ಮುಂಬೈ: ನಟಿ ತಾಪ್ಸಿ ಪನ್ನು ಅಭಿನಯದ ಥ್ರಿಲ್ಲರ್ ಸಿನಿಮಾ ದೋಬಾರಾ"ದ ಟ್ರೈಲರ್ ಮತ್ತು ಅವರ ಫಸ್ಟ್ ಲುಕ್ ಬುಧವಾರ ಬಿಡುಗಡೆಗೊಂಡಿದೆ. ತಾಪ್ಸಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಟ್ರೈಲರ್ ಹಂಚಿಕೊಂಡಿದ್ದಾರೆ. "ವಕ್ತ್ ಕೊ ಥೋಡಾ ವಕ್ತ್ ದೋ, ವೋ ಸಬ್ ಬದಲ್ ದೇಗಾ. ಸಬ್ ಕುಚ್. ಈ ಸಾರಿ ಎಲ್ಲ ಬದಲಾಗಲಿದೆ ಎಂದು ನಟಿ ಬರೆದುಕೊಂಡಿದ್ದಾರೆ.
ನಿಹಿತ್ ಭಾವೆ ಈ ಸಿನಿಮಾ ಕಥೆಗಾರರಾಗಿದ್ದು, ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ರಾಹುಲ್ ಭಟ್, ಶಾಶ್ವತ ಚಟರ್ಜಿ, ವಿದುಷಿ ಮೆಹ್ರಾ, ಸುಕಾಂತ್ ಗೋಯೆಲ್, ನಾಸರ್, ನಿಧಿ ಸಿಂಗ್ ಮತ್ತು ಮಧುರಿಮಾ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ, ತಾಪ್ಸಿ ಅವರ ಪತಿ ಮತ್ತು ಅವರ ಮಗಳು ಹೊಸ ಮನೆಗೆ ಹೋಗುತ್ತಿರುವುದನ್ನು ತೋರಿಸಲಾಗಿದೆ.
- " class="align-text-top noRightClick twitterSection" data="">
ಇದಾದ ಕೆಲವೇ ದಿನಗಳಲ್ಲಿ, 26 ವರ್ಷಗಳ ಹಿಂದೆ ಗುಡುಗು ಸಹಿತ ಮಳೆಯ ಸಮಯದಲ್ಲಿ ಪಕ್ಕದ ಮನೆಯಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬಕ್ಕೆ ತಿಳಿಯುತ್ತದೆ. ತಾಪ್ಸಿ ನಂತರ ಅದೇ ಚಿಕ್ಕ ಹುಡುಗನೊಂದಿಗೆ ಮಾತನಾಡುವುದನ್ನು ನಾವು ಟ್ರೈಲರ್‌ನಲ್ಲಿ ಕಾಣಬಹುದು. 2 ನಿಮಿಷ 12 ಸೆಕೆಂಡ್‌ಗಳ ಟ್ರೈಲರ್‌ನಲ್ಲಿ 2 ಗಂಟೆ 12 ನಿಮಿಷಗಳ "ದೋಬಾರಾ" ಸಿನಿಮಾದ ಒಳಾರ್ಥವನ್ನು ಪ್ರತಿಬಿಂಬಿಸಿದ್ದಾರೆ. "ದೋಬಾರಾ" ಕಲ್ಟ್ ಮೂವೀಸ್ ಅವರ ಮೊದಲ ಪ್ರಾಜೆಕ್ಟ್ ಆಗಿದೆ.
ಇದನ್ನೂ ಓದಿ: ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಬಿಡುಗಡೆ: ಕಿಚ್ಚ ಸುದೀಪ್ ಹೇಳಿದ್ದೇನು?
2018 ರಲ್ಲಿ ಬಿಡುಗಡೆಯಾದ ಸ್ಪ್ಯಾನಿಷ್ ಥ್ರಿಲ್ಲರ್ "ಮಿರಾಜ್" ಸಿನಿಮಾದ ಹಿಂದಿ ಅನುವಾದ ಈ ಸಿನಿಮಾವಾಗಿದೆ. ಮನ್ಮಾರ್ಜಿಯಾನ್ ಸಿನಿಮಾ ನಂತರ, ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಈ ಯೋಜನೆಗಾಗಿ ಮತ್ತೆ ಒಂದಾಗಿದ್ದಾರೆ. "ದೋಬಾರಾ" ಆಗಸ್ಟ್ 12 ರಂದು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ನಲ್ಲಿ ಪದಾರ್ಪಣೆ ಮಾಡಲಿದೆ. ಈ ಸಿನಿಮಾವು ಆಗಸ್ಟ್ 19 ರಂದು ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.