ETV Bharat / entertainment

'ಸಿನಿಮಾದಲ್ಲಿ ಕಂಟೆಂಟ್ ಅಲ್ಲ, ಹೀರೋ ಕಿಂಗ್: ತಾಪ್ಸಿ ಪನ್ನು - Taapsee Pannu

Taapsee Pannu: ಚಿತ್ರರಂಗದ ಕುರಿತು ನಟಿ ತಾಪ್ಸಿ ಪನ್ನು ಮಾತನಾಡಿದ್ದಾರೆ.

Taapsee Pannu
ತಾಪ್ಸಿ ಪನ್ನು
author img

By ETV Bharat Karnataka Team

Published : Oct 13, 2023, 5:09 PM IST

ತಾಪ್ಸಿ ಪನ್ನು ಭಾರತೀಯ ಚಿತ್ರರಂಗದ ಪ್ರಮುಖ ನಟಿಯರಲ್ಲೋರ್ವರು. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಇವರು ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿ. ಇವರ ನಿರ್ಮಾಣದ ಎರಡನೇ ಚಿತ್ರ 'ಧಕ್ ಧಕ್' ಇಂದು ತೆರೆಕಂಡಿದೆ. "ಕಂಟೆಂಟ್ ಈಸ್ ಕಿಂಗ್" ಎಂಬ ಚಿತ್ರರಂಗದ ನಂಬಿಕೆಯ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ-ನಿರ್ಮಾಪಕಿ ತಾಪ್ಸಿ ಪನ್ನು, ''ಸಿನಿಮಾ ಇಂಡಸ್ಟ್ರಿಯಲ್ಲಿರುವವರ ಪೈಕಿ ಹೆಚ್ಚಿನವರು ಕಥೆಯ ಸಾರವನ್ನು ಅರ್ಥಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಸಿನಿಮಾದ "ನಾಯಕ ಯಾರು" ಎಂಬುದನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸುತ್ತಾರೆ. ಈ ಸ್ಟಾರ್ ಪವರ್ ಸಾಮಾನ್ಯವಾಗಿ ಚಿತ್ರದ ಪ್ರಮಾಣವನ್ನು ನಿರ್ಧರಿಸುತ್ತದೆ. ಆದ್ರೆ ನನ್ನ ವೃತ್ತಿಜೀವನದಲ್ಲಿ ಸಿನಿಮಾಗೆ ಒಪ್ಪಿಗೆ​ ಕೊಡುವ ಸಂದರ್ಭದಲ್ಲಿ ತನ್ನ ಸಹ ನಟರು ಅಥವಾ ನಿರ್ಮಾಣ ಸಂಸ್ಥೆಗೆ ಎಂದಿಗೂ ಆದ್ಯತೆ ನೀಡಲಿಲ್ಲ. ಹೊಸಬರೊಂದಿಗೆ ಕೆಲಸ ಮಾಡಿದ್ದೇನೆ'' ಎಂದು ತಿಳಿಸಿದರು. ಸ್ಟಾರ್ ಸಿಸ್ಟಮ್​ ಸಣ್ಣ ಸಿನಿಮಾಗಳು ಮತ್ತು ಅರ್ಥಪೂರ್ಣ ಸಿನಿಮಾಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

"ಕಂಟೆಂಟ್ ಈಸ್ ಕಿಂಗ್" ಎಂದು ಜನ (ಉದ್ಯಮದವರು, ಪ್ರೇಕ್ಷಕರು) ಹೇಳುತ್ತಾರೆಂಬ ನನ್ನ ನಂಬಿಕೆ ಈ ಸಿನಿಮಾ ಮಾಡುವಾಗ ಛಿದ್ರವಾಯಿತು. ತಪ್ಪು ನಂಬಿಕೆಗಳು ಬಹಳ ಇವೆ. ನಿಮ್ಮ ಒನ್​ ಲೈನ್​ ಸ್ಟೋರಿ ಕೇಳುತ್ತಾರೆ, ಬಳಿಕ ಚಿತ್ರದಲ್ಲಿ ನಾಯಕ ಯಾರು ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ಉತ್ತರ, ಆ ಪ್ರಾಜೆಕ್ಟ್‌ನಲ್ಲಿ ಅವರ ಆರ್ಥಿಕ ಮತ್ತು ಭಾವನಾತ್ಮಕ ಹೂಡಿಕೆ ಪ್ರಮಾಣವನ್ನು ನಿರ್ಧರಿಸುತ್ತದೆ. ಓರ್ವ ನಟಿಯಾಗಿ, ನಾನು ಸಿನಿಮಾಗೆ ಸಹಿ ಹಾಕುವಾಗ ನನ್ನ ಸಹ ನಟ ಯಾರು ಅಥವಾ ನಿರ್ಮಾಪಕರು ಎಷ್ಟು ದೊಡ್ಡವರು ಎಂಬುದರ ಬಗ್ಗೆ ಎಂದಿಗೂ ಕೇಳಲಿಲ್ಲ. ನಾನು ಚೊಚ್ಚಲ ನಿರ್ದೇಶಕರು ಮತ್ತು ಹೊಸ ಸಹ ನಟರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇತರರು (ಚಿತ್ರರಂಗದವರು) ಕೂಡ ಹಾಗೇ ನೋಡುವುದಿಲ್ಲ" - ತಾಪ್ಸಿ ಪನ್ನು.

ತಾಪ್ಸಿ ಪನ್ನು ಹೇಳುವಂತೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯವಾದರೂ ಸಹ "ಸ್ಟಾರ್ ಸಿಸ್ಟಮ್" ಬಾಲಿವುಡ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ನಟರು, ಸ್ಟುಡಿಯೋಗಳು ಮತ್ತು ಪ್ರೇಕ್ಷಕರು ಸೇರಿದಂತೆ ಎಲ್ಲರೂ ಈ ಸಂಸ್ಕೃತಿಯ ಭಾಗವಾಗುತ್ತಿದ್ದಾರೆ. ಇದು ಸೂಪರ್​ ಸ್ಟಾರ್​ಗಳನ್ನು ಬೆಂಬಲಿಸುತ್ತದೆ. ಈಗಾಗಲೇ ತಮ್ಮ ಸ್ಥಾನ ಭದ್ರಪಡಿಸಿಕೊಂಡ ನಟರು ಮತ್ತು ಹೊಸಬರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 'ದೇಶ ರಕ್ಷಿಸಲು ಶತ್ರುವನ್ನು ಕೊಲ್ಲುವುದೇ ಸೈನಿಕನ ಕರ್ತವ್ಯ': ಸ್ಯಾಮ್ ಬಹದ್ದೂರ್' ಟೀಸರ್ ಔಟ್‌ ನೋಡಿ

"ಈ ಸಂಸ್ಕೃತಿಯಲ್ಲಿ ಒಳಗೊಂಡಿರುವ ಪ್ರತಿಯೊಬ್ಬರನ್ನೂ ದೂಷಿಸಬೇಕು. ಇದರಲ್ಲಿ ನಟರು, ಸ್ಟುಡಿಯೋಗಳು, ಪ್ರೇಕ್ಷಕರು ಸೇರಿದಂತೆ ಎಲ್ಲರೂ ಸೇರಿದ್ದಾರೆ. ಇದೊಂದು ಸರ್ಕಲ್. ಹೊಸಬರ ಅಥವಾ ಸಣ್ಣ ಚಿತ್ರಗಳ ಮೇಲಿನ ಕಡಿಮೆ ಆಸಕ್ತಿ ಅವರ ಬೆಳವಣಿಗೆಗೆ ಅತ್ಯಂತ ಕಡಿಮೆ ಅವಕಾಶ ನೀಡುತ್ತದೆ'' ಎನ್ನುತ್ತಾರೆ ತಾಪ್ಸಿ ಪನ್ನು.

ಇದನ್ನೂ ಓದಿ: ಪೂಜಾ ಹೆಗ್ಡೆ ಜನ್ಮದಿನ: ಬಹುಭಾಷಾ ನಟಿಯ ಅತ್ಯಾಕರ್ಷಕ ಫೋಟೋಗಳಿಲ್ಲಿವೆ ನೋಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.