ETV Bharat / entertainment

ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್​ ಫಿಕ್ಸ್​​ - ಕಂಗುವ ಸಿನಿಮಾ

ಸೌತ್ ಸೂಪರ್​ ಸ್ಟಾರ್ ಸೂರ್ಯ ಅವರ ಮುಂಬರುವ ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಂಡಿದೆ.

Kanguva  film
ಕಂಗುವಾ ಸಿನಿಮಾ
author img

By

Published : Apr 16, 2023, 1:33 PM IST

ಸಿರುತೈ ಶಿವ ಆ್ಯಕ್ಷನ್​ ಕಟ್​ ಹೇಳುತ್ತಿರುವ, ಸೌತ್ ಸೂಪರ್​ ಸ್ಟಾರ್ ಸೂರ್ಯ ಅವರ ಮುಂಬರುವ ಚಿತ್ರದ ಟೈಟಲ್​ ಅನಾವರಣಗೊಂಡಿದೆ. ಚಿತ್ರ ನಿರ್ಮಾಪಕರು ಇಂದು ಸಿನಿಮಾದ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ ತಾತ್ಕಾಲಿಕವಾಗಿ 'ಸೂರ್ಯ 42' ಎಂದು ಹೆಸರಿಸಲಾದ ಚಿತ್ರಕ್ಕೆ ಇಂದೀಗ ಕಂಗುವ (Kanguva) ಎಂಬ ಶೀರ್ಷಿಕೆ ಫೈನಲ್​ ಮಾಡಲಾಗಿದೆ. ಮುಂದಿನ ವರ್ಷದ (2024) ಆರಂಭದಲ್ಲಿ ಈ ಬಹು ನಿರೀಕ್ಷಿತ ಫ್ಯಾಂಟಸಿ ಆ್ಯಕ್ಷನ್ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಚಿತ್ರ ತಯಾರಕರು ಹೊಂದಿದ್ದಾರೆ.

ಕಂಗುವ ಟೈಟಲ್ ಟೀಸರ್ ಅನ್ನು ಯುವಿ ಕ್ರಿಯೇಷನ್ಸ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಚಿತ್ರದ ಬಗ್ಗೆ ಸ್ವಲ್ಪ ಸುಳಿವು ನೀಡುತ್ತಾ, ಚಿತ್ರ ನಿರ್ಮಾಪಕರು ಇನ್‌ಸ್ಟಾಗ್ರಾಮ್‌ನಲ್ಲಿ ಕಂಗುವ ಶೀರ್ಷಿಕೆಯ ಪೋಸ್ಟರ್ ಜೊತೆಗೆ "ಎ ಮ್ಯಾನ್ ವಿತ್ ಪವರ್ ಆಫ್ ಫೈರ್ & ಎ ಸಾಗಾ ಆಫ್ ಎ ಮೈಟಿ ವ್ಯಾಲಿಯಂಟ್ ಹೀರೋ" ಎಂದು ಬರೆದಿದ್ದಾರೆ.

  • " class="align-text-top noRightClick twitterSection" data="">

ರಾಷ್ಟ್ರಪ್ರಶಸ್ತಿ ವಿಜೇತ ನಟ ಸೂರ್ಯ ಅವರ 42ನೇ ಚಿತ್ರ ಕಂಗುವ. ಮುಂಬರುವ ಚಿತ್ರದ ಟೈಟಲ್​ ಟೀಸರ್​ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ಈ ಅದ್ಭುತ ಸಾಹಸ ಸಿನಿಮಾದಲ್ಲಿ ಶಿವ ಮತ್ತು ತಂಡದೊಂದಿಗೆ ಕೆಲಸ ಮಾಡುವ ಬಗ್ಗೆ ಬಹಳ ಖುಷಿ ಇದೆ. ಕಂಗುವ ಟೈಟಲ್​ ಲುಕ್​ ಅನ್ನು ಹಂಚಿಕೊಳ್ಳಲು ಸಂತೋಷವಾಗಿದೆ" ಎಂದು 47 ವರ್ಷದ ನಟ ಸೂರ್ಯ ಬರೆದುಕೊಂಡಿದ್ದಾರೆ. ಬಿಗ್ ಬಜೆಟ್​​ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟ ಸೂರ್ಯ ಆರ್ಭಟಿಸಲಿದ್ದಾರೆ.

ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಕಂಗುವ ಸಿನಿಮಾದಲ್ಲಿ ನಟಿ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗುವ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸಿದರೆ, ದಿಶಾ ಹಿಂದೆಂದೂ ನೋಡದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತವೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದರೆ, ವೆಟ್ರಿ ಪಳನಿಸಾಮಿ ಕ್ಯಾಮರಾ ವರ್ಕ್ ಮತ್ತು ರಿಚರ್ಡ್ ಕೆವಿನ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕಂಗುವ ಸಿನಿಮಾ 3ಡಿಯಲ್ಲಿ 10 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಚೇತನ್ ವೀಸಾ ರದ್ದು: ಅಮೆರಿಕಕ್ಕೆ ಹೋಗಲ್ಲ, ಇಲ್ಲೇ ಇರುತ್ತೇನೆಂದ ನಟ

ಸೂರ್ಯ ಅವರು ಶೀಘ್ರದಲ್ಲೇ ವೆಟ್ರಿಮಾರನ್ ಅವರ ಮುಂಬರುವ ನಿರ್ದೇಶನದ ವಾಡಿವಾಸಲ್ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಸೂರರೈ ಪೊಟ್ರು ಹಿಂದಿ ರೀಮೇಕ್‌ನಲ್ಲಿಯೂ ಸಹ ನಟ ಸೂರ್ಯ ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್​ ಭೂಮಿ ಮೇಲಿರಲು ಇವರೇ ಕಾರಣ

ನಟ ಸೂರ್ಯ ಅವರ ಸಿನಿಮಾಗಳ ಬಗ್ಗೆ ಅಥವಾ ಅಭಿನಯದ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ಕಮರ್ಷಿಯಲ್​ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಸಂದೇಶಗಳುಳ್ಳ ಚಿತ್ರಗಳನ್ನೂ ಮಾಡಿದ್ದಾರೆ. ಹಲವು ಸೂಪರ್​ ಹಿಟ್​ ಸಿನಿಮಾಗಳ ಮೂಲಕ ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗಾಗಿ ಅವರ ಮುಂದಿನ ಈ ಕಂಗುವಾ ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ, ನಿರೀಕ್ಷೆ ಬೆಟ್ಟದಷ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.