ETV Bharat / entertainment

ದಿ ಆರ್ಚೀಸ್: ವೆರೋನಿಕಾ ಪಾತ್ರದಲ್ಲಿ ಸುಹಾನಾ ಖಾನ್​​: ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರದ ಅನುಭವ ಹೇಗಿತ್ತು? - ದಿ ಆರ್ಚೀಸ್ ಬಿಡುಗಡೆ ದಿನಾಂಕ

Suhana Khan: ಶಾರುಖ್​ ಪುತ್ರಿ ಸುಹಾನಾ ಖಾನ್ ನಟನೆಯ ಚೊಚ್ಚಲ ಚಿತ್ರ ದಿ ಆರ್ಚೀಸ್ ಡಿಸೆಂಬರ್​ 7 ರಂದು ಬಿಡುಗಡೆ ಆಗಲಿದೆ.

Shahrukh daughter Suhana Khan
ಶಾರುಖ್​ ಪುತ್ರಿ ಸುಹಾನಾ ಖಾನ್​​ ಸಿನಿಮಾ ದಿ ಆರ್ಚೀಸ್
author img

By ETV Bharat Karnataka Team

Published : Oct 5, 2023, 10:00 AM IST

ಬಾಲಿವುಡ್​​ ಕಿಂಗ್​ ಖಾನ್​​ ಶಾರುಖ್ ಪುತ್ರಿ ಸುಹಾನಾ ಖಾನ್ ನಟನೆಯ ಚೊಚ್ಚಲ ಚಿತ್ರ 'ದಿ ಆರ್ಚೀಸ್'. ನೆಟ್‌ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲು ಸಜ್ಜಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು ನಟಿಸಿದ್ದಾರೆ. ಹಾಗಾಗಿ ಈ ಪ್ರಾಜೆಕ್ಟ್​​ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಡಿಸೆಂಬರ್​ 7ಕ್ಕೆ ಸಿನಿಮಾ ಬಿಡುಗಡೆ: ನೆಟ್‌ಫ್ಲಿಕ್ಸ್ ಚಿತ್ರವಾದ 'ದಿ ಆರ್ಚೀಸ್' ಮೂಲಕ ನಟನೆಗೆ ಪದಾರ್ಪಣೆ ಮಾಡಲು ಸೂಪರ್​ ಸ್ಟಾರ್ ಶಾರುಖ್​ ಖಾನ್​​ ಪುತ್ರಿ ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ವೆರೋನಿಕಾ ಪಾತ್ರವನ್ನು ಸುಹಾನಾ ಖಾನ್​​ ನಿರ್ವಹಿಸಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ನಲ್ಲಿ ಸಿನಿಮಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಸೈಕಲ್​ ಬಳಿ ಸುಹಾನಾ ಖಾನ್​ ನಿಂತಿರುವ ಚಿತ್ರವಿದು. ''ಡಿಸೆಂಬರ್​ 7 ರಂದು ನೆಟ್​​ಫ್ಲಿಕ್ಸ್​​ನಲ್ಲಿ ದಿ ಆರ್ಚೀಸ್​ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.

ಸುಹಾನಾ ಖಾನ್​​ ಶೂಟಿಂಗ್​ ಅನುಭವ: ಇತ್ತೀಚೆಗೆ ತಮ್ಮ ಆರಂಭಿಕ ಅನುಭವದ ಬಗ್ಗೆ ಮಾತನಾಡಿದ್ದ ಶಾರುಖ್ ಪುತ್ರಿ, ಮೊದಲ ದಿನದ ಶೂಟಿಂಗ್ ವಿಭಿನ್ನವಾಗಿತ್ತು. ನೆಟ್‌ಫ್ಲಿಕ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದು ಓರ್ವ ಕಲಾವಿದರಿಗೆ ಒಂದು ವಿಭಿನ್ನ ಅನುಭವ. ನಾನು ಕೊಂಚ ಆತಂಕಗೊಂಡಿದ್ದೆ ಎಂದು ತಿಳಿಸಿದ್ದರು.

ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳ ಸಿನಿಮಾ: ದಿ ಆರ್ಚೀಸ್ ಒಂದು ಮ್ಯೂಸಿಕಲ್​ ಕಾಮಿಡಿ ಸಿನಿಮಾ. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೊಸಬರ ಎಂಟ್ರಿ ಆಗುತ್ತಿದೆ. ಪ್ರಮುಖ ಪಾತ್ರ ವಹಿಸಿರುವವರ ಪೈಕಿ ಹೆಚ್ಚಿನವರು ಬಾಲಿವುಡ್​​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು. ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರ ಕೇವಲ ಓರ್ವ ನಟ ನಟಿ ಮೇಲೆ ಕೇಂದ್ರೀಕೃತವಾಗಿಲ್ಲ. ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ವರ್ಷದ ಡಿಸೆಂಬರ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ.

ಇದನ್ನೂ ಓದಿ: ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾಗೆ ಸಿಕ್ತು ರಿಲಯನ್ಸ್​​ ಎಂಟರ್​ ಟೈನ್​ ಮೆಂಟ್​ ಸಾಥ್

ಇತ್ತೀಚಿನ ಸಂದರ್ಶನವೊಂದರಲ್ಲಿ ಸುಹಾನಾ ಖಾನ್​ ತಮ್ಮ ಪೋಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ ಮಾರ್ಗದರ್ಶಕರು ಎಂದು ಹೇಳಿಕೊಂಡಿದ್ದರು. ನನ್ನ ಪೋಷಕರು ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ನಮ್ಮ ಕುಟುಂಬದ ಎಲ್ಲರೂ ಪರಸ್ಪರ ಬೆಂಬಲಿಸುತ್ತೇವೆ. ಈ ಬೆಂಬಲ ಹೀಗೆ ಮುಂದುವರಿಯುತ್ತದೆ ಎಂದು ತಿಳಿಸಿದ್ದರು. ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರದ ಮೇಲೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದು, ಸಿನಿಮಾ ಯಾವ ಮಟ್ಟಿಗೆ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಜಾನ್ವಿ, ಜೂ.ಎನ್‌ಟಿಆರ್ ಅಭಿನಯದ 'ದೇವರ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.