ETV Bharat / entertainment

ತಮನ್ನಾ ಭಾಟಿಯಾ ಡೇಟಿಂಗ್​​ ವದಂತಿ: 'ವಿಜಯ್ ವರ್ಮಾ ಅದೃಷ್ಟವಂತರು' ಎಂದ ಅಭಿಮಾನಿಗಳು - Tamanna bhatia

ಬಾಂದ್ರಾದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Tamanna vijay dating
ತಮನ್ನಾ ವಿಜಯ್ ಡೇಟಿಂಗ್​
author img

By

Published : Jun 3, 2023, 3:14 PM IST

ದಕ್ಷಿಣ ಚಿತ್ರರಂಗದ ಸುಂದರ ನಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್​ನ ನಟ ವಿಜಯ್ ವರ್ಮಾ ಅವರ ಪ್ರೀತಿ ವಿಚಾರ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸದ್ದು ಮಾಡುತ್ತಿದೆ. ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಅಭಿಮಾನಿಗಳು ಸಹ ಈ ಜೋಡಿ ಮದುವೆ ಬಗ್ಗೆ ಉತ್ಸಾಹ ತೋರುತ್ತಿದ್ದಾರೆ.

ತಮನ್ನಾ ಮತ್ತು ವಿಜಯ್ ಸಂಬಂಧದ ಚರ್ಚೆ ಚಿತ್ರರಂಗದಲ್ಲಿ ಜೋರಾಗಿದೆ. ಆದ್ರೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಖಚಿತಪಡಿಸಿಲ್ಲ. 2023ರ ಹೊಸ ವರ್ಷಾಚರಣೆ ವೇಳೆ ಪರಸ್ಪರ ಚುಂಬಿಸಿದ ವಿಡಿಯೋ ವೈರಲ್​ ಆಗಿ ಡೇಟಿಂಗ್​ ವದಂತಿ ಹುಟ್ಟಿಕೊಂಡಿದೆ. ಕಳೆದ ಆರು ತಿಂಗಳಿನಿಂದ ಈ ಜೋಡಿ ಬಗ್ಗೆ ಗುಸುಗುಸು ಇದ್ದು ತಮ್ಮ ಸಂಬಂಧದ ಬಗ್ಗೆ ಮೌನ ವಹಿಸಿದ್ದಾರೆ. ಆದ್ರೆ ಆಗಾಗ್ಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಪಾಪರಾಜಿಗಳ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಾರೆ.

ಸದ್ಯ ಬಾಂದ್ರಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮ್ಯಾಚಿಂಗ್ ಡ್ರೆಸ್​ ತೊಟ್ಟು ಗಮನ ಸೆಳೆದಿದ್ದಾರೆ. ರೂಮರ್​ ಲವ್​​ ಬರ್ಡ್ಸ್​ನ ಈ ಲುಕ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಪ್ರೀತಿ ಬಗ್ಗೆ ಅಧಿಕೃತ ಮಾಹಿತಿ ಕೊಡಿ, ಮದುವೆ ಯಾವಾಗ ಎಂಬ ರೀತಿ ಕಾಮೆಂಟ್​ ಮಾಡುತ್ತಿದ್ದಾರೆ.

ತಮನ್ನಾ ಮತ್ತು ವಿಜಯ್ ಅವರ ಈ ಹೊಸ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ಜೋಡಿ ಮೇಲೆ ಸಾಕಷ್ಟು ಪ್ರೀತಿಯನ್ನು ಹರಿಸುತ್ತಿದ್ದಾರೆ. ವಿಜಯ್ ನೀವು ತುಂಬಾ ಅದೃಷ್ಟವಂತರು ಎಂದು ಒಬ್ಬರು ಬರೆದಿದ್ದಾರೆ. ನಿಮ್ಮಿಬ್ಬರ ಜೋಡಿ ಸುರಕ್ಷಿತವಾಗಿರಲಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಅದೃಷ್ಟವಿದ್ದರೆ ವಿಜಯ್ ವರ್ಮಾ ಅವರ ಹಾಗೆ ಇರಬೇಕು ಎಂದಿದ್ದಾರೆ.

ಇತ್ತೀಚೆಗೆ ನಡೆದ ಕೇನ್ಸ್ ಫಿಲ್ಮ್ ಫೆಸ್ಟಿವಲ್ 2023ಕ್ಕೆ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಕೂಡ ಹೋಗಿದ್ದರು. ಆದರೂ ಜೋಡಿ ಒಟ್ಟಿಗೆ ಇರುವ ಯಾವುದೇ ಫೋಟೋ ಹೊರಬಿದ್ದಿರಲಿಲ್ಲ. ಅಭಿಮಾನಿಗಳು ಈ ಜೋಡಿಯ ಚಿತ್ರಗಳಿಗಾಗಿ ಕಾಯುತ್ತಿದ್ದರು.

ವಿಜಯ್ ಮತ್ತು ತಮನ್ನಾ ಗೋವಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಚುಂಬಿಸಿರುವ ವಿಡಿಯೋ ವೈರಲ್​ ಆಗಿತ್ತು. ಅಲ್ಲಿಂದ ಈ ಜೋಡಿಯ ಪ್ರೇಮಕಥೆ ಮುನ್ನೆಲೆಗೆ ಬಂತು. ಅಂದಿನಿಂದ ಹಲವು ಬಾರಿ ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ವಿಕ್ಕಿ, ಸಾರಾ ನಟನೆಯ 'ಜರಾ ಹಟ್ಕೆ ಜರಾ ಬಚ್ಕೆ' ಓಟ ಆರಂಭ: ಮೊದಲ ದಿನದ ಸಂಪಾದನೆ ಇಷ್ಟು!

ಕೆಲ ಸಮಯದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ತಮನ್ನಾ ಭಾಟಿಯಾ, ನಾನು ಮತ್ತು ವಿಜಯ್​ ಅವರು ಒಟ್ಟಿಗೆ ಚಿತ್ರದಲ್ಲಿ ನಟಿಸಿದ್ದೇವೆ. ವದಂತಿಗಳು ಬರುವುದು ಸಹಜ. ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದೇವೆ, ವದಂತಿಗಳನ್ನು ನಿರಾಕರಿಸುವಲ್ಲಿ ನಾವು ಸಮಯ ವ್ಯರ್ಥ ಮಾಡುವುದಿಲ್ಲ. ಹಲವರೊಂದಿಗೆ ತನ್ನ ವಿವಾಹದ ವರದಿಗಳನ್ನು ನೋಡಿದ್ದೆ. ನನ್ನ ಮದುವೆ ವಿಚಾರದಲ್ಲಿ ಜನರು ಏಕೆ ಆಸಕ್ತಿ ವಹಿಸುತ್ತಾರೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದರು.

ಇದನ್ನೂ ಓದಿ: ಭೂಮಿ ಮೇಲಿನ ಸ್ವರ್ಗ 'ಮಾಲ್ಡೀವ್ಸ್​​' ಕಡಲ ತೀರದಲ್ಲಿ ರಾಕುಲ್ ಪ್ರೀತ್ ಸಿಂಗ್ : ಬಿಕಿನಿ ತೊಟ್ಟು ಬಿಸಿಯೇರಿಸಿದ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.