ETV Bharat / entertainment

38 ಭಾಷೆಗಳಲ್ಲಿ ತೆರೆ ಕಾಣಲಿದೆ ಸೂರ್ಯ ನಟನೆಯ 'ಕಂಗುವ' ಸಿನಿಮಾ - ಈಟಿವಿ ಭಾರತ ಕನ್ನಡ

Kanguva movie update: ಸೂರ್ಯ ನಟನೆಯ 'ಕಂಗುವ' ಸಿನಿಮಾ 38 ಭಾಷೆಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

Surya starrer Kanguva movie will be released in 38 languages
38 ಭಾಷೆಗಳಲ್ಲಿ ತೆರೆ ಕಾಣಲಿದೆ ಸೂರ್ಯ ನಟನೆಯ 'ಕಂಗುವ' ಸಿನಿಮಾ
author img

By ETV Bharat Karnataka Team

Published : Nov 21, 2023, 1:12 PM IST

ತಮಿಳು ಚಿತ್ರರಂಗದ ಸ್ಟಾರ್​ ನಟ ಸೂರ್ಯ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಕಂಗುವ'. ಶಿವ ನಿರ್ದೇಶನದ ಈ ಚಿತ್ರ ಅದ್ಧೂರಿ ಬಜೆಟ್​ನಲ್ಲಿ ತಯಾರಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್​ ಲುಕ್​ ಪೋಸ್ಟರ್​ ಹಾಗೂ ಗ್ಲಿಂಪ್ಸ್​ ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಪಿರಿಯಾಡಿಕಲ್​ ಡ್ರಾಮಾವಾಗಿ ಸಿದ್ಧಗೊಳ್ಳುತ್ತಿರುವ ಸಿನಿಮಾದ ಶೂಟಿಂಗ್​ ಶರವೇಗದಲ್ಲಿ ಪೂರ್ಣಗೊಳ್ಳುತ್ತಿದೆ. ಈ ಮಧ್ಯೆ ಚಿತ್ರತಂಡದಿಂದ ಹೊಸ ಅಪ್​ಡೇಟ್​ ಹೊರಬಿದ್ದಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

'ಕಂಗುವ' ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಜಂಟಿಯಾಗಿ ಬಿಗ್​​ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದೆ. ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಿರ್ಮಾಪಕ ಜ್ಞಾನವೇಲ್​ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, "ಕಂಗುವ ಸಿನಿಮಾ ಸದ್ಯ ಮೇಕಿಂಗ್​ ಹಂತದಲ್ಲಿದೆ. ಬಿಡುಗಡೆಗೆ ಅದ್ಧೂರಿ ಪ್ಲಾನ್​ ಮಾಡುತ್ತಿದ್ದೇವೆ. 38 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ತೆರೆಗೆ ತರಲಿದ್ದೇವೆ. ಐಮ್ಯಾಕ್ಸ್​ ಮತ್ತು 3ಡಿ ಆವೃತ್ತಿಗಳಲ್ಲೂ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಈ ಸಿನಿಮಾ ತಮಿಳು ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಲಿವುಡ್​ ನಟ ಸೂರ್ಯ 43ನೇ ಸಿನಿಮಾ ಘೋಷಣೆ; ಮತ್ತೆ ಒಂದಾದ 'ಸೂರರೈ ಪೋಟ್ರು' ತಂಡ

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಗ್ಲಿಂಪ್ಸ್​ ಕುತೂಹಲ ಮೂಡಿಸಿದೆ. ಈವರೆಗೆ ನಿರ್ವಹಿಸಿರದ ಪಾತ್ರದಲ್ಲಿ ನಾಯಕ ನಟ ಸೂರ್ಯ ಅಭಿನಯಿಸಿದ್ದಾರೆ. ಕಂಗುವ ಎಂದರೆ ಅಗ್ನಿಯ ಶಕ್ತಿಯುಳ್ಳವ ಎಂದರ್ಥ. ಪರಾಕ್ರಮಿ ಎಂತಲೂ ಕರೆಯುತ್ತಾರೆ. ಗ್ಲಿಂಪ್ಸ್​ನಲ್ಲಿ ಸೂರ್ಯ ವಿಭಿನ್ನ, ಬಲಾಢ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದು ಚಿತ್ರದ ಹೈಲೈಟ್. ಸೂರ್ಯ ಅವರ ಅದ್ಭುತ ಹಾವಭಾವ​, ಸಹಸ್ರಾರು ಜನರಿರುವ ಸೈನ್ಯ ಒಟ್ಟಾಗಿ ಬೆಂಕಿಯ ಬಾಣಗಳನ್ನು ಬಿಡುವುದು, ಕೊನೆಗೆ ಸೂರ್ಯ ಅಬ್ಬರಿಸುವುದು ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದೆ.

ಸಿನಿಮಾ ಬಿಗ್​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಅದ್ಧೂರಿ ಸಾಹಸ ದೃಶ್ಯಗಳು ಹಾಗೂ ವಿಶುವಲ್ ಎಫೆಕ್ಟ್ಸ್​ ಚಿತ್ರದ ಪ್ರಮುಖ ಆಕರ್ಷಣೆ. ಮುಂದಿನ ವರ್ಷ ಅದ್ಧೂರಿಯಾಗಿ 38 ಭಾಷೆಗಳಲ್ಲಿ ತೆರೆಕಾಣಲಿದೆ. ಸೂರ್ಯ ಅವರ ಸಿನಿ ಕೆರಿಯರ್‌ನಲ್ಲಿ ಇದೊಂದು ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ನಟ ಆರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗುವ 3 ಭಾಗಗಳಲ್ಲಿ ಮೂಡಿ ಬರಲಿದೆ. ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಬಾಬಿ ಡಿಯೋಲ್​ ಖಳನಾಯಕನ ಪಾತ್ರ ಮಾಡಲಿದ್ದಾರೆ. ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ಅವರಿಂದ ಅಭಿನಯ ಮಾಡಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.

ಇದನ್ನೂ ಓದಿ: ಜಸ್ಟ್​ ಗ್ಲಿಂಪ್ಸ್​ ವಿಡಿಯೋದಲ್ಲೇ ದಾಖಲೆ ಬರೆದ 'ಸೂರ್ಯ 43' ಸಿನಿಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.