ETV Bharat / entertainment

ಹೃದಯಾಘಾತದಿಂದ ಚೇತರಿಕೆ: ಎಲ್‌ಎಫ್‌ಡಬ್ಲ್ಯೂ 2023ರಲ್ಲಿ ಸುಶ್ಮಿತಾ ಸೇನ್ ಭಾಗಿ - ಸುಶ್ಮಿತಾ ಸೇನ್ ಲೇಟೆಸ್ಟ್ ನ್ಯೂಸ್

'ಎಲ್‌ಎಫ್‌ಡಬ್ಲ್ಯೂ 2023'ರಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಭಾಗಿಯಾಗಿ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.

Sushmita Sen at LFW 2023
ಎಲ್‌ಎಫ್‌ಡಬ್ಲ್ಯೂ 2023ರಲ್ಲಿ ಸುಶ್ಮಿತಾ ಸೇನ್
author img

By

Published : Mar 11, 2023, 7:22 PM IST

ಬಾಲಿವುಡ್ ದಿವಾ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಸ್ಟೈಲ್​ ಸ್ಟೇಜ್​ಗೆ ಮರಳಿದ್ದಾರೆ. ಇತ್ತೀಚೆಗೆ ಹೃದಯಾಘಾತ ಎದುರಿಸಿದ ಬಳಿಕ ನಟಿ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಫ್ಯಾಷನ್ ಗಾಲಾದಲ್ಲಿ ತಮ್ಮ ಸಿಗ್ನೇಚರ್ ಸ್ಟೈಲ್​ನೊಂದಿಗೆ ಹೆಜ್ಜೆ ಹಾಕಿದರು.

ಇಂದು ಬಾಲಿವುಡ್​ ನಟಿ ಸುಶ್ಮಿತಾ ಸೇನ್​​ ಎಲ್‌ಎಫ್‌ಡಬ್ಲ್ಯೂ 2023 (ಲ್ಯಾಕ್ಮೆ ಫ್ಯಾಶನ್ ವೀಕ್‌)ರಲ್ಲಿ ಭಾಗಿಯಾದರು. ಅನುಶ್ರೀ ರೆಡ್ಡಿ ಅವರ ಕಾರ್ಯಕ್ರಮದಲ್ಲಿ ಗ್ರೀನ್​ ಲೆಹೆಂಗಾ ತೊಟ್ಟು ಮಿಂಚು ಹರಿಸಿದರು. ಈ ಫ್ಯಾಶನ್ ಸಂಭ್ರಮದಲ್ಲಿ ರ‍್ಯಾಂಪ್ ವಾಕ್ ಮಾಡುವಾಗ ಎಂದಿನಂತೆ ಬಹಳ ಸುಂದರವಾಗಿ ಕಾಣಿಸಿಕೊಂಡರು. ನಸೀಬೋ ಲಾಲ್ ಮತ್ತು ಅಬಿದಾ ಪರ್ವೀನ್‌ ಅವರ ತು ಜೂಮ್ ಹಾಡಿಗೆ ನಟಿ ಮೈಕುಣಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಹಿಂತಿರುಗುವಾಗ ಸುಶ್ಮಿತಾ ಸೇನ್​​ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಸೇರಿಕೊಂಡರು. ಅನುಶ್ರೀ ರೆಡ್ಡಿ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿದ ಸುಶ್ಮಿತಾ ಅವರು ಅತ್ಯುತ್ತಮ ಸಂಗ್ರಹಗಳನ್ನು ಒಟ್ಟುಗೂಡಿಸುವುದಕ್ಕಾಗಿ ಹೈದರಾಬಾದ್ ಮೂಲದ ವಿನ್ಯಾಸಕರನ್ನು ಶ್ಲಾಘಿಸಿದರು.

ಇನ್ನೂ ಈ ಲಾಕ್ಮೆ ಫ್ಯಾಶನ್ ವೀಕ್​ನಲ್ಲಿ ನಟಿ ಜಾನ್ವಿ ಕಪೂರ್ ಅವರ ಸಂಬಂಧಿ ಮೋಹಿತ್​ ಮರ್ವಾ ಪತ್ನಿ ಅಂತರಾ ಮೋತಿವಾಲಾ ಕೂಡ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ತುಂಬು ಗರ್ಭಿಯಾಗಿರುವ ಅಂತರಾ ಮೋತಿವಾಲಾ ಅವರು ತಮ್ಮ ಬೇಬಿ ಬಂಪ್​ ಪ್ರದರ್ಶಿಸಿ ಆತ್ಮವಿಶ್ವಾಸದಿಂದ ರ‍್ಯಾಂಪ್​ ವಾಕ್ ಮಾಡಿದರು. ಈವೆಂಟ್​ನ ಫೋಟೋಗಳನ್ನು ನಟಿ ಜಾನ್ವಿ ಕಪೂರ್ ಹಂಚಿಕೊಂಡು ತಮ್ಮ ಸಂಬಂಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಲನ್ನಾ ಮದುವೆ ಸಂಭ್ರಮ: ಶ್ವೇತ ವರ್ಣದ ಉಡುಗೆಯಲ್ಲಿ ಕಂಗೊಳಿಸಿದ ಸಂಬಂಧಿ ಅನನ್ಯಾ ಪಾಂಡೆ

ಈ ತಿಂಗಳ ಆರಂಭದಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತ ಆಗಿತ್ತು. ಈ ವಿಚಾರವನ್ನು ಎರಡು ದಿನಗಳ ಬಳಿಕ ಬಹಿರಂಗಪಡಿಸಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಆಶ್ಚರ್ಯಕ್ಕೊಳಗಾಗಿದ್ದರು. ಯಾರೂ ಚಿಂತಿಸುವ ಅಗತ್ಯವಿಲ್ಲ. ಸದ್ಯ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: 'ಚೇತರಿಸಿಕೊಳ್ಳುತ್ತಿದ್ದೇನೆ, ಯಾವುದೇ ತೊಂದರೆ ಇಲ್ಲ': ಅಭಿಮಾನಿಗಳ ಆತಂಕ ದೂರ ಮಾಡಿದ ಸುಶ್ಮಿತಾ ಸೇನ್

ಅಭಿಮಾನಿಗಳು ಆತಂಕದಲ್ಲಿ ಇರುವ ಬಗ್ಗೆ ಅರಿತ ನಟಿ ಸುಶ್ಮಿತಾ ಸೇನ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಲೈವ್​ಗೆ ಬಂದು, ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ತಮಗೆ ಬಹಳಷ್ಟು ಪ್ರೀತಿ ವ್ಯಕ್ತಪಡಿಸಿದ, ತಮ್ಮ ಚೇತರಿಕೆಗೆ ಹಾರೈಸಿದ, ಪ್ರಾರ್ಥನೆ ಮಾಡಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದರು. ಜೊತೆಗೆ ಕಠಿಣ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಿದ ವೈದ್ಯರ ತಂಡಕ್ಕೂ ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿದ್ದು ವೈದ್ಯರ ಸಲಹೆ ಪಡೆದು ಶೀರ್ಘದಲ್ಲೇ ತಮ್ಮ ಮುಂದಿನ ಆರ್ಯ 3 ಶೂಟಿಂಗ್​​ ಸೆಟ್‌ಗೆ ಮರಳುತ್ತೇನೆಂದು ತಿಳಿಸಿದ್ದರು. ಇದೀಗ ಲ್ಯಾಕ್ಮೆ ಫ್ಯಾಶನ್ ವೀಕ್‌ 2023ರಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.