ಹೈದರಾಬಾದ್: ಬಾಲಿವುಡ್ ನಟ ಸನ್ನಿ ಡಿಯೋಲ್ ಮತ್ತು ಶಾರುಖ್ ಖಾನ್ ತಮ್ಮ ನಡುವಿದ್ದ ಸಣ್ಣ ಮುನಿಸನ್ನು ಪಕ್ಕಕ್ಕೆ ಇರಿಸಿದ್ದು, ಹಲವು ವರ್ಷಗಳ ಬಳಿಕ ಮತ್ತೆ ಪರಸ್ಪರ ಪ್ರಶಂಸೆಗೆ ಮುಂದಾಗಿದ್ದಾರೆ. ಇದರ ಆರಂಭವನ್ನು ನಟ ಶಾರುಖ್ ಖಾನ್ ಇತ್ತೀಚಿಗೆ 'ಗದಾರ್ 2' ಚಿತ್ರ ವೀಕ್ಷಣೆ ಮಾಡುವ ಮೂಲಕ ಆರಂಭಿಸಿದ್ದಾರೆ. ಸನ್ನಿ ಡಿಯೋಲ್ ಅಭಿನಯದ ಗದಾರ್ 2 ಚಿತ್ರ ವೀಕ್ಷಣೆ ಮಾಡಿದ ಅವರು, ಚಿತ್ರವನ್ನು ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ.
ಸುದೀರ್ಘ ವಿರಾಮದ ಬಳಿಕ ಗದಾರ್ 2 ಚಿತ್ರದ ಮೂಲಕ ನಟ ಸನ್ನಿ ಡಿಯೋಲ್ ಮತ್ತೆ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದ 20 ದಿನಕ್ಕೆ 472.75 ಕೋಟಿ ಗಳಿಕೆಯನ್ನು ಮಾಡಿದೆ. ಚಿತ್ರವನ್ನು ಅನೇಕ ಬಾಲಿವುಡ್ ತಾರೆಯರು ಕೂಡ ವೀಕ್ಷಣೆ ಮಾಡಿದ್ದು, ನಟನಿಗೆ ಮೆಚ್ಚುಗೆ ತಿಳಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಕಿಂಗ್ ಖಾನ್ ಕೂಡ ಚಿತ್ರ ವೀಕ್ಷಣೆ ಬಳಿಕ ತನಗೆ ಸಂದೇಶ ರವಾನಿಸಿದ್ದರು ಎಂಬುದಾಗಿ ನಟ ಸನ್ನಿ ಡಿಯೋಲ್ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸನ್ನಿ ಡಿಯೋಲ್, ಶಾರುಖ್ ಖಾನ್ ಕೇವಲ ಶುಭಾಶಯವನ್ನು ತಿಳಿಸಿದೆ, ಚಿತ್ರದ ಯಶಸ್ಸಿಗೂ ಸಂತಸ ವ್ಯಕ್ತಪಡಿಸಿದರು ಎಂದರು. ಶಾರುಖ್ ಅವರ ಈ ಮುಕ್ತ ಮೆಚ್ಚುಗೆ ಪಡೆದಿದ್ದಕ್ಕೆ ನಟ ಕೂಡ ಹರ್ಷ ವ್ಯಕ್ತಪಡಿಸಿದ್ದು, ಕೃತಜ್ಞತೆಯನ್ನು ತಿಳಿಸಿದ್ದಾರೆ. ಇದೇ ವೇಳೆ ಚಿತ್ರವನ್ನು ಪತ್ನಿ ಗೌರಿ ಖಾನ್ ಮತ್ತು ಮಗ ಆರ್ಯನ್ ಖಾನ್ ಕೂಡ ಮೆಚ್ಚಿಕೊಂಡಿದ್ದರ ಕುರಿತು ಅವರು ತಿಳಿಸಿದ್ದರಂತೆ.
-
Yeah loved it!! https://t.co/Hd6hc6hi8Q
— Shah Rukh Khan (@iamsrk) August 26, 2023 " class="align-text-top noRightClick twitterSection" data="
">Yeah loved it!! https://t.co/Hd6hc6hi8Q
— Shah Rukh Khan (@iamsrk) August 26, 2023Yeah loved it!! https://t.co/Hd6hc6hi8Q
— Shah Rukh Khan (@iamsrk) August 26, 2023
1993ರಲ್ಲಿ ಬಂದ ಅತ್ಯಂತ ಜನಪ್ರಿಯ ಸಿನಿಮಾ 'ಡರ್'ನಲ್ಲಿ ನಟ ಸನ್ನಿ ಡಿಯೋಲ್ ಮತ್ತು ಶಾರುಖ್ ಖಾನ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರಕ್ಕೆ ನಟ ಶಾರುಖ್ ಖಾನ್ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರು. ಈ ವೇಳೆ ನಟ ಸನ್ನಿ ಡಿಯೋಲ್ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ ಎಂಬ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಈ ಇಬ್ಬರು ನಟರು ತಮ್ಮ ನಡುವಿನ ಸಂಭಾಷಣೆಯನ್ನು ಮಿತಗೊಳಿಸಿದ್ದರು. ಈ ಕುರಿತು ಮಾತನಾಡಿರುವ ಸನ್ನಿ ಡಿಯೋಲ್, ಅನೇಕ ಸಂದರ್ಭದಲ್ಲಿ ನಾನು ಶಾರುಖ್ ಖಾನ್ಗೆ ಕರೆ ಮಾಡಿ ಮಾತನಾಡಿದ್ದು, ಅನೇಕ ನಮ್ಮ ಚಿಂತನೆ ಹಂಚಿಕೊಂಡಿದ್ದೇವೆ. ಹಿಂದಿನ ಘಟನೆಗಳು ಸಮಯದೊಂದಿಗೆ ಕಳೆದು ಹೋಗುತ್ತವೆ. ಅದರಿಂದ ಮುಂದೆ ನಾವು ಸಾಗಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹಲವು ವಿಚಾರಗಳ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಟಿ ಆಲಿಯಾ ಭಟ್ ಜೊತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಆಲಿಯಾ ಭಟ್ ಎಂದರೆ ತನಗೆ ತುಂಬಾ ಇಷ್ಟ. ಅವರೊಟ್ಟಿಗೆ ಕೆಲಸ ಮಾಡುವುದು ಆಸಕ್ತಿದಾಯಕವಾಗಿರುತ್ತದೆ. ನನ್ನೊಂದಿಗೆ ಆಕೆ ಹೀರೋಯಿನ್ ಆಗಿ ನಟಿಸಬೇಕು ಎನ್ನುತ್ತಿಲ್ಲ. ಆದರೆ, ಅಪ್ಪ ಮಗಳಾಗಿ ನಟಿಸಬಹುದು ಎಂದು ಸನ್ನಿ ಡಿಯೋಲ್ ತಿಳಿಸಿದ್ದಾರೆ.
ಇದನ್ನೂ ಓದಿ: Salaar vs Jawan: 'ಜವಾನ್'ಗಿಂತ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ 'ಸಲಾರ್'