ETV Bharat / entertainment

ಪೋಸ್ಟರ್​ ಜೊತೆ ಟೀಸರ್​ ದಿನಾಂಕ ಬಹಿರಂಗಪಡಿಸಿದ 'ಡೋನೋ'.. ಎಲ್ಲವೂ ಹೊಸ ಮುಖಗಳೇ!

Dono: 'ಡೋನೋ' ಚಿತ್ರದ ಪೋಸ್ಟರ್​ ಜೊತೆ ಟೀಸರ್​ ದಿನಾಂಕ ಘೋಷಣೆಯಾಗಿದೆ.

author img

By

Published : Jul 24, 2023, 5:13 PM IST

Dono
ಡೋನೋ

ನಿರ್ದೇಶಕ ಸೂರಜ್ ಬರ್ಜಾತ್ಯಾ ಅವರ ಪುತ್ರ ಅವ್ನಿಶ್ ಬರ್ಜಾತ್ಯಾ ತಮ್ಮ ಚೊಚ್ಚಲ ಚಿತ್ರ 'ಡೋನೋ' ಮೂಲಕ ನಿರ್ದೇಶಕರ ಟೋಪಿಯನ್ನು ಧರಿಸಲು ಸಿದ್ಧರಾಗಿದ್ದಾರೆ. ಗಮನಾರ್ಹ ವಿಚಾರವೆಂದರೆ, ಅವ್ನಿಶ್​ ಅವರದ್ದು ಮಾತ್ರ ಇದು ಚೊಚ್ಚಲ ಸಿನಿಮಾವಲ್ಲ. ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್ ಅವರ ಮಗ ರಾಜ್‌ವೀರ್‌ ಡಿಯೋಲ್​ ಮತ್ತು ಪೂನಂ ಧಿಲ್ಲೋನ್ ಅವರ ಮಗಳು ಪಲೋಮಾ ತಕೆರಿಯಾ ಮೊದಲ ಬಾರಿಗೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರಿಬ್ಬರ ಮೊದಲ ಚಿತ್ರವಾಗಿದೆ.

ಸನ್ನಿ ಡಿಯೋಲ್​ ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ತಮ್ಮ ಮಗ ರಾಜ್​ವೀರ್​ ಅವರ ಹೊಸ ಆರಂಭದ ಭಾಗವಾಗಿಸಿದ್ದಾರೆ. 'ಡೋನೋ' ಸಿನಿಮಾದ ಪೋಸ್ಟರ್​ ಅನ್ನು ಹಂಚಿಕೊಳ್ಳಲು ಅವರು ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಬಿಡುಗಡೆಯಾಗಿರುವ ಪೋಸ್ಟರ್​ನಲ್ಲಿ ರಾಜ್‌ವೀರ್‌ ಡಿಯೋಲ್​ ಮತ್ತು ಪಲೋಮಾ ತಕೆರಿಯಾ ಬೀಚ್​ ಬಳಿ ಕ್ಯಾಮರಾಗೆ ಬೆನ್ನು ಹಾಕಿ ಕುಳಿತಿರುವುದನ್ನು ಕಾಣಬಹುದು. ಪಲೋಮಾ ಸಮುದ್ರವನ್ನು ನೋಡುತ್ತಿದ್ದರೆ, ರಾಜ್​ವೀರ್​ ಆಕೆಯನ್ನು ನೋಡುತ್ತಿರುವಂತೆ ಪೋಸ್ಟರ್​ ಡಿಸೈನ್​ ಮಾಡಲಾಗಿದೆ.

"ಇದು ಹೊಸ ಆರಂಭದ ಆರಂಭ! 'ಡೋನೋ' ಟೀಸರ್​ ನಾಳೆ. ಅವ್ನಿಶ್ ಬರ್ಜಾತ್ಯಾ ನಿರ್ದೇಶಿಸಿದ್ದಾರೆ. ರಾಜ್‌ವೀರ್‌ ಡಿಯೋಲ್​ ಮತ್ತು ಪಲೋಮಾ ತಕೆರಿಯಾ ನಟಿಸಿದ್ದಾರೆ. #TeaserOutOn25thJuly" ಎಂದು ಪೋಸ್ಟರ್​ ಹಂಚಿಕೊಂಡ ಸನ್ನಿ ಡಿಯೋಲ್ ಕ್ಯಾಪ್ಶನ್​ ನೀಡಿದ್ದಾರೆ. ಟೀಸರ್​ ದಿನಾಂಕವನ್ನು ಸನ್ನಿ ಡಿಯೋಲ್​ ಬಹಿರಂಗಪಡಿಸಿದ್ದಾರೆ. ಹಿಂದಿ ಚಲನಚಿತ್ರೋದ್ಯಮದಲ್ಲಿ ತನ್ನ 75 ನೇ ವರ್ಷವನ್ನು ಗುರುತಿಸುವ ಮೂಲಕ, ರಾಜಶ್ರೀ ಪ್ರೊಡಕ್ಷನ್ ಈ ವಿಚಾರವನ್ನು ಹಂಚಿಕೊಂಡಿದೆ.

ತಮ್ಮ 59ನೇ ಚಿತ್ರವನ್ನು ಘೋಷಿಸಿದೆ. ಡೋನೋ ಎಂಬ ಪ್ರೇಮಕಥೆಯ ಜೊತೆಗೆ ಟೀಸರ್ ದಿನಾಂಕ ಬಹಿರಂಗಗೊಂಡಿದೆ. ಘೋಷಣೆಯ ಜೊತೆಗೆ ಟೀಸರ್​ ಅನ್ನು ಕೈ ಬಿಡಲಾಗಿದೆ. ಜುಲೈ 25 ರಂದು (ನಾಳೆ) ಟೀಸರ್ ಬಿಡುಗಡೆಯಾಗಲಿದೆ. ಹೊಸ ಪ್ರೇಮಕಥೆಯಲ್ಲಿ ಇಬ್ಬರು ಹೊಸ ಮುಖಗಳನ್ನು ಅವ್ನಿಶ್ ಬರ್ಜಾತ್ಯಾ ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅವರ ಚೊಚ್ಚಲ ಚಿತ್ರ ಮೈನೆ ಪ್ಯಾರ್ ಕಿಯಾ (1989) ಸೂರಜ್ ಬರ್ಜಾತ್ಯಾ ಅವರ ಮೊದಲ ನಿರ್ದೇಶನವಾಗಿತ್ತು.

ಅವ್ನಿಶ್ ಬರ್ಜಾತ್ಯಾ ಅವರು ನಿರ್ದೇಶಕರಾಗಿ ರಾಜಶ್ರೀ ಪ್ರೊಡಕ್ಷನ್​ನ 59ನೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಹಿಂದೆ ಮೆಗಾ ಬ್ಲಾಕ್​ಬಸ್ಟರ್​ ಪ್ರೇಮ್​ ರತನ್​ ಧನ್​ ಪಾಯೋ (2015) ನಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಉಂಚೈ (2022) ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2020 ರಲ್ಲಿ ರಾಜ್​ವೀರ್​ ಅವರ ತಾತ, ಹಿರಿಯ ನಟ ಧರ್ಮೇಂದ್ರ ಅವರು ಡೀನೋ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

"ನನ್ನ ಮೊಮ್ಮಗ ರಾಜ್‌ವೀರ್‌ ಡಿಯೋಲ್​ನನ್ನು ಸಿನಿಮಾ ಜಗತ್ತಿಗೆ ಅವ್ನಿಶ್ ಬರ್ಜಾತ್ಯಾ ಚೊಚ್ಚಲ ನಿರ್ದೇಶನದ ಜೊತೆಗೆ ಪರಿಚಯಿಸುತ್ತಿದ್ದೇನೆ" ಎಂದು ಧರಂ ವೀರ್ ನಟ ಬರೆದುಕೊಂಡಿದ್ದರು. "ನೀವು ನನ್ನ ಮೇಲೆ ನೀಡಿರುವಂತಹ ಪ್ರೀತಿಯನ್ನು ಎರಡೂ ಮಕ್ಕಳ ಮೇಲೆ ಧಾರೆಯೆರೆಯಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಶುಭವಾಗಲಿ ಮತ್ತು ದೇವರ ಆಶೀರ್ವಾದ" ಎಂದು ಸೇರಿಸಿದ್ದರು. ಚಿತ್ರವನ್ನು ಕಮಲ್ ಕುಮಾರ್ ಬರ್ಜಾತ್ಯಾ, ದಿವಂಗತ ರಾಜ್‌ಕುಮಾರ್ ಬರ್ಜಾತ್ಯಾ, ಅಜಿತ್ ಕುಮಾರ್ ಬರ್ಜಾತ್ಯಾ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕಾಯುವಿಕೆ ಮುಗಿದಿದೆ! 'ಜವಾನ್​'ನಲ್ಲಿ ವಿಜಯ್​ ಸೇತುಪತಿ ಲುಕ್​ ಹೀಗಿದೆ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.