ಭಾಟಿಯಾ ತಮ್ಮ ಮೆಚ್ಚಿನ ಹಾಡು, ಮೆಚ್ಚಿನ ಸ್ಥಳ, ಮುಂದಿನ ತಮಿಳು ಚಿತ್ರ, ತಮ್ಮ ಮೆಚ್ಚಿನ ಸಿನಿಮಾ, ತಾವು ಬಳಸುವ ಸ್ಕಿನ್​​ ಕೇರ್ ಪ್ರೊಡಕ್ಟ್ಸ್, ಮೆಚ್ಚಿನ ಬೀಚ್ ಫೋಟೋ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕೆಲವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ ಶೇರ್ ಮಾಡಿದ್ದಾರೆ. ನೀವೀಗಲೇ ನಟಿಯ ಇನ್​ಸ್ಟಾಗ್ರಾಮ್​​​ ಸ್ಟೋರಿಗೆ ಭೇಟಿ ಕೊಟ್ಟರೆ ಇವೆಲ್ಲವನ್ನೂ ನೋಡಬಹುದು. ಇನ್ನೇನು ಕೆಲ ಹೊತ್ತಲ್ಲಿ ಈ ಸ್ಟೋರಿಗಳು ಡಿಲೀಟ್​ ಆಗಲಿವೆ.

Tamannaah Bhatia Instagram stories
ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿಸ್

ಇದನ್ನೂ ಓದಿ: ಡೀಪ್​​ಫೇಕ್ ಕಂಟೆಂಟ್​ ವಿರುದ್ಧ ಕ್ರಮ: ​ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ರಶ್ಮಿಕಾ ಮಂದಣ್ಣ

ನಟಿ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಅಭಿಮಾನಿಯೊಬ್ಬರು ಮುಂದಿನ ಸಿನಿಮಾ ಬಗ್ಗೆ ಪ್ರಶ್ನೆ ಎತ್ತಿದಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ. ತಮನ್ನಾ ಅವರ ಮುಂದಿನ ಚಿತ್ರ 'ಬಾಂದ್ರಾ'. ಇದೇ ನವೆಂಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇನ್ನೂ ನಟಿಯ ಮೆಚ್ಚಿನ ಸ್ಥಳ ಅವರ ಮನೆ ಅಂತೆ. ಈ ಸೆಷನ್​ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತಮನ್ನಾ ಭಾಟಿಯಾ ಅವರ ಮೇಲೆ ಪ್ರೀತಿಯ ಧಾರೆಯೆರೆಯಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.