ETV Bharat / entertainment

ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಶಾರುಖ್ ಖಾನ್​​ ಪುತ್ರಿ: ಜಾಲತಾಣದಲ್ಲಿ ಚರ್ಚೆ ಶುರು - ಮೆಬಿಲಿನ್ ಅಂಬಾಸಿಡರ್ ಸುಹಾನಾ ಖಾನ್

ಮುಂಬೈನಲ್ಲಿ ನಡೆದ ಫ್ಯಾಷನ್​ ಈವೆಂಟ್​ ಒಂದರಲ್ಲಿ ಸುಹಾನಾ ಖಾನ್ ಅವರನ್ನು ಸೌಂದರ್ಯವರ್ಧಕದ ಬ್ರ್ಯಾಂಡ್ ಅಂಬಾಸಿಡರ್ ಎಂದು ಘೋಷಿಸಲಾಯಿತು. ಖಾನ್​ ಕುಟುಂಬ ಮತ್ತು ಸುಹಾನಾ ಅವರ ಅಭಿಮಾನಿಗಳು ಈ ಬಗ್ಗೆ ಉತ್ಸುಕರಾಗಿದ್ದಾರೆ. ಕೆಲ ನೆಟಿಜನ್‌ಗಳು ಅಸಮಧಾನ ಹೊರಹಾಕಿದ್ದಾರೆ.

suhan becomes face of maybelline
ಶಾರುಖ್ ಖಾನ್ ಮಗಳು ಸುಹಾನಾ ಖಾನ್
author img

By

Published : Apr 12, 2023, 1:13 PM IST

ಮನೋರಂಜನಾ ಕ್ಷೇತ್ರದಲ್ಲಿ ಸಾಧನೆಗೈದ ಅನೇಕರು ತಮ್ಮ ಮಕ್ಕಳನ್ನು ಅದೇ ಉದ್ಯಮದಲ್ಲಿ ಮುಂದುವರಿಸಲು ಯತ್ನಿಸುತ್ತಾರೆ. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಬಾಲಿವುಡ್​ನಲ್ಲಿ ಈ ಸಂಸ್ಕೃತಿಯನ್ನು ಕಾಣಬಹುದು. ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​​ ಖಾನ್​ ಪುತ್ರಿ ಸಹ ಈ ವಲಯದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಬಾಲಿವುಡ್ ಬಹುಬೇಡಿಕೆ ನಟ ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ ದಂಪತಿ ಪುತ್ರಿ ಸುಹಾನಾ ಖಾನ್ ಇನ್ನೂ ಸಿನಿ ಜಗತ್ತಿಗೆ ಎಂಟ್ರಿ ಆಗಿಲ್ಲ. ಅದಕ್ಕೂ ಮೊದಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಸೌಂದರ್ಯ ವರ್ಧಕ ಬ್ರ್ಯಾಂಡ್‌ನ ಅಂಬಾಸಿಡರ್​​ ಆಗಿ ಸಹಿ ಮಾಡಿದ್ದಾರೆ. ಇವರು ಮೆಬಿಲಿನ್​ (Maybelline) ಬ್ರ್ಯಾಂಡ್​ ಅಂಬಾಸಿಡರ್ ಎಂಬ ವಿಷಯ ಗೊತ್ತಾದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾರುಖ್ ಖಾನ್ ಅವರ ಮುದ್ದು ಮಗಳು ಸುಹಾನಾ ಖಾನ್ ವೃತ್ತಿ ಜೀವನ ವಿಚಾರವಾಗಿ ಮಾಧ್ಯಮದಲ್ಲಿ ಕಾಣಿಸಿಕೊಂಡ ಮೊದಲ ವಿಷಯ ಇದಾಗಿದೆ. ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಆಯ್ಕೆಯಾದ ಬಗ್ಗೆ ವೇದಿಕೆಯೊಂದರಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಪಾಪರಾಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಹೊರಬಿದ್ದ ಕೂಡಲೇ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕೆಲ ನೆಟ್ಟಿಗರು ಸ್ಟಾರ್ ಕಿಡ್ ಅನ್ನು ಟ್ರೋಲ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆಯಾ ಎಂಬ ಚರ್ಚೆ ಶುರು ಹಚ್ಚಿಕೊಂಡಿದ್ದಾರೆ.

ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಲು ಈವರೆಗೆ ಸುಹಾನಾ ಖಾನ್​ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಂದೆ ಶಾರುಖ್ ಖಾನ್​​ ಅವರೇ ಬ್ರ್ಯಾಂಡ್​ ಅಂಬಾಸಿಡರ್​​ ಆದಂತೆ ತೋರುತ್ತಿದೆ. ಈವರೆಗೆ ಯಾವುದೇ ಸಿನಿಮಾ ಆಥವಾ ಆಲ್ಬಂ ಸಾಂಗ್​ ರಿಲೀಸ್​ ಮಾಡಿಲ್ಲ. ಇದ್ದಕ್ಕಿದ್ದಂತೆ ಸೌಂದರ್ಯವರ್ಧಕ ಉತ್ಪನ್ನದ ರಾಯಭಾರಿ ಆದದ್ದು ಹೇಗೆ? ಇದು ಪಕ್ಷಪಾತವಾಗಿದೆ ಎಂಬ ಚರ್ಚೆಗೆ ವೇದಿಕೆ ಸೃಷ್ಟಿಮಾಡಿಕೊಟ್ಟಂತಿದೆ.

ಇದನ್ನೂ ಓದಿ: ವಯಸ್ಸಿನ ಮಿತಿ ಮರೆಯಬೇಡಿ; ಮಲೈಕಾ ಫೋಟೋಗೆ ನೆಟ್ಟಿಗರ ಕೆಂಗಣ್ಣು

'ಬಾಲಿವುಡ್‌ನ ಸಮಸ್ಯೆ ಇದು, ಸ್ಟಾರ್‌ಕಿಡ್ಸ್ ಯಾವುದೇ ಚಲನಚಿತ್ರಗಳನ್ನು ಮಾಡದೇ ಇಂತಹ ಡೀಲ್‌ಗಳನ್ನು ಪಡೆಯುತ್ತಾರೆ, ಅವರು ಜೀವನದಲ್ಲಿ ಏನನ್ನೂ ಸಾಧಿಸಿಲ್ಲ, ಆದರೆ ಮೆಬಿಲಿನ್ ಬ್ರ್ಯಾಂಡ್​ ಅಂಬಾಸಿಡರ್ ಆದರು' ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. 'ಅವರ ಐಡೆಂಟಿಟಿ ಏನು?, ಕೇವಲ ನಟ ಶಾರುಖ್ ಖಾನ್ ಅವರ ಮಗಳು, ದೊಡ್ಡ ಸಾಧನೆಯೇನಾದರು ಮಾಡಿದ್ದಾರೆಯೇ?,' ಎಂದು ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್​ನಲ್ಲಿ ನಟರಾಕ್ಷಸ.. ವೇದಿಕೆಯಲ್ಲಿ ಕಣ್ಣೀರಿಟ್ಟ ಡಾಲಿ

ನ್ಯೂಯಾರ್ಕ್‌ನಲ್ಲಿ ನಟನೆಯನ್ನು ಕಲಿತಿರುವ ಸುಹಾನಾ ಖಾನ್​ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಯಿದೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನ ಸುಹಾನಾ ಅವರನ್ನು ಇಂತಹ ದೊಡ್ಡ ಸ್ಥಾನದಲ್ಲಿರಿಸಿರುವ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ಆದ್ರೆ ಅವರ ಅಭಿಮಾನಿಗಳು ಅವರ ಚೊಚ್ಚಲ ಸಿನಿಮಾ ಲಾಂಚ್ ಬಗ್ಗೆ ಉತ್ಸುಕರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.