ETV Bharat / entertainment

'ಚೇತರಿಸಿಕೊಳ್ಳುತ್ತಿದ್ದೇನೆ, ಯಾವುದೇ ತೊಂದರೆ ಇಲ್ಲ': ಅಭಿಮಾನಿಗಳ ಆತಂಕ ದೂರ ಮಾಡಿದ ಸುಶ್ಮಿತಾ ಸೇನ್ - ಸುಶ್ಮಿತಾ ಸೇನ್ ಆರೋಗ್ಯ

ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಸಾಮಾಜಿಕ ಜಾಲತಾಣದಲ್ಲಿ ಲೈವ್​ಗೆ ಬಂದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Sushmita Sen
ಸುಶ್ಮಿತಾ ಸೇನ್
author img

By

Published : Mar 4, 2023, 5:32 PM IST

ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್

ಹೃದಯಾಘಾತ ಸಂಭವಿಸಿದ್ದರ ಬಗ್ಗೆ ಕಳೆದೆರಡು ದಿನಗಳ ಹಿಂದೆ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹೇಳಿಕೊಂಡಿದ್ದರು. ಎರಡು ದಿನಗಳ ಹಿಂದೆ ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಈ ವಿಚಾರ ಬಹಿರಂಗಪಡಿಸಿದ್ದರು. ಸದ್ಯ ಚೇತರಿಸಿಕೊಂಡಿರುವುದಾಗಿಯೂ ತಿಳಿಸಿದ್ದರು. ಆದರೆ ಅಭಿಮಾನಿಗಳು ಚಿಂತೆಯಲ್ಲಿರುವುದನ್ನರಿತ ನಟಿ ಸುಶ್ಮಿತಾ ಸೇನ್ ಸಾಮಾಜಿಕ ಮಾಧ್ಯಮದಲ್ಲಿ ಲೈವ್​ಗೆ ಬಂದು, ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳುತ್ತೇನೆ: ಲೈವ್​ ವಿಡಿಯೋದಲ್ಲಿ ನಟಿ ಸುಶ್ಮಿತಾ ಸೇನ್, ತಮಗೆ ಪ್ರೀತಿ ವ್ಯಕ್ತಪಡಿಸಿದ, ತಮ್ಮ ಚೇತರಿಕೆಗೆ ಹಾರೈಸಿದ, ಪ್ರಾರ್ಥಿಸಿದ ಅಭಿಮಾನಿಗಳು ಮತ್ತು ಫಾಲೋವರ್​​ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಿದ ವೈದ್ಯರ ತಂಡಕ್ಕೆ ಧನ್ಯವಾದ ಅರ್ಪಿಸಿದರು. ಸದ್ಯ ಚೇತರಿಸಿಕೊಳ್ಳುತ್ತಿದ್ದು ವೈದ್ಯರ ಸಲಹೆ ಪಡೆದು ಶೀರ್ಘದಲ್ಲೇ ಆರ್ಯ 3 ಶೂಟಿಂಗ್​​ ಸೆಟ್‌ಗೆ ಮರಳುತ್ತೇನೆಂದು ತಿಳಿಸಿದ್ದಾರೆ.

ಆರೋಗ್ಯಕರ ಜೀವನಶೈಲಿ ನೆರವಾಯಿತು: ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಫಿಟ್ನೆಸ್ ಹೆಸರು ವಾಸಿ. 47ರ ಹರೆಯದ ನಟಿ ದೈಹಿಕ ತರಬೇತಿಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ, ಆರೋಗ್ಯಕರ ಜೀವನಕ್ಕೆ ಅಭಿಮಾನಿಗಳನ್ನು ಪ್ರೇರೇಪಿಸುತ್ತಾರೆ. ಸುಶ್ಮಿತಾ ಸೇನ್ ಹೃದಯಾಘಾತದಿಂದ ಬಳಲಿದ ಸುದ್ದಿ ಹೊರ ಬಂದ ಕೂಡಲೇ ಸಾಮಾಜಿಕ ಮಾಧ್ಯಮದ ಒಂದು ಗುಂಪು, ಜಿಮ್, ವ್ಯಾಯಾಮ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಸುಶ್ಮಿತಾ ಸೇನ್ ತಮ್ಮ ಲೈವ್ ಸೆಷನ್‌ನಲ್ಲಿ ಆರೋಗ್ಯಕರ ಜೀವನಶೈಲಿಯು ಅನಾರೋಗ್ಯದಿಂದ ಹೊರಬರಲು ಸಹಾಯ ಮಾಡಿತು. ಎಂದು ಹೇಳಿದರು. ಆರೋಗ್ಯಕರ ಜೀವನಶೈಲಿ ನನಗೆ ಎರಡು ಬಾರಿ ನೆರವಾಗಿದೆ ಎಂದು ತಿಳಿಸಿದರು.

ನಟಿ ಸುಶ್ಮಿತಾ ಸೇನ್ ಅವರು ಚಲನಚಿತ್ರ ನಿರ್ಮಾಪಕ, ನಿರ್ದೇಶಕರಾಗಿರುವ ರಾಮ್ ಮಾಧವಾನಿ ಮತ್ತು ಅವರ ಪತ್ನಿ ಅಮಿತಾ ಮಾಧವಾನಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಠಿಣ ಸಮಯದಲ್ಲಿ ಸಾಧ್ಯವಾದಷ್ಟು ಉತ್ತಮ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಮತ್ತು ತಮ್ಮ ಗೌಪ್ಯತೆ ಕಾಪಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ರಾಜಸ್ಥಾನದ ಆರ್ಯ 3 ಸೆಟ್‌ಗೆ ಮರಳುವುದಾಗಿ ನಟಿ ಭರವಸೆ ನೀಡಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಪಠಾಣ್​ ನಟಿ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸುರಿಮಳೆ: ಕಾರಣವೇನು?

ಫೆ. 2ರಂದು ನಟಿ ಸುಶ್ಮಿತಾ ಸೇನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಸ್ತೃತವಾಗಿ ಬರೆದು ಮಾಹಿತಿ ಹಂಚಿಕೊಂಡಿದ್ದರು. ''ನನಗೆ ಎರಡು ದಿನಗಳ ಹಿಂದೆ ಹೃದಯಾಘಾತ ಸಂಭವಿಸಿತ್ತು. ವೈದ್ಯ ತಂಡದ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸ್ಟೆಂಟ್ಸ್ ಸಹ​ ಅಳವಡಿಸಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹೃದಯಾಘಾತ ಸಂಭವಿಸಿದ ಕೂಡಲೇ ವೈದ್ಯಕೀಯ ನೆರವು ಸಿಕ್ಕಿತು. ಆರೋಗ್ಯ ಸ್ಥಿರವಾಗಿದೆ'' ಎಂದು ಸುಶ್ಮಿತಾ ಸೇನ್​ ತಿಳಿಸಿದ್ದರು.

ಇದನ್ನೂ ಓದಿ: ಮಾಜಿ ವಿಶ್ವ ಸುಂದರಿಗೆ ಹೃದಯಾಘಾತ.. ಎರಡು ದಿನಗಳ ಬಳಿಕ ಬಹಿರಂಗಪಡಿಸಿದ ನಟಿ ಸುಶ್ಮಿತಾ ಸೇನ್

ಇತ್ತೀಚೆಗೆ ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಅವರೊಂದಿಗೆ ಡೇಟಿಂಗ್​ ಮಾಡುತ್ತಿರುವುದಾಗಿ ಸುಶ್ಮಿತಾ ಸೇನೆ ತಿಳಿಸಿ ಸಂಚಲನ ಸೃಷ್ಟಿಸಿದ್ದರು. ಅದಕ್ಕೂ ಮುನ್ನ ರೋಹ್ಮನ್​ ಶಾಲ್​, ವಿಕ್ರಮ್​ ಭಟ್​, ರಣದೀಪ್ ಹೂಡಾ, ಮುದ್ದಿಸ್ಸಿರ್​ ಅಜೀಜ್, ವಾಸಿಂ ಅಕ್ರಮ್​, ಮಾನವ್ ಮೆನನ್ ಸೇರಿದಂತೆ ಹಲವರರೊಂದಿಗೆ ಡೇಟಿಂಗ್​ ಮಾಡುತ್ತಿದ್ದರೆಂದು ಹೇಳಲಾಗಿತ್ತು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.