ETV Bharat / entertainment

ಇಯರ್ ಎಂಡ್​ ಪಾರ್ಟಿಗೆ ಶುಗರ್ ಫ್ಯಾಕ್ಟರಿಯ ಹಾಡು ರೆಡಿ - ETV Bharath Kannada

ಚಂದನ್ ಶೆಟ್ಟಿ ಬರೆದು ಹಾಡಿರುವ ಶುಗರ್ ಫ್ಯಾಕ್ಟರಿ ಚಿತ್ರದ ಪಾರ್ಟಿ ಹಾಡು ಬಿಡುಗಡೆಯಾಗಿದ್ದು, ವರ್ಷಾಂತ್ಯದ ಸಂಭ್ರಮಕ್ಕೆ ಕುಣಿದು ಕುಪ್ಪಳಿಸಲು ರೆಡಿ ಇರಿ..

sugar factory movie party song release
ಇಯರ್ ಎಂಡ್​ ಪಾರ್ಟಿಗೆ ಶುಗರ್ ಫ್ಯಾಕ್ಟರಿಯ ಹಾಡು ರೆಡಿ
author img

By

Published : Dec 6, 2022, 9:00 AM IST

ಲವ್ ಮಾಕ್​ಟೈಲ್ ಚಿತ್ರದ ಭರ್ಜರಿ ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಟೈಟಲ್ ನಿಂದಲೇ ಸ್ಯಾಂಡಲ್ ವುಡ್​ನಲ್ಲಿ ಕ್ರೇಜ್ ಹುಟ್ಟಿಸಿರೋ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತೆ ಲವರ್ ಬಾಯ್ ಆಗಿ ಸಿನಿಮಾ ಪ್ರೇಮಿಗಳ ಮುಂದೆ ಬರ್ತಾ ಇದ್ದಾರೆ.

ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಮಂತ್ರಿಮಾಲ್​ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಸಿನಿ ಪ್ರೇಕ್ಷಕರ ಕೈಯಲ್ಲೇ ಹಾಡು ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಸಂಗ್​​ಗೆ ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ. ರುಚಿರ ವೈದ್ಯ ಇಂಗ್ಲಿಷ್​ ರ್ಯಾಪ್​ಗೆ ಧ್ವನಿಯಾಗಿದ್ದಾರೆ. ಕಬೀರ್ ರಫಿ ಸಂಗೀತ ಇದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ನಟಿ ಅಮೂಲ್ಯ ಅವರ ಪತಿ ಜಗದೀಶ್ ಹಾಗೂ ರಾಜಕೀಯ ಮುಖಂಡರಾದ ರಾಮಚಂದ್ರಪ್ಪ ಅವರು ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

sugar factory movie party song release
ಇಯರ್ ಎಂಡ್​ ಪಾರ್ಟಿಗೆ ಶುಗರ್ ಫ್ಯಾಕ್ಟರಿಯ ಹಾಡು ರೆಡಿ

ಈ ಹಾಡಿನ ಬಗ್ಗೆ ಮಾತನಾಡಿದ ನಾಯಕ ಡಾರ್ಲಿಂಗ್ ಕೃಷ್ಣ, ಇದು ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ ಎನ್ನಬಹುದು. ನಿಜ ಜೀವನದಲ್ಲಿ ಪಾರ್ಟಿ ಮಾಡದ ನನ್ನ ಹತ್ತಿರ ಈ ಚಿತ್ರದಲ್ಲಿ ಭರ್ಜರಿ ಪಾರ್ಟಿ ಮಾಡಿಸಿ ಸಖತ್ತಾಗಿ ಕುಣಿಸಿದ್ದಾರೆ. ಚಂದನ್ ಶೆಟ್ಟಿ ಅವರ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

  • " class="align-text-top noRightClick twitterSection" data="">

ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ, ಶಿಲ್ಪ ಶೆಟ್ಟಿ ಮತ್ತು ಚಿತ್ರದಲ್ಲಿ ನಟಿಸಿರುವ ಶಶಿ ಹಾಗೂ ಮಹಾಂತೇಶ್ ಶುಗರ್ ಫ್ಯಾಕ್ಟರಿ ಬಗ್ಗೆ ಮಾತನಾಡಿದರು. ಚಿತ್ರ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಶುಗರ್ ಫ್ಯಾಕ್ಟರಿ ಚಿತ್ರದ ನಿರ್ದೇಶಕ ದೀಪಕ್ ಅರಸ್ ಮಾತನಾಡಿ, ಶುಗರ್ ಫ್ಯಾಕ್ಟರಿ ಈಗಿನ‌ ಜನರೇಶನ್​ಗೆ ಹೇಳಿಮಾಡಿಸಿದ ಕಥೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಚಿತ್ರ ಮತ್ತಷ್ಟು ಹತ್ತಿರವಾಗಲಿದೆ. ನಾವು ಆರಂಭದಲ್ಲಿ ಅಂದುಕೊಂಡಿದ್ದೇ ಬೇರೆ. ಈಗ ಆಗಿರುವ ಬಜೆಟ್ ಬೇರೆ. ನನ್ನ ಈ ಕನಸನ್ನು ನನಸು ಮಾಡಿದ ನಿರ್ಮಾಪಕ ಗಿರೀಶ್​ಗೆ ಧನ್ಯವಾದ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಇದನ್ನೂ ಓದಿ: ಮತ್ತೆ ಬಣ್ಣ ಹಚ್ಚಿದ್ದಾರೆ ಡೈಲಾಗ್ ಕಿಂಗ್ ಸಾಯಿಕುಮಾರ್‌: 'ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ' ಅಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.