ETV Bharat / entertainment

ಮಾಜಿ ಬಾಯ್‌ಫ್ರೆಂಡ್‌ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಸೇನ್​: ವಿಡಿಯೋ ವೈರಲ್ - Sushmita Sen lover

Sushmita Sen with Rohman Shawl: ಸುಶ್ಮಿತಾ ಸೇನ್ ಅವರು ಮಾಜಿ ಪ್ರಿಯತಮ ರೋಹ್ಮನ್ ಶಾಲ್ ಜೊತೆ ಆತ್ಮೀಯವಾಗಿ ಫೋಟೋಗೆ ಪೋಸ್‌ ನೀಡಿ, ಕುತೂಹಲ ಕೆರಳಿಸಿದ್ದಾರೆ.

Sushmita Sen with Rohman Shawl
ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಸೇನ್
author img

By ETV Bharat Karnataka Team

Published : Nov 8, 2023, 12:19 PM IST

Updated : Nov 8, 2023, 12:30 PM IST

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರು ಮಾಜಿ ಪ್ರಿಯತಮ ರೋಹ್ಮನ್ ಶಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಸಮಾರಂಭವೊಂದರಲ್ಲಿ ಒಟ್ಟಿಗಿರುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಹೊಸ ಚರ್ಚೆಗೆ ಆಹಾರವಾಗಿದ್ದಾರೆ.

ಸುಶ್ಮಿತಾ ಸೇನ್​​​ ನೀಡಿದ ಮಾಹಿತಿಯಂತೆ, ಇಬ್ಬರೂ 2021ರಲ್ಲಿ ಬೇರ್ಪಟ್ಟಿದ್ದರು. ಆದರೆ ಸ್ನೇಹಿತರಾಗಿ ಮುಂದುವರೆದಿದ್ದರು. ಇತ್ತೀಚಿಗೆ ಮುಂಬೈನಲ್ಲಿ ಹಲವು ಬಾರಿ ಜೊತೆಯಾಗಿದ್ದ ಫೋಟೋ, ವಿಡಿಯೋಗಳು ಲಭ್ಯವಾಗಿವೆ. ಇದೀಗ ದೀಪಾವಳಿ ಪಾರ್ಟಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದಾಗುತ್ತಿದೆ.

ಬಾಲಿವುಡ್​ ಗಣ್ಯರು ಸಹೋದ್ಯೋಗಿಗಳಿಗಾಗಿ ದೀಪಾವಳಿ ಸಂತೋಷ ಕೂಟ ಆಯೋಜಿಸುವ ಪದ್ಧತಿ ಇದೆ. ಬಾಲಿವುಡ್​ ತಾರೆಯರು ಸಾಕ್ಷಿಯಾಗಿದ್ದ ಇಂಥದ್ದೊಂದು ಕಾರ್ಯಕ್ರಮದಲ್ಲಿ ಸುಶ್ಮಿತಾ ಸೇನ್ ಹಾಗೂ ರೋಹ್ಮನ್ ಶಾಲ್ ಆತ್ಮೀಯವಾಗಿ ಕಂಡುಬಂದರು.

ಪಾಪರಾಜಿಗಳು ಇನ್​ಸ್ಟಾಗ್ರಾಮ್​​ನಲ್ಲಿ ಪ್ರಕಟಿಸಿರುವ ವಿಡಿಯೋವೊಂದರಲ್ಲಿ, ಸುಶ್ಮಿತಾ ಸೇನ್ ಅವರು ರೋಹ್ಮನ್ ಶಾಲ್ ಜೊತೆ ದೀಪಾವಳಿ ಪಾರ್ಟಿಗೆ ಪ್ರವೇಶಿಸುತ್ತಿರುವ ದೃಶ್ಯವಿದೆ. ಪಿಂಕ್​ ಬಾರ್ಡರ್​​ ಇರುವ ಬ್ಲ್ಯಾಕ್​​​ ಸೀರೆಯಲ್ಲಿ ನಟಿ ಸುಂದರವಾಗಿ ಕಾಣುತ್ತಿದ್ದರು. ಕಡಿಮೆ ಪ್ರಮಾಣದ ಮೇಕ್ಅಪ್, ಒಂದು ನೆಕ್ಲೇಸ್​ನಲ್ಲಿ ಮೋಹಕವಾಗಿ ಕಂಡರು.

ರೋಹ್ಮನ್ ಶಾಲ್​​ ಗ್ರೀನ್​​​ ಜಾಕೆಟ್, ವೈಟ್​​ ಕುರ್ತಾ ಸೆಟ್ ಧರಿಸಿದ್ದರು. ಈ ಜೋಡಿ ಪಾಪರಾಜಿಗಳ ಕ್ಯಾಮರಾಗೆ ಪೋಸ್ ಕೊಟ್ಟರು. ರೋಹ್ಮನ್ ಸುಶ್ಮಿತಾರ ಕೈ ಹಿಡಿದು ನಡೆಯಲು ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರೋಹ್ಮನ್ ಜೊತೆ ನಗುಮೊಗದಲ್ಲೇ ಪಾಪರಾಜಿಗಳನ್ನು ಎದುರುಗೊಂಡ ಸುಶ್ಮಿತಾ, ಪ್ಯಾಚಪ್​​ ವದಂತಿಗಳನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ!.

ಪಾಪರಾಜಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ಇಬ್ಬರೂ ಬಹಳ ಆತ್ಮೀಯವಾಗಿದ್ದರು. ಇಬ್ಬರ ಮೊಗವೂ ನಗುವಿನಿಂದ ಹೊಳೆಯುತ್ತಿತ್ತು. ಬಳಿಕ ಸುಶ್ಮಿತಾ ಅವರು ಏಕಾಂಗಿಯಾಗಿ ಕ್ಯಾಮರಾಗಳಿಗೆ ಪೋಸ್ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ಮಾಜಿ ವಿಶ್ವ ಸುಂದರಿ ಹಾಗೂ ನಟ-ಮಾಡೆಲ್ ಜೋಡಿಯ ವಿಡಿಯೋ ವೈರಲ್​ ಆಗುತ್ತಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿ: ಒಂದೇ ಫ್ರೇಮ್​ನಲ್ಲಿ ಸೆರೆಯಾದ ಸೂರ್ಯ- ಅಮೀರ್​ ಖಾನ್​​

ಇತ್ತೀಚಿನ ದಿನಗಳಲ್ಲಿ ಫ್ಯಾಮಿಲಿ ಗ್ಯಾದರಿಂಗ್ಸ್​ನಲ್ಲಿ ಆಗಾಗ್ಗೆ ರೋಹ್ಮನ್‌ ಜೊತೆ ಸುಶ್ಮಿತಾ ಇದ್ದರು. ನಟಿ ಈ ವರ್ಷಾರಂಭದಲ್ಲಿ ತಮಗೆ ಹೃದಯಾಘಾತ ಸಂಭವಿಸಿದ್ದ ವಿಚಾರವನ್ನು ಬಹಿರಂಗಪಡಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ, ಮಾರ್ಚ್‌ನಲ್ಲಿ ನಡೆದ ಫ್ಯಾಷನ್ ಈವೆಂಟ್​ ಒಂದರಲ್ಲಿ ನಟಿಯೊಂದಿಗೆ ರೋಹ್ಮನ್​​ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್' ಟ್ರೇಲರ್ ಬಿಡುಗಡೆ​ ಸಮಾರಂಭದಲ್ಲಿ ಭೂಸೇನಾ ಮುಖ್ಯಸ್ಥ ಜ.ಮನೋಜ್ ಪಾಂಡೆ ಭಾಗಿ- ವಿಡಿಯೋ

2021ರ ಡಿಸೆಂಬರ್​ನಲ್ಲಿ ಸುಶ್ಮಿತಾ ಮಾಡೆಲ್‌ನೊಂದಿಗಿನ ತನ್ನ ಮೂರು ವರ್ಷಗಳ ಸ್ನೇಹ ಸಂಬಂಧಕ್ಕೆ ವಿರಾಮ ಘೋಷಿಸಿದ್ದರು. 2023ರ ಅಂತ್ಯದ ಸಂದರ್ಭದಲ್ಲಿ ಇಬ್ಬರ ಪ್ಯಾಚಪ್​ ವದಂತಿಗಳು ಹರಡಿದ್ದವು. ಇದೀಗ ಆನ್​ಲೈನ್​ನಲ್ಲಿ ಸದ್ದಾಗುತ್ತಿರುವ ಹೊಸ ವಿಡಿಯೋ ಅಂಥ ವದಂತಿಗಳಗೆ ಹೊಸ ಟ್ವಿಸ್ಟ್‌ ಕೊಟ್ಟಿದೆ.

Last Updated : Nov 8, 2023, 12:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.