ಕೆಲ ದಿನಗಳ ಹಿಂದಷ್ಟೇ ನಟ ಸನ್ನಿ ಡಿಯೋಲ್ ಅವರ ವಿಡಿಯೋವೊಂದು ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. ಮುಂಬೈನ ಬೀದಿಗಳಲ್ಲಿ ಅಮಲೇರಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋ ಶರವೇಗದಲ್ಲಿ ವೈರಲ್ ಆಗಿ ನಾನಾ ತರನಾದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದ ಬೆನ್ನಲ್ಲೇ ನಟ ಸೋಷಿಯಲ್ ಮೀಡಿಯಾದಲ್ಲಿ ಇದು ಚಿತ್ರೀಕರಣದ ವಿಡಿಯೋ ಎಂಬುದನ್ನು ಬಹಿರಂಗಪಡಿಸಿದ್ದರು. ಅದಾಗ್ಯೂ, ನಟ ಹಳೇ ಘಟನೆಯನ್ನು ಉದ್ದೇಶಿಸಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಇದು ತಮ್ಮ ಮುಂಬರುವ ಚಿತ್ರ 'ಸಫರ್'ನ ಚಿತ್ರೀಕರಣದ ಭಾಗವಾಗಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
-
Afwaahon ka ‘Safar’ bas yahin tak 🙏🙏#Shooting #BTS pic.twitter.com/MS6kSUAKzL
— Sunny Deol (@iamsunnydeol) December 6, 2023 " class="align-text-top noRightClick twitterSection" data="
">Afwaahon ka ‘Safar’ bas yahin tak 🙏🙏#Shooting #BTS pic.twitter.com/MS6kSUAKzL
— Sunny Deol (@iamsunnydeol) December 6, 2023Afwaahon ka ‘Safar’ bas yahin tak 🙏🙏#Shooting #BTS pic.twitter.com/MS6kSUAKzL
— Sunny Deol (@iamsunnydeol) December 6, 2023
ಈ ಘಟನೆಯನ್ನು ಉದ್ದೇಶಿಸಿ ಮಾತನಾಡಿದ ಸನ್ನಿ ಡಿಯೋಲ್, "ಇದು ಚಿತ್ರೀಕರಣದ ವಿಡಿಯೋ, ಅಧಿಕೃತ ವಿಡಿಯೋ ಅಲ್ಲ, ಹಾಗಾಗಿ ಎಲ್ಲರೂ ಆರಾಮಾಗಿರಿ. ಹಾಗೇನಾದರು ನಾನು ಕುಡಿಯಲು ಬಯಸಿದರೆ, ನಾನು ಅದನ್ನು ರಸ್ತೆಯಲ್ಲೋ ಅಥವಾ ಆಟೋ ರಿಕ್ಷಾದಲ್ಲೋ ಮಾಡುತ್ತೇನೆಯೇ?. ನಾನು ಕುಡಿಯುವುದಿಲ್ಲ ಎಂಬುದೇ ಸತ್ಯಾಂಶ. ಅದು ನಿಜವಾದ ವಿಡಿಯೋ ಅಲ್ಲ, ಬದಲಾಗಿ ಚಿತ್ರೀಕರಣದ ಒಂದು ಭಾಗ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕುಡಿತು ತೂರಾಡುತ್ತಿರುವಂತೆ ಪ್ರದರ್ಶಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಸನ್ನಿ ಡಿಯೋಲ್ ತೆರೆಮರೆಯ ವಿಡಿಯೋ ಹಂಚಿಕೊಂಡಿದ್ದರು. ಚಿತ್ರೀಕರಣ ನಡೆಸುತ್ತಿರುವ ದೃಶ್ಯ ಅದಾಗಿತ್ತು. ಅಸಲಿ ವಿಡಿಯೋ ಹಂಚಿಕೊಂಡ ನಟ, "ಅಫ್ವಾಹೋನ್ ಕಾ 'ಸಫರ್' ಬಸ್ ಯಹಿ ತಕ್" ಎಂಬ ಶೀರ್ಷಿಕೆ ಕೂಡ ನೀಡಿದ್ದರು.
-
Sunny Deol shooting for his upcoming movie #SAFAR movie on roads of Mumbai. #SunnyDeol #Safar pic.twitter.com/6FEUBSji09
— Kashinath 2.0 (@TheDeolsFC) December 6, 2023 " class="align-text-top noRightClick twitterSection" data="
">Sunny Deol shooting for his upcoming movie #SAFAR movie on roads of Mumbai. #SunnyDeol #Safar pic.twitter.com/6FEUBSji09
— Kashinath 2.0 (@TheDeolsFC) December 6, 2023Sunny Deol shooting for his upcoming movie #SAFAR movie on roads of Mumbai. #SunnyDeol #Safar pic.twitter.com/6FEUBSji09
— Kashinath 2.0 (@TheDeolsFC) December 6, 2023
ಇದನ್ನೂ ಓದಿ: ಶ್ರೇಯಸ್ ತಲ್ಪಾಡೆ ಆರೋಗ್ಯ ಸ್ಥಿರ: ಪತ್ನಿ ದೀಪ್ತಿ ಕೊಟ್ರು ಮಾಹಿತಿ
ಮೊದಲು ವೈರಲ್ ಆದ ವಿಡಿಯೋದಲ್ಲಿ, ನಟ ಸನ್ನಿ ಡಿಯೋಲ್ ರಾತ್ರಿ ಏಕಾಂಗಿಯಾಗಿ ಅಲೆದಾಡುತ್ತಿರುವಂತೆ ತೋರಿಸಿದೆ. ಕುಡಿತ ಮತ್ತಿನಲ್ಲಿ ತೂರಾಡಿ ಬಳಿಕ ಆಟೋ ರಿಕ್ಷಾದವನೊಂದಿಗೆ ಮಾತನಾಡಿ ಆಟೋ ಹತ್ತಿ ಕುಳಿತಿದ್ದಾರೆ. ಚಾಲಕ ರಿಕ್ಷಾದಲ್ಲಿ ಕುಳಿತುಕೊಳ್ಳಲು ನಟನಿಗೆ ಮಾರ್ಗದರ್ಶನ ನೀಡುತ್ತಿರುವಂತೆ ವಿಡಿಯೋದಲ್ಲಿ ಕಂಡು ಬಂದಿದೆ. ಇದು ಅಮಲೇರಿದ ವ್ಯಕ್ತಿಗೆ ಆಟೋ ಚಾಲಕ ಸಹಾಯ ಮಾಡಿದ ದೃಶ್ಯವಾಗಿತ್ತು. ಆದರೆ ಇದು ಸಿನಿಮಾ ಶೂಟಿಂಗ್ನ ಒಂದು ಭಾಗ.
ಇದನ್ನೂ ಓದಿ: 'ಕುಡಿದ ಮತ್ತಿನಲ್ಲಿ ತೂರಾಡಿದ ಸನ್ನಿ ಡಿಯೋಲ್': ಇದು ನಿಜವಲ್ಲ, 'ಸಫರ್' ಸಿನಿಮಾ ಶೂಟಿಂಗ್!
ಸನ್ನಿ ಡಿಯೋಲ್ ತಮಗೆ ಕುಡಿಯುವ ಅಭ್ಯಾಸವಿಲ್ಲ ಎಂದು ಈಗಾಗಲೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಇತ್ತೀಚಿನ ಮತ್ತೊಂದು ಸಂದರ್ಶನದಲ್ಲಿ, "ಕುಡಿಯಲು ನಾನು ಪ್ರಯತ್ನಿಸಲಿಲ್ಲ ಎಂದೇನಿಲ್ಲ. ನಾನು ಇಂಗ್ಲೆಂಡ್‌ಗೆ ಹೋದಾಗ ಪ್ರಯತ್ನಿಸಿದ್ದೆ. ಆದ್ರೆ ಮದ್ಯ ಬಹಳ ಕಹಿಯಾಗಿತ್ತು, ಕೆಟ್ಟ ವಾಸನೆಯನ್ನು ಹೊಂದಿತ್ತು, ಅದು ತಲೆನೋವು ಕೊಡುವಂತಿತ್ತು, ಹಾಗಾಗಿ ಅದನ್ನು ಏಕೆ ಕುಡಿಯಬೇಕು? ಎನಿಸಿತ್ತು'' ಎಂದು ತಿಳಿಸಿದ್ದರು.