ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಚಾಂಪಿಯನ್. ಯುವ ಪ್ರತಿಭೆ ಸಚಿನ್ ಧನಪಾಲ್ ಅಭಿನಯದ ಹಾಗೂ ಶಾಹುರಾಜ ಶಿಂಧೆ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ 'ಡಿಂಗ್ರಿ ಬಿಲ್ಲಿ' ಎಂಬ ಸ್ಪೆಷಲ್ ಹಾಡಿನಲ್ಲಿ ಸೊಂಟ ಬಳುಕಿಸಿದ್ದಾರೆ. ಹೀಗಾಗಿ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದಿದ್ರು.
ಈ ಸಂದರ್ಭದಲ್ಲಿ ನಟ ಸಚಿನ್ ಧನಪಾಲ್ ಹಾಗೂ ಶಿವಾನಂದ್ ಎಸ್. ನೀಲಣ್ಣನವರ್ ತಮ್ಮ ಚಾಂಪಿಯನ್ ಚಿತ್ರದ, ಡಿಂಗ್ರಿ ಬಿಲ್ಲಿ ಹಾಡನ್ನ ಸನ್ನಿ ಲಿಯೋನ್ ಕೈಯಲ್ಲಿ ಲಾಂಚ್ ಮಾಡಿಸಿದರು. ಚಾಂಪಿಯನ್ ಚಿತ್ರತಂಡ ಸನ್ನಿ ಲಿಯೋನ್ ಮೂಲಕ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬವನ್ನೂ ಆಚರಿಸಿದರು. ಯಾಕೆಂದರೆ ಕರ್ನಾಟಕದಲ್ಲೂ ಸನ್ನಿ ಲಿಯೋನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಂಡ್ಯದ ಅಭಿಮಾನಿಗಳು ಸನ್ನಿ ಲಿಯೋನ್ ಫೋಟೋ ಮುಂದೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದರು.
ಡಿಂಗ್ರಿ ಬಿಲ್ಲಿ ನನ್ನ ಫೇವರೇಟ್: ಬಳಿಕ ಮಾತನಾಡಿದ ಸನ್ನಿ ಲಿಯೋನ್, ಚಾಂಪಿಯನ್ ಚಿತ್ರದಲ್ಲಿನ ಡಿಂಗ್ರಿ ಬಿಲ್ಲಿ ಹಾಡು ನನ್ನ ಫೇವರೇಟ್. ನಾನು ಡ್ಯಾನ್ಸ್ ಮಾಡಿರೋ ಹಾಡುಗಳಲ್ಲಿ ಡಿಂಗ್ರಿ ಬಿಲ್ಲಿ ಹಾಡನ್ನು ನನ್ನ ಮಕ್ಕಳು ಹೇಳಿಕೊಂಡು ಮನೆ ತುಂಬಾ ಓಡಾಡುತ್ತಾರೆ. ಅದು ಖುಷಿಯಾಗುತ್ತೆ ಎಂದರು.
ಇನ್ನು ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ತಮ್ಮ ಜನ್ಮದಿನದ ಆಚರಿಸಿರುವ ಬಗ್ಗೆ ಮಾತನಾಡಿದ ಅವರು, ಮಂಡ್ಯದ ಅಭಿಮಾನಿಗಳಿಗೆ ನಾನು ಋಣಿ. ಆ ಅಭಿಮಾನಿಗಳನ್ನು ಒಮ್ಮೆ ಭೇಟಿ ಮಾಡುತ್ತೇನೆ. ಇನ್ನು ಬೆಂಗಳೂರು ನಾನು ಇಷ್ಟ ಪಡುವ ಸಿಟಿಗಳಲ್ಲಿ ಒಂದು. ಇಲ್ಲಿರುವ ಶಾಪಿಂಗ್ ಮಾಲ್ಗಳು ಮತ್ತು ರೆಸ್ಟೋರೆಂಟ್ಗಳು ತುಂಬಾ ಇಷ್ಟ ಅಂದರು.
ಸನ್ನಿ ಮಟನ್ ಅಂಗಡಿಗೆ ಮೆಚ್ಚುಗೆ: ಇನ್ನು ಸನ್ನಿ ಲಿಯೋನ್ ಅಭಿಮಾನಿಯೊಬ್ಬ ಮಟನ್ ಅಂಗಡಿಗೆ ಸನ್ನಿ ಲಿಯೋನ್ ಹೆಸರು ಇಟ್ಟು, ಕಡಿಮೆ ಬೆಲೆಗೆ ಮಟನ್ ಕೊಡ್ತಾ ಇರೋ ಬಗ್ಗೆ, ಸನ್ನಿ ಲಿಯೋನ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ನಾನು ಫ್ಯೂರ್ ವೆಜಿಟೇರಿಯನ್ ಅಂದರು.
ಇನ್ನು ಕನ್ನಡದಲ್ಲಿ ಒಳ್ಳೆ ಪಾತ್ರ ಬಂದ್ರೆ, ಹೀರೋಯಿನ್ ಆಗಿ ಅಭಿನಯಿಸುತ್ತೇನೆ. ಕೆಜಿಎಫ್ ಚಾಪ್ಟರ್- 2 ಸಿನಿಮಾ ನೋಡಿಲ್ಲ, ಒಟಿಟಿಯಲ್ಲಿ ನೋಡುತ್ತೇನೆ. ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾಗಳು ಬರ್ತಾ ಇವೆ. ಕನ್ನಡ ಚಿತ್ರರಂಗದ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಆಗ್ತಾ ಇದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿದ್ದ ಅಭಿಮಾನಿಯೊಬ್ಬನಿಗೆ ಸನ್ನಿ ಭರ್ಜರಿ ಗಿಫ್ಟ್ ನೀಡಿದರು. ಅಭಿಮಾನಿ ಆಟೋಗ್ರಾಫ್ ಕೇಳಿದ್ರೆ, ಸನ್ನಿ ಲಿಯೋನ್ ಅಭಿಮಾನಿಯ ಎದೆ ಮೇಲೆ ಹಸ್ತಾಕ್ಷರ ಬರೆಯುವ ಮೂಲಕ ಭರ್ಜರಿ ಶಾಕ್ ನೀಡಿದರು.
ಓದಿ: ಸಂಜನಾ ಮನೆಗೆ ಹೊಸ ಅತಿಥಿ.. ಗಂಡು ಮಗುವಿಗೆ ಜನ್ಮ ನೀಡಿದ ನಟಿ ಗಲ್ರಾನಿ