ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಉತ್ತಮ ನಟಿ, ರೂಪದರ್ಶಿ ಮಾತ್ರವಲ್ಲ ಅದ್ಭುತ ತಾಯಿ ಕೂಡ ಹೌದು. ತಮ್ಮ ಬ್ಯುಸಿ ಲೈಫ್ ನಡುವೆಯೂ ಮಕ್ಕಳಿಗೆ ಟೈಮ್ ಕೊಡುವುದನ್ನ ಮರೆತಿಲ್ಲ. ಸನ್ನಿ ತಮ್ಮ ಮಕ್ಕಳಾದ ನಿಶಾ, ನೋವಾ ಮತ್ತು ಆಶರ್ ಜೊತೆ 'ಲೈಟ್ಇಯರ್' ಆ್ಯನಿಮೇಟೆಡ್ ಸಿನಿಮಾ ವೀಕ್ಷಿಸಿದರು. ಚಿತ್ರ ನೋಡಿ ಅನುಭವ ಹಂಚಿಕೊಂಡ ನಟಿ, ನನ್ನ ಮಕ್ಕಳು ಈ ಸಿನಿಮಾ ನೋಡಬೇಕೆಂದು ತುಂಬಾ ಕುತೂಹಲದಿಂದ ಇದ್ದರು. ನಾನು ಕೂಡ ಸಕತ್ ಎಂಜಾಯ್ ಮಾಡಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಸನ್ನಿ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಪ್ರವಾಸ, ಫೋಟೋಶೂಟ್, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಇದನ್ನೂ ಓದಿ: ಸನ್ನಿ ಲಿಯೋನ್ ಜನ್ಮದಿನಕ್ಕೆ ರಕ್ತದಾನ, ಬಾಡೂಟ: ಮಂಡ್ಯ ಬಾಯ್ಸ್ ಪ್ರೀತಿಗೆ ಮನಸೋತ ನಟಿ